ಕರ್ನಾಟಕದಲ್ಲಿ ಕೊರೋನಾ ವ್ಯಾಪಕಕ್ಕೆ ತಬ್ಲಿಘಿ, ಅಜ್ಮೀರ್ ಯಾತ್ರಿಗಳು ಕಾರಣ ; ತಬ್ಲಿಘಿ ಮತ್ತು ಬುದ್ಧಿಜೀವಿಗಳ ವಿರುದ್ಧ ರವಿಕುಮಾರ್ ಆಕ್ರೋಶ

Karnataka Coronavirus Updates: ತಬ್ಲಿಘಿಗಳು ದೇಶದ ಜವಾಬ್ದಾರಿ ಪ್ರಜೆಗಳಾಗಿ ನಡೆದುಕೊಳ್ಳುತ್ತಿಲ್ಲ ಯಾಕೆ, ತಪ್ಪು ಮಾಡಿದಾಗ ತಿದ್ದಿ ಹೇಳಬೇಕು. ಆದರೆ, ಯಾವುದೇ ನಾಯಕರು ಈ ಕಾರ್ಯದಲ್ಲಿ ತೊಡಗಿಲ್ಲ.

ವಿಧಾನ ಪರಿಷತ್ ಸದಸ್ಯ ರವಿಕುಮಾರ್​

ವಿಧಾನ ಪರಿಷತ್ ಸದಸ್ಯ ರವಿಕುಮಾರ್​

  • Share this:
ಬೆಂಗಳೂರು(ಮೇ.11): ಕರ್ನಾಟಕದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ‌. ಇದಕ್ಕೆ ಬಹಳ ಮುಖ್ಯ ಕಾರಣ ದೆಹಲಿ ತಬ್ಲಿಘಿ‌ ಮತ್ತು ಅಜ್ಮೀರ್ ನಲ್ಲಿ ನಡೆದ ಸಭೆ ಎಂದು ತಬ್ಲಿಘಿಗಳು ಮತ್ತು ಬುದ್ಧಿಜೀವಿಗಳ ವಿರುದ್ಧ ವಿಧಾನ ಪರಿಷತ್​ ಸದಸ್ಯ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊರೋನಾ ಹರಡಲು ತಬ್ಲಿಘಿಗಳು ಮತ್ತು ಅಜ್ಮೀರ್ ಗೆ ಪ್ರಯಾಣಿಸಿದವರೆ ನೇರ ಹೊಣೆಯಾಗಿದ್ದು, ತಬ್ಲಿಘಿಗಳು ಹಾಗೂ ಬುದ್ಧಿಜೀವಿಗಳ ಮುಂದೆ 13 ಪ್ರಶ್ನೆಗಳನ್ನು ರವಿಕುಮಾರ್ ಅವರು ಇಟ್ಟಿದ್ದಾರೆ.

ತಬ್ಲಿಘಿಗಳು ದೇಶದ ಜವಾಬ್ದಾರಿ ಪ್ರಜೆಗಳಾಗಿ ನಡೆದುಕೊಳ್ಳುತ್ತಿಲ್ಲ ಯಾಕೆ, ತಪ್ಪು ಮಾಡಿದಾಗ ತಿದ್ದಿ ಹೇಳಬೇಕು. ಆದರೆ, ಯಾವುದೇ ನಾಯಕರು ಈ ಕಾರ್ಯದಲ್ಲಿ ತೊಡಗಿಲ್ಲ. ತಬ್ಲಿಘಿ ನಾಯಕ ಮೌಲಾನಾ ಸಾದ್ ಕೊರೋನಾ ತಪಾಸಣೆಗೆ ಹಿಂದೇಟು ಹಾಕಿದ್ದು. ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ, ಉಗುಳುವುದು, ಅವಮಾನಿಸುವುದು ಸರಿಯೇ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ : ರಾಜ್ಯದಲ್ಲಿ ಕೋವಿಡ್​​​-19 ಪ್ರಕರಣ: ಇಂದು 10 ಮಂದಿಗೆ ಸೋಂಕು; ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆ

ಪಾದರಾಯನಪುರದ ಪುಂಡರು, ಟಿಪ್ಪುನಗರ, ಕಲಬುರಗಿಯಲ್ಲಿ ಹಬ್ಬಿದೆ. ಈ ಬಗ್ಗೆ ನಾಯಕರು ಏಕೆ ಕೈಕಟ್ಟಿ ಕುಳಿತಿದ್ದಾರೆ. ಮುಖ್ಯಮಂತ್ರಿಗಳು ಸಹ ಎರಡು ಬಾರಿ ಸಭೆ ನಡೆಸಿದರು ಅವರು ಸುಮ್ಮನೆ ಇದ್ದಾರೆ. ಇಷ್ಟೆಲ್ಲಾ ಆದರು ತಬ್ಲಿಘಿಗಳು, ಪ್ರಗತಿಪರರು ಬಾಯಿ ಮುಚ್ಚಿಕೊಂಡಿರುವುದು ಯಾಕೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
First published: