• Home
  • »
  • News
  • »
  • coronavirus-latest-news
  • »
  • ಭಾರತಕ್ಕೆ ಎರಡನೇ ಕೊರೋನಾ ತಳಿ ಕಾಲಿಟ್ಟಿದೆ ಹುಷಾರಾಗಿರಿ; ಡಾ. ಸೂರಜ್ ರೇವಣ್ಣ ಎಚ್ಚರಿಕೆ

ಭಾರತಕ್ಕೆ ಎರಡನೇ ಕೊರೋನಾ ತಳಿ ಕಾಲಿಟ್ಟಿದೆ ಹುಷಾರಾಗಿರಿ; ಡಾ. ಸೂರಜ್ ರೇವಣ್ಣ ಎಚ್ಚರಿಕೆ

ಡಾ. ಸೂರಜ್ ರೇವಣ್ಣ

ಡಾ. ಸೂರಜ್ ರೇವಣ್ಣ

Karnataka Coronavirus Updates: ಕೊರೋನಾದಲ್ಲಿ 400ಕ್ಕೂ ಹೆಚ್ಚು ತಳಿಗಳಿವೆ. ಆದರೆ ಈಗ ಭಾರತಕ್ಕೆ ಎರಡು ತಳಿಗಳು ಪ್ರವೇಶಿಸಿದ್ದು, ಈ ತಳಿಗಳು ಭಾರೀ ಅಪಾಯಕಾರಿಯಾಗಿದೆ. ಆದರೆ ಜನರು ಭಯ ಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಆಗಿಂದಾಗ್ಗೆ ಕೈ ತೊಳೆದುಕೊಂಡು ಶುಚಿತ್ವ ಕಾಪಾಡಬೇಕು ಎಂದು ಸಲಹೆ ನೀಡಿದರು.

ಮುಂದೆ ಓದಿ ...
  • Share this:

ಹಾಸನ ಹೊಸದಾಗಿ ಭಾರತಕ್ಕೆ ಆಗಮಿಸಿರುವ ಕೊರೋನಾ ಎರಡನೇ ತಳಿ ಬಗ್ಗೆ ವೈದ್ಯ ಸೂರಜ್ ರೇವಣ್ಣ ಎಚ್ಚರಿಕೆ ನೀಡಿದ್ದು, ಸುರಕ್ಷತಾ ಕ್ರಮ ಅನುಸರಿಸುವಂತೆ ತಿಳಿಸಿದ್ದಾರೆ. ಹಾಸನ ಜಿಲ್ಲೆಯ, ಚನ್ನರಾಯಪಟ್ಟಣದಲ್ಲಿ ಆಟೋ ಚಾಲಕರು, ಸವಿತಾ ಸಮಾಜದವರು ಸೇರಿದಂತೆ ಸಾವಿರಾರು ಜನರಿಗೆ ಫುಡ್ ಕಿಟ್ ಹಂಚಿದ ನಂತರ ಮಾತನಾಡಿದ ಅವರು, ಕೊರೋನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜನ ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ನಾನೊಬ್ಬ ವೈದ್ಯನಾಗಿ ಹೇಳುತ್ತಿದ್ದೇನೆ. ಕೊರೋನಾ ವೈರಸ್ ಬಗ್ಗೆ ಭಯ ಬೇಡ. ಕೊರೋನಾದ ಎರಡೇ ಎರಡು ತಳಿಗಳ ಬಗ್ಗೆ ಈಗ ಯೋಚನೆ ಮಾಡಬೇಕು ಎಂದರು.


ಈ ಎರಡು ತಳಿಗಳು ಮನುಷ್ಯನ ಶ್ವಾಸಕೋಶಕ್ಕೆ ಅತೀ ಹೆಚ್ಚು ಹಾನಿ ಮಾಡುತ್ತಿವೆ. ನಾವು ಈಗ ಗ್ರೀನ್‌ಜೋನ್‌ನಲ್ಲಿ ಇದ್ದರೂ ಶಾಶ್ವತವಾಗಿ ಗ್ರೀನ್‌ಜೋನ್ ನಲ್ಲಿ ಇರುತ್ತೇವೆ ಎಂದು ಹೇಳಲು ಆಗಲ್ಲ. ಈಗ ಎರಡನೇ ರೀತಿಯ ಕೊರೋನಾ ತಳಿ ಭಾರತಕ್ಕೆ ಎಂಟ್ರಿಯಾಗಿದೆ.  ಮೊದಲು ಬಂದ ಕೊರೋನಾ ಸೋಂಕಿಗೂ ಈಗ ಎಂಟ್ರಿಯಾಗಿರುವ ಕೊರೋನಾ ತಳಿಗೂ ವ್ಯತ್ಯಾಸವಿದೆ. ಭಾರತಕ್ಕೆಇಪ್ಪತ್ತು ದಿನದ ಹಿಂದೆ ಹೊಸ ಎರಡನೇ ತಳಿಯೂ ಬಂದಿದ್ದು, ಜನರು ಎಚ್ಚರಿಕೆಯಿಂದ ಇದ್ದು, ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಸೂರಜ್ ರೇವಣ್ಣ ತಿಳಿಸಿದರು.


ಕೊರೋನಾದಲ್ಲಿ 400ಕ್ಕೂ ಹೆಚ್ಚು ತಳಿಗಳಿವೆ. ಆದರೆ ಈಗ ಭಾರತಕ್ಕೆ ಎರಡು ತಳಿಗಳು ಪ್ರವೇಶಿಸಿದ್ದು, ಈ ತಳಿಗಳು ಭಾರೀ ಅಪಾಯಕಾರಿಯಾಗಿದೆ. ಆದರೆ ಜನರು ಭಯ ಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಆಗಿಂದಾಗ್ಗೆ ಕೈ ತೊಳೆದುಕೊಂಡು ಶುಚಿತ್ವ ಕಾಪಾಡಬೇಕು ಎಂದು ಸಲಹೆ ನೀಡಿದರು.


ಇದನ್ನು ಓದಿ: ಸಿಎಂಗಳೊಂದಿಗೆ ಪಿಎಂ ವಿಡಿಯೋ ಕಾನ್ಫರೆನ್ಸ್: ಬಿಕ್ಕಟ್ಟು ಗ್ರಾಮವನ್ನು ತಲುಪಬಾರದು; ಮೋದಿ


ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಡಾ.ಸೂರಜ್ ರೇವಣ್ಣ ಎಲ್ಲಾ ವರ್ಗದ ಜನರಿಗೂ ಫುಡ್ ಕಿಟ್ ವಿತರಣೆ ಮಾಡುತ್ತಿದ್ದಾರೆ. ಬಡವರು, ನಿರ್ಗತಿಕರು, ಶೋಷಿತ ಸಮುದಾಯದ ಜನರಿಗೆ ಫುಡ್ ಕಿಟ್ ವಿತರಿಸುತ್ತಿದ್ದು, ಹಸಿದವರಿಗೆ ಅನ್ನ ನೀಡುವ ಕಾರ್ಯ ಮಾಡುತ್ತಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಅಗ್ರಹಾರ, ದಂಡಿಗನಹಳ್ಳಿ, ಮತ್ತು ಕುಂದೂರು ಮಠದಲ್ಲಿ ಒಂದೇ ದಿನದಲ್ಲಿ 2500 ಮಂದಿಗೆ ಫುಡ್ ಕಿಟ್ ವಿತರಣೆ ಮಾಡಿದರು. ಲಾಕ್ ಡೌನ್ ಆದಾಗಿನಿಂದ ಈವರೆಗೂ ಪ್ರತಿನಿತ್ಯ ಎಲ್ಲಾ ಸಮುದಾಯದ ಸಾವಿರಾರು ಮಂದಿಗೆ ಫುಡ್ ಕಿಟ್ ವಿತರಿಸುತ್ತಿದ್ದಾರೆ.

Published by:HR Ramesh
First published: