ಇನ್ನೆರಡು ತಿಂಗಳಲ್ಲಿ ಕೊರೋನಾ ಹೆಚ್ಚಳ, ಆ ದೇವರೆ ನಮ್ಮನ್ನು ಕಾಪಾಡಬೇಕು; ಸಚಿವ ಶ್ರೀರಾಮುಲು

Karnataka Coronavirus Updates: ಕೊರೋನಾ ನಿಯಂತ್ರಣ ಯಾರ ಕೈಯಲ್ಲಿದೆ? ಆ ದೇವರೇ ನಮ್ಮನ್ನು ಕಾಪಾಡಬೇಕು. ಕೊರೋನಾ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ ಎನ್ನುವ ಮೂಲಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

  • Share this:
ಚಿತ್ರದುರ್ಗ(ಜು. 15): ರಾಜ್ಯದಲ್ಲಿ ಕೊರೋನಾ ಪ್ರಕರಣ ದಿನೇದಿನೆ ಹೆಚ್ಚಾಗುತ್ತಿದ್ದು, ನಮ್ಮನ್ನು ದೇವರೇ ಕಾಪಾಡಬೇಕು. ಕೊರೋನಾ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ ಅಂತ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ಸಚಿವರು, ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ  ಅವರು,  ಕೊರೋನಾ ನಿಯಂತ್ರಿಸಲು ಆಗುತ್ತಿಲ್ಲವಲ್ಲ ಎಂಬುದರ ಬಗ್ಗೆ ತಾವೇ ಅಸಹಾಯಕತೆ ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿ ಕೊರೋನಾ ಮಹಾಮಾರಿ‌ ದಿನೇ ದಿನೇ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಕೊರೋನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, ಕೊರೋನಾ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ ಎನ್ನುವ ಮೂಲಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು ದಾಖಲೆಯ 3 ಸಾವಿರದ ಗಡಿ ದಾಟಿದ ಕೊರೋನಾ ಕೇಸ್; ಬೆಂಗಳೂರೊಂದರಲ್ಲೇ 1,975 ಸೋಂಕಿತರು!

ಕೊರೋನಾ ನಿಯಂತ್ರಣ ಯಾರ ಕೈಯಲ್ಲಿದೆ? ಆ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಅಲ್ಲದೆ,  ಮುಂದಿನ ಎರಡು ತಿಂಗಳಲ್ಲಿ ಇಡೀ ವಿಶ್ವದಲ್ಲಿ  ಕೊರೋನಾ ಸೋಂಕು ಹೆಚ್ಚಾಗುತ್ತದೆ. ಹಾಗಾಗಿ, ಎಲ್ಲರೂ ಜಾಗೃತರಾಗಿ ಇರಬೇಕಿದೆ. ಇದು ಆಡಳಿತ ಪಕ್ಷ, ಶ್ರೀಮಂತರು ಬಡವರು ಎಂಬುದಾಗಿ ವಿಭಾಗ ಮಾಡಿ ಬರುತ್ತಿಲ್ಲ. ಮುಂದಿನ 2 ತಿಂಗಳಲ್ಲಿ ಜಾಸ್ತಿ ಆಗುವ ಅವಕಾಶ ನೂರಕ್ಕೆ ನೂರು ಪರ್ಸೆಂಟ್ ಇದೆ. ರಾಜ್ಯದಲ್ಲಿ ಸೋಂಕು ಹೆಚ್ಚಲು ಸರ್ಕಾರದ ನಿರ್ಲಕ್ಷ್ಯವೇ ಕಾರಣ, ಸಚಿವರ ಹೊಂದಾಣಿಕೆಯ ಕೊರತೆಯೇ ಕಾರಣ ಎಂಬ ಆರೋಪಗಳನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಈ ಆರೋಪಗಳೆಲ್ಲಾ ಸತ್ಯಕ್ಕೆ ದೂರವಾದ ಮಾತು ಎಂದಿದ್ದಾರೆ.

ಇದನ್ನೂ ಓದಿ: ‘ಕೋವಿಡ್​-19 ರೋಗಿಗಳಿಗೆ ಪ್ಲಾಸ್ಮಾ ದಾನ ಮಾಡಿದವರಿಗೆ 5 ಸಾವಿರ ಪ್ರೋತ್ಸಾಹ ಧನ‘ - ಸಚಿವ ಕೆ. ಸುಧಾಕರ್​​

ಇವತ್ತು ಕೊರೋನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ? ಪರಿಸ್ಥಿತಿ ಹೀಗೆ ಮುಂದುವರಿದರೆ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಸಚಿವ ಶ್ರೀರಾಮುಲು ತಮ್ಮ ಜವಾಬ್ದಾರಿಯನ್ನು ದೇವರ ಹೆಗಲಿಗೆ ಹಾಕಿದ್ದಾರೆ. ರಾಜ್ಯದ ಇಂತ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್​ನವರು ಇಂತಹ‌ ಸಮಯದಲ್ಲಿ ರಾಜಕಾರಣ ಮಾಡಬಾರದು. ನಾವೇನಾದರೂ ತಪ್ಪು ಮಾಡಿದ್ದರೆ ಪ್ರಾಯಶ್ಚಿತ್ತ ಅನುಭವಿಸಲು ಸಿದ್ದರಿದ್ದೇವೆ. ಇದು ಬಹಳ ಸಂದಿಗ್ದ ಸಂದರ್ಭ. ಇದರಲ್ಲಿ ರಾಜಕಾರಣಿಗಳು ಏನಾಗುತ್ತಾರೆ ಎಂಬುದಕ್ಕಿಂತ ಜನರನ್ನ ರಕ್ಷಣೆ ಮಾಡಬೇಕಿದೆ.

ಜನರಿಗೆ ಕೂಲಿ ಕೆಲಸ ಸಿಗದೆ ಮನೆಯಲ್ಲಿ ಕೂತಿದ್ದಾರೆ. ಇದನ್ನ ಹೆಚ್ಚು ಮಾತನಾಡಿದಷ್ಟು ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ, ಬಡವರ ಹಿತ ದೃಷ್ಟಿಯಿಂದ  ಯಾರೇ ಯಾವುದೇ ವಿಷಯ  ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಡಿ.ಕೆ. ಶಿವಕುಮಾರ್​ಗೆ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ ರಾಜ್ಯದ ಜನರ ಆರೋಗ್ಯದ ರಕ್ಷಣೆಯ ಜವಾಬ್ದಾರಿ ಹೊರಬೇಕಾದ ಆರೋಗ್ಯ ಇಲಾಖೆ ಸಚಿವ ಬಿ. ಶ್ರೀರಾಮುಲು ಕೊರೋನಾ ನಿಯಂತ್ರಣ ನಮ್ಮಿಂದ ಸಾಧ್ಯ ಇಲ್ಲ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
Published by:Sushma Chakre
First published: