HOME » NEWS » Coronavirus-latest-news » KARNATAKA CORONAVIRUS CASES RAISES TO 2533 IN UDUPI AND DAKSHINA KANNADA HIGHEST POSITIVE CASES SCT

ಕರ್ನಾಟಕದಲ್ಲಿ ಇಂದು 115 ಹೊಸ ಕೊರೋನಾ ಕೇಸ್; ಉಡುಪಿ, ದಕ್ಷಿಣ ಕನ್ನಡಕ್ಕೆ ಮಹಾ ಸಂಕಷ್ಟ

ರಾಜ್ಯದಲ್ಲಿ ಕೊರೋನಾದಿಂದ ಇದುವರೆಗೂ 47 ರೋಗಿಗಳು ಸಾವನ್ನಪ್ಪಿದ್ದಾರೆ. ಇದುವರೆಗೂ 834 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ. ಇಂದು ಉಡುಪಿಯಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ.

Sushma Chakre | news18-kannada
Updated:May 28, 2020, 7:09 PM IST
ಕರ್ನಾಟಕದಲ್ಲಿ ಇಂದು 115 ಹೊಸ ಕೊರೋನಾ ಕೇಸ್; ಉಡುಪಿ, ದಕ್ಷಿಣ ಕನ್ನಡಕ್ಕೆ ಮಹಾ ಸಂಕಷ್ಟ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ 28): ಕರ್ನಾಟಕದಲ್ಲಿ ಇಂದು 115 ಕೊರೋನಾ ಪಾಸಿಟಿವ್ ಕೇಸ್​ಗಳು ದಾಖಲಾಗಿವೆ. ಇಂದು 53 ಕೊರೋನಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 2,533ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾದಿಂದ ಇದುವರೆಗೂ 47 ರೋಗಿಗಳು ಸಾವನ್ನಪ್ಪಿದ್ದಾರೆ. ಇದುವರೆಗೂ 834 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ. 13 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಉಡುಪಿಯಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಉಡುಪಿಯಲ್ಲಿ 29, ದಕ್ಷಿಣ ಕನ್ನಡದಲ್ಲಿ 24, ಹಾಸನದಲ್ಲಿ 13, ಬೀದರ್​ನಲ್ಲಿ 12 ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಉಳಿದ ಜಿಲ್ಲೆಗಳಲ್ಲಿ 1-2 ಕೇಸುಗಳು ಪತ್ತೆಯಾಗಿವೆ.




ಕರ್ನಾಟದ 205 ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ 527 ಆಸ್ಪತ್ರೆಗಳನ್ನು ಕೊರೋನಾ ರೋಗಿಗಳಿಗೆಂದು ಸಜ್ಜುಗೊಳಿಸಲಾಗಿದೆ. ಇಂದು ಯಾವುದೇ ಕೊರೋನಾ ರೋಗಿಯ ಸಾವಿನ ಪ್ರಕರಣಗಳು ವರದಿಯಾಗಿಲ್ಲ.
Youtube Video
First published: May 28, 2020, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories