Hyderabad Coronavirus: ನೂರಾರು ಗಣ್ಯರೊಂದಿಗೆ ಪಾರ್ಟಿ ಮಾಡಿದ್ದ ಹೈದರಾಬಾದ್ ಖ್ಯಾತ​ ಜ್ಯುವೆಲರಿ ಮಳಿಗೆ ಮಾಲೀಕ ಕೊರೋನಾಗೆ ಬಲಿ!

Coronavirus India Updates: ಈ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಪ್ರಸಿದ್ಧ ಆಭರಣ ಅಂಗಡಿಯ ಮಾಲೀಕ ಕೂಡ ಶನಿವಾರ ಸಾವನ್ನಪ್ಪಿದ್ದಾರೆ. ಅವರಿಗೂ ಈ ಪಾರ್ಟಿ ಆಯೋಜಕರಿಂದ ಕೊರೋನಾ ಬಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೈದರಾಬಾದ್ (ಜು. 5): ಕೊರೋನಾದಿಂದಾಗಿ ಇಡೀ ದೇಶದ ಜನರು ಹೊರಗೆ ಬರಲು ಹೆದರುವಂತಾಗಿದೆ. ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ 6.5 ಲಕ್ಷಕ್ಕೆ ಏರಿಕೆಯಾಗಿದೆ. ಹೈದರಾಬಾದ್​ನಲ್ಲಿ ನಿನ್ನೆ ಅತ್ಯಧಿಕ ಪ್ರಮಾಣದ 1,600 ಕೊರೋನಾ ಕೇಸ್​ಗಳು ಪತ್ತೆಯಾಗಿವೆ. ಇದರ ಜೊತೆಗೆ, ಹೈದರಾಬಾದ್​ನ ಖ್ಯಾತ ಜ್ಯುವೆಲರಿ ಶಾಪ್ ಮಾಲೀಕ ಕೊರೋನಾದಿಂದ ಸಾವನ್ನಪ್ಪಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಹೈದರಾಬಾದ್​ನ ಹಿಮಾಯತ್​ನಗರದಲ್ಲಿ ಬಹುದೊಡ್ಡ ಆಭರಣ ಮಳಿಗೆಯನ್ನು ಹೊಂದಿರುವ ಮಾಲೀಕರೊಬ್ಬರು ಕೆಲವು ದಿನಗಳ ಹಿಂದೆ ಹೈದರಾಬಾದ್​ನ ಗಣ್ಯ ವ್ಯಕ್ತಿಗಳನ್ನು ಕರೆಸಿ, ಬರ್ತಡೇ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಜ್ಯುವೆಲರಿ ಅಸೋಸಿಯೇಷನ್ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಗಣ್ಯರು ಪಾಲ್ಗೊಂಡಿದ್ದರು. ಈ ಪಾರ್ಟಿ ಆಯೋಜಿಸಿದ್ದ ವ್ಯಕ್ತಿ ಶನಿವಾರ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜು. 9ರವರೆಗೆ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ...

ಇಂಡಿಯನ್ ಎಕ್ಸ್​ಪ್ರೆಸ್​ನ ವರದಿ ಪ್ರಕಾರ, ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಪ್ರಸಿದ್ಧ ಆಭರಣ ಅಂಗಡಿಯ ಮಾಲೀಕ ಕೂಡ ಶನಿವಾರ ಸಾವನ್ನಪ್ಪಿದ್ದಾರೆ. ಅವರಿಗೂ ಈ ಪಾರ್ಟಿಯನ್ನು ಆಯೋಜಿಸಿದ್ದ ಆಭರಣ ಮಳಿಗೆಯ ಮಾಲೀಕರಿಂದ ಕೊರೋನಾ ಬಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ವೈದ್ಯಕೀಯ ವರದಿ ಬಂದ ನಂತರ ಎಲ್ಲವೂ ಖಚಿತವಾಗಲಿದೆ.

ಪಾರ್ಟಿ ಆಯೋಜಿಸಿದ್ದ ಮತ್ತು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಜ್ಯುವೆಲರಿ ಶಾಪ್ ಮಾಲೀಕರು ಸಾವನ್ನಪ್ಪಿದ ಸುದ್ದಿ ಹೊಬೀಳುತ್ತಿದ್ದಂತೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರಿಗೆ ಆತಂಕ ಶುರುವಾಗಿದೆ. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಕೊರೋನಾ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಅವರೆಲ್ಲರೂ ಖಾಸಗಿ ಲ್ಯಾಬ್​ನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.
Published by:Sushma Chakre
First published: