ಬೆಂಗಳೂರು: ಮಾರಕ ಕೊರೋನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಅಗತ್ಯವಿದ್ದವರು ಮಾತ್ರ ರಸ್ತೆಗಳಲ್ಲಿ ಓಡಾಡಲು ಸರ್ಕಾರ ಅನುಮತಿ ನೀಡಿದೆ, ಅದು ಪಾಸ್ ಪಡೆದು. ಒಂದು ವೇಳೆ ಸಾರ್ವಜನಿಕರು ಪಾಸ್ ಪಡೆಯದೆ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದರೆ ಅವರಿಗೆ ದಂಡ ಹಾಕಲಾಗುತ್ತಿದೆ. ಆದರೆ, ಈ ಕಾನೂನು ಕೇವಲ ಜನ ಸಾಮಾನ್ಯರಿಗೆ ಮಾತ್ರ. ರಾಜಕಾರಣಿಗಳ ಮಕ್ಕಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ!
ಇಲ್ಲೊಬ್ಬರು ಲಾಕ್ಡೌನ್ ಸಮಯದಲ್ಲಿ ರಸ್ತೆಯ ಮೇಲೆ ರಾಜಾರೋಷವಾಗಿ ಕುದುರೆ ಸವಾರಿ ಮಾಡಿದ್ದಾರೆ. ಆದರೂ ಅವರ ಮೇಲೆ ಯಾವುದೇ ಕ್ರಮವನ್ನು ಜರುಗಿಸಿಲ್ಲ. ಅಷ್ಟಕ್ಕೂ ಹೀಗೆ ರಸ್ತೆಯ ಮೇಲೆ ಸಿನಿಮಾ ಶೈಲಿಯಲ್ಲಿ ಕುದುರೆ ಮೇಲೆ ಸವಾರಿ ಮಾಡಿದವರು ಬೇರೆ ಯಾರೂ ಅಲ್ಲ, ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆಯ ಬಿಜೆಪಿ ಶಾಸಕ ನಿರಂಜನ ಕುಮಾರ್ ಅವರ ಮಗ ಭುವನ್ ಕುಮಾರ.
If your a common man in a red zone during lockdown, you have restrictions on using ur bike/car. If you are an MLAs son you can ride a horse on the Highway.
Watch Gundlupet @BJP4Karnataka MLA Niranjan Kumars son riding his horse around like a prince. #COVID19 #VIP #Priorities pic.twitter.com/1VeEjC62hN
— Deepak Bopanna (@dpkBopanna) May 12, 2020
ಕೊರೋನಾ ಸಂಕಷ್ಟ ಸಮಯದಲ್ಲಿ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಸರ್ಕಾರಗಳೇ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದೆ. ಆದರೆ, ಶಾಸಕರ ಮಕ್ಕಳೇ ಹೀಗೆ ಮಾಡಿದರೆ ಹೇಗೆ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನು ಓದಿ: ‘ಕರ್ನಾಟಕದ ಪಾಲಿನ 5,000 ಕೋಟಿ ರೂ. ಹಣ ನೀಡದೆ ಕನ್ನಡಿಗರಿಗೆ ದ್ರೋಹ ಬಗೆದ ನಿರ್ಮಲಾ ಸೀತರಾಮನ್’ - ಸಿದ್ದರಾಮಯ್ಯ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ