ಯಾದಗಿರಿಯಲ್ಲಿ ಕೊರೋನಾ ಕಂಟಕ; ಸಾವಿರದ ಗಡಿ ತಲುಪಿದ ಸೋಂಕಿತರ ಸಂಖ್ಯೆ

ಯಾದಗಿರಿಯಲ್ಲಿ ಇಲ್ಲಿಯವರೆಗೆ 970 ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನೂ 1046 ಸ್ಯಾಂಪಲ್‌ ವರದಿ ಬರುವುದು ಬಾಕಿ ಇದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಒಂದು ಸಾವಿರದ ಗಡಿ ದಾಟುವ ಸಾಧ್ಯತೆ ಇದೆ.

news18-kannada
Updated:July 4, 2020, 3:48 PM IST
ಯಾದಗಿರಿಯಲ್ಲಿ ಕೊರೋನಾ ಕಂಟಕ; ಸಾವಿರದ ಗಡಿ ತಲುಪಿದ ಸೋಂಕಿತರ ಸಂಖ್ಯೆ
ಪ್ರಾತಿನಿಧಿಕ ಚಿತ್ರ
  • Share this:
ಯಾದಗಿರಿ (ಜು. 4): ಮಹಾರಾಷ್ಟ್ರದ ವಲಸಿಗರಿಂದ ಯಾದಗಿರಿ ಜಿಲ್ಲೆಗೆ ಕೊರೋನಾ ಕಂಟಕ ಹೆಚ್ಚಾಗಿದೆ. ಇನ್ನೂ ಕೂಡ ಮಹಾರಾಷ್ಟ್ರ ವಲಸಿಗರು ಜಿಲ್ಲೆಗೆ ಆಗಮಿಸುತ್ತಿದ್ದು ಕೊರೋನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಯಾದಗಿರಿಗೆ ಮಹಾರಾಷ್ಟ್ರದ ಮುಂಬೈ, ಪುಣೆ, ಗೋವಾ, ಗುಜರಾತ್, ಬೆಂಗಳೂರು ಹಾಗೂ ಬೇರೆ ಭಾಗದ ಜಿಲ್ಲೆಗಳಿಂದ ವಲಸೆ ಕಾರ್ಮಿಕರು ಬಂದಿದ್ದು, ಬಹುತೇಕವಾಗಿ ಮಹಾರಾಷ್ಟ್ರ ವಲಸಿಗರಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳಕಿಗೆ ಬರುತ್ತಿವೆ.

ಮಹಾರಾಷ್ಟ್ರದ ವಲಸಿಗರಿಂದ ಯಾದಗಿರಿ ಜಿಲ್ಲೆಗೆ ಕೊರೊನಾ ಕಂಟಕ ಕಾಡುತ್ತಿದೆ. ಇದುವರೆಗೂ ಯಾದಗಿರಿಯಲ್ಲಿ 26,589 ಸ್ಯಾಂಪಲ್‌ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದು ಅದರಲ್ಲಿ 970 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. 24,573 ವರದಿ ನೆಗೆಟಿವ್ ಬಂದಿವೆ. 970 ಸೋಂಕಿತರಲ್ಲಿ 855 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಓರ್ವ ಮಹಿಳೆ ಮಾತ್ರ ಸೋಂಕಿನಿಂದ ಮೃತಪಟ್ಟಿದ್ದಾಳೆ. 114 ಸಕ್ರಿಯ ಪ್ರಕರಣಗಳಿವೆ. 8 ಸಾಂಸ್ಥಿಕ ಕ್ವಾರೆಂಟೈನ್ ಸೆಂಟರ್​ಗಳಲ್ಲಿ 523 ಜನರನ್ನು ಇರಿಸಲಾಗಿದೆ.

ಇದನ್ನೂ ಓದಿ: Bangalore Coronavirus: ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಕಿಮ್ಸ್​ ವೈದ್ಯೆಗೆ ಕೊರೋನಾ; ತನಿಖೆಗೆ ಆದೇಶಿಸಿದ ಸಚಿವ ಡಾ. ಕೆ. ಸುಧಾಕರ್

ಕೊರೋನಾಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಈಗಾಗಲೇ ಸೋಂಕಿತ ಪ್ರದೇಶವನ್ನು ಗುರುತಿಸಿ 88 ಕಂಟೈನ್​ಮೆಂಟ್ ಝೋನ್ ಮಾಡಿದೆ. ಕಂಟೈನ್ಮೆಂಟ್​ ಝೋನ್ ನಲ್ಲಿರುವವರಲ್ಲಿ ಕೂಡ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿ, ಕೊರೋನಾ ತಡೆಗೆ ಟ್ರೇಸಿಂಗ್, ಟ್ರಾಕಿಂಗ್, ಟೆಸ್ಟಿಂಗ್, ಟ್ರೀಟ್​ಮೆಂಟ್ ಈ ನಾಲ್ಕು ಆಧಾರದ ಮೇಲೆ ಮುಂಜಾಗ್ರತೆ ವಹಿಸಲಾಗಿದೆ. ಜನರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂದಿದ್ದಾರೆ.

ಯಾದಗಿರಿಯಲ್ಲಿ ಇಲ್ಲಿಯವರೆಗೆ 970 ಕೊರೋನಾ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನೂ 1046 ಸ್ಯಾಂಪಲ್‌ ವರದಿ ಬರುವುದು ಬಾಕಿ ಇದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಒಂದು ಸಾವಿರದ ಗಡಿ ದಾಟುವ ಸಾಧ್ಯತೆ ಇದೆ. ಜನರು ಕೊರೊನಾಗೆ ಭಯಗೊಳ್ಳದೆ ಎಚ್ಚರ ವಹಿಸಬೇಕಾಗಿದೆ.
Published by: Sushma Chakre
First published: July 4, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading