HOME » NEWS » Coronavirus-latest-news » KARNATAKA CORONAVIRUS UPDATES KARNATAKA HAS REPORTED 45 NEW COVID 19 CASES IN THE STATE RMD

Karnataka Coronavirus Updates: ರಾಜ್ಯದಲ್ಲಿಂದು 45 ಹೊಸ ಕೊರೋನಾ ಪ್ರಕರಣ; ರೆಡ್​ ಜೋನ್​​ನತ್ತ ಉತ್ತರ ಕನ್ನಡ

Coronavirus Cases in Karnataka: ಇನ್ನು, ಮೈಸೂರು ಕೆಲ ದಿನಗಳ ಹಿಂದೆ ಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗಿಹೋಗಿತ್ತು. ಆದರೆ ಇಲ್ಲಿ, ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಹೊಸ ಪ್ರಕರಣಗಳು ದಾಖಲಾಗಿಲ್ಲ.

news18-kannada
Updated:May 8, 2020, 12:56 PM IST
Karnataka Coronavirus Updates: ರಾಜ್ಯದಲ್ಲಿಂದು 45 ಹೊಸ ಕೊರೋನಾ ಪ್ರಕರಣ; ರೆಡ್​ ಜೋನ್​​ನತ್ತ ಉತ್ತರ ಕನ್ನಡ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 8): ಕರ್ನಾಟಕದಲ್ಲಿ ಕೊರೋನಾ ವೈರಸ್​  ಮತ್ತೆ ಉಲ್ಬಣಿಸುತ್ತಿದೆ. ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 45 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 750ಕ್ಕೆ ಏರಿಕೆ ಆಗಿದೆ.

ಇಷ್ಟು ದಿನ ರಾಜ್ಯದಲ್ಲಿ ದಿನಕ್ಕೆ 8-10 ಪ್ರಕರಣಗಳು ಮಾತ್ರ ದಾಖಲಾಗುತ್ತಿದ್ದವು. ಆದರೆ, ಈಗ ಲಾಕ್​ಡೌನ್​ ನಿಯಮ ಸಡಿಲಿಕೆ ಮಾಡಿದ ನಂತರ ಕೊರೋನಾ ಪ್ರಕರಣ ಹೆಚ್ಚುತ್ತಿದೆ. ನಿನ್ನೆ ಸಂಜೆ ಐದು ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯವರೆಗೆ 45 ಕೇಸ್​ಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಬೆಂಗಳೂರಲ್ಲಿ 7, ಬೆಳಗಾವಿ 11, ದಾವಣಗೆರೆ 14, ಉತ್ತರ ಕನ್ನಡ 12 ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಮೊದಲು ಉತ್ತರ ಕನ್ನಡವನ್ನು ಆರೇಂಜ್​ ಜೋನ್​ನಲ್ಲಿ ಇಡಲಾಗಿತ್ತು. ಆದರೆ, ಈಗ ಒಂದೇ ಬಾರಿ ಪ್ರಕರಣಗಳು ಹೆಚ್ಚಿರುವುದರಿಂದ ಮತ್ತೆ ಜಿಲ್ಲೆಯನ್ನು ಕೆಂಪು ಜೋನ್​ಗೆ ಒಳಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತದಲ್ಲಿ 3.3 ಸಾವಿರ ಹೊಸ ಕೊರೋನಾ ಪ್ರಕರಣ ಪತ್ತೆ; 56 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ

ಇನ್ನು, ಮೈಸೂರು ಕೆಲ ದಿನಗಳ ಹಿಂದೆ ಕೊರೋನಾ ಹಾಟ್​ಸ್ಪಾಟ್ ಆಗಿ ಬದಲಾಗಿಹೋಗಿತ್ತು. ಆದರೆ ಇಲ್ಲಿ, ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಹೊಸ ಪ್ರಕರಣಗಳು ದಾಖಲಾಗಿಲ್ಲ.

ಇನ್ನು, ಭಾರತದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ನಿತ್ಯ 3 ಸಾವಿರಕ್ಕೂ ಅಧಿಕ ಪಾಸಿಟಿವ್​ ಕೇಸ್​ಗಳು ಪತ್ತೆಯಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ಬರೋಬ್ಬರಿ 3,306. ಈ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅರ್ಧ 56,351 ಆಗಿದೆ. ನಿನ್ನೆ ಒಂದೇ ದಿನ 102 ಸಾವು ಸಂಭವಿಸಿದೆ. ಈ ಮೂಲಕ ಸಾವಿನ ಸಂಖ್ಯೆ 1,899ಕ್ಕೆ ಏರಿಕೆ ಆಗಿದೆ. ಹೀಗಾಗಿ, ಭಾರತದಲ್ಲಿ ಪರಿಸ್ಥಿತಿ ನಿಧಾನವಾಗಿ ಕೈ ಮೀರುತ್ತಿರುವ ಲಕ್ಷಣ ಗೋಚರವಾಗುತ್ತಿದೆ.
First published: May 8, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories