HOME » NEWS » Coronavirus-latest-news » KARNATAKA CORONAVIRUS KARNATAKA GOVERNMENT RELEASED NEW COVID 19 GUIDELINES TO KERALA MAHARASHTRA PUNJAB PASSENGERS SCT

Karnataka Coronavirus: ಕರ್ನಾಟಕದಲ್ಲಿ ಕೇರಳ, ಮಹಾರಾಷ್ಟ್ರ, ಪಂಜಾಬ್ ಪ್ರಯಾಣಿಕರಿಗಿರುವ ಕೊರೋನಾ ನಿಯಮ ತಮಿಳುನಾಡಿನವರಿಗೆ ಯಾಕಿಲ್ಲ?

Karnataka Covid-19 Cases: ಮಹಾರಾಷ್ಟ್ರ, ಕೇರಳ, ಪಂಜಾಬ್, ಚಂಡೀಗಢದಲ್ಲಿ ಕೊರೋನಾ ಸ್ಫೋಟವಾಗಿರುವುದರಿಂದ ಈ‌ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ತಮಿಳುನಾಡು ಪ್ರಯಾಣಿಕರಿಗೂ ಅನ್ವಯಗೊಳಿಸಲು ಒತ್ತಾಯ ಕೇಳಿಬಂದಿದೆ.

news18-kannada
Updated:March 23, 2021, 11:31 AM IST
Karnataka Coronavirus: ಕರ್ನಾಟಕದಲ್ಲಿ ಕೇರಳ, ಮಹಾರಾಷ್ಟ್ರ, ಪಂಜಾಬ್ ಪ್ರಯಾಣಿಕರಿಗಿರುವ ಕೊರೋನಾ ನಿಯಮ ತಮಿಳುನಾಡಿನವರಿಗೆ ಯಾಕಿಲ್ಲ?
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮಾ. 23): ಹೊರ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಆತಂಕ ಹೆಚ್ಚಾಗಿದೆ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಿರುವುದು ಕರ್ನಾಟಕಕ್ಕೆ ತಲೆನೋವಾಗಿದೆ. ಇದರ ನಡುವೆ ಕರ್ನಾಟಕ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಹೊರ ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವುದರಿಂದ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್, ಚಂಡೀಗಢದಲ್ಲಿ ಕೊರೋನಾ ಸ್ಫೋಟವಾಗಿರುವುದರಿಂದ ಈ‌ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈ ರಾಜ್ಯಗಳಿಂದ ಬರುವವರು ಪ್ರಯಾಣದ 72 ಗಂಟೆ ಒಳಗೆ ಟೆಸ್ಟ್ ಮಾಡುವುದು ಕಡ್ಡಾಯವಾಗಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಕೊರೋನಾ ಟೆಸ್ಟ್ ವರದಿ ಪರಿಶೀಲಿಸಿ ಒಳಗೆ ಬಿಡಲು ಸೂಚನೆ ನೀಡಲಾಗಿದೆ. ಗಡಿಭಾಗದಲ್ಲಿ ಜನರನ್ನು ಚೆಕ್ ಮಾಡಿ ಬಿಡಲು ಆದೇಶ ನೀಡಲಾಗಿದೆ.
ಇದನ್ನೂ ಓದಿ: ಬಾಂಬೆ ಟೀಂನವರ ಕ್ಷೇತ್ರಗಳೀಗ ಭೂಲೋಕದ ಸ್ವರ್ಗಗಳಾಗಿವೆಯೇ?; ಸಿಎಂಗೆ ಹೆಚ್​.ಡಿ ಕುಮಾರಸ್ವಾಮಿ ಪ್ರಶ್ನೆಆದರೆ, ತಮಿಳುನಾಡಿನಲ್ಲಿ ಪ್ರತಿದಿನ ಸಾವಿರಾರು ಕೊರೋನಾ ಪ್ರಕರಣ ದಾಖಲಾಗುತ್ತಿದೆ. ಆದರೆ, ಕೇರಳ, ಮಹಾರಾಷ್ಟ್ರ, ಪಂಜಾಬ್, ಚಂಡೀಗಡದಿಂದ ಬರುವ ಪ್ರಯಾಣಿಕರ ಮೇಲೆ ಮಾತ್ರ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪಕ್ಕದ ತಮಿಳುನಾಡಿನಿಂದ ಸಾವಿರಾರು ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲೂ ಅಲ್ಲಿನ ಸೋಂಕು ಸ್ಫೋಟವಾಗುವ ಭಯ ಉಂಟಾಗಿದೆ. ಹೀಗಾಗಿ, ತಮಿಳುನಾಡಿನಿಂದ ಬರುವ ಪ್ರಯಾಣಿಕರಿಗೂ ಟೆಸ್ಟ್ ಕಡ್ಡಾಯಗೊಳಿಸುವಂತೆ ಆರೋಗ್ಯ ಸಿಬ್ಬಂದಿಗಳು ಒತ್ತಾಯ ಮಾಡಿದ್ದಾರೆ.
Youtube Video

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆಯೂ ರಾಜ್ಯದಲ್ಲಿ 1,445 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದ ಕೊರೋನಾ ಸೋಂಕಿತರ ಸಂಖ್ಯೆ 9.71 ಲಕ್ಷಕ್ಕೇರಿದೆ. ನಿನ್ನೆ ಕೊರೋನಾದಿಂದ 10 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರೊಂದರಲ್ಲೇ 886 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
Published by: Sushma Chakre
First published: March 23, 2021, 8:17 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories