HOME » NEWS » Coronavirus-latest-news » KARNATAKA CORONAVIRUS BANGALORE MALLESHWARAM LADIES HOSTEL COVID OUTBREAK MANGALORE COVID 19 CASES SCT

Karnataka Coronavirus: ಬೆಂಗಳೂರಿನ ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಕೊರೋನಾ ಅಟ್ಟಹಾಸ; ಮಂಗಳೂರು ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೋನಾ!

Mangalore Coronavirus: ಬೆಂಗಳೂರಿನ ಮಲ್ಲೇಶ್ವರದ ಈಡಿಗರ ಹಾಸ್ಟೆಲ್​ನ 15 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಖಚಿತವಾಗಿದೆ. ಇದರ ಜೊತೆಗೆ ಮಂಗಳೂರಿನ ಶ್ರೀದೇವಿ ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೋನಾ ತಗುಲಿದ್ದು, ಕಾಲೇಜು ಮತ್ತು ಹಾಸ್ಟೆಲ್ ಅನ್ನು ಕಂಟೇನ್​ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 

news18-kannada
Updated:March 18, 2021, 12:31 PM IST
Karnataka Coronavirus: ಬೆಂಗಳೂರಿನ ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಕೊರೋನಾ ಅಟ್ಟಹಾಸ; ಮಂಗಳೂರು ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೋನಾ!
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮಾ. 18): ಬೆಂಗಳೂರಿನಲ್ಲಿ ಮತ್ತೊಂದು ಕ್ಲಸ್ಟರ್ ಮಾದರಿಯ ಕೊರೋನಾ ಕೇಸ್ ಪತ್ತೆಯಾಗಿದೆ. ಮಲ್ಲೇಶ್ವರದ ಲೇಡಿಸ್ ಹಾಸ್ಟೆಲ್​ನ 15 ವಿದ್ಯಾರ್ಥಿನಿಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಮಲ್ಲೇಶ್ವರದ ಈಡಿಗರ ಹಾಸ್ಟೆಲ್​ನ 15 ವಿದ್ಯಾರ್ಥಿನಿಯರಿಗೆ ಕೊರೋನಾ ಪಾಸಿಟಿವ್ ಖಚಿತವಾಗಿದೆ. ಇದರ ಜೊತೆಗೆ ಮಂಗಳೂರಿನಲ್ಲೂ ಕೊರೋನಾ ಅಟ್ಟಹಾಸ ಭಾರೀ ಹೆಚ್ಚಾಗಿದ್ದು, ಮಂಗಳೂರಿನ ನರ್ಸಿಂಗ್ ಕಾಲೇಜು ಮತ್ತು ಹಾಸ್ಟೆಲ್ ಅನ್ನು ಕಂಟೇನ್​ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. 

ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಮೊದಲು ಹೊರ ಜಿಲ್ಲೆಯಿಂದ ಬಂದಿದ್ದ ಒಬ್ಬ ವಿದ್ಯಾರ್ಥಿನಿಗೆ ಸೋಂಕು ತಗುಲಿತ್ತು. ಬಳಿಕ ಬಿಬಿಎಂಪಿ ಸಿಬ್ಬಂದಿ ಆ ಹಾಸ್ಟೆಲ್ ನಲ್ಲಿದ್ದ 53 ಮಂದಿ ವಿದ್ಯಾರ್ಥಿನಿಯರನ್ನು ಪರೀಕ್ಷೆಗೊಳಪಡಿಸಿದ್ದರು. ಇದರಲ್ಲಿ 14 ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದೆ. ಸದ್ಯ ಪಾಸಿಟಿವ್ ‌ಇರುವ ವಿದ್ಯಾರ್ಥಿನಿಯರನ್ನ ಹಾಸ್ಟೆಲ್ ನ ಒಂದು ಭಾಗದಲ್ಲಿ ಐಸೋಲೇಷನ್ ಮಾಡಲಾಗಿದೆ. ಇನ್ನೊಂದು ಭಾಗದಲ್ಲಿ ನೆಗೆಟಿವ್ ಇರುವ ವಿದ್ಯಾರ್ಥಿನಿಯರನ್ನ ಐಸೋಲೇಷನ್ ಮಾಡಲಾಗಿದೆ. 7 ದಿನದ ಬಳಿಕ ಮತ್ತೆ ನೆಗೆಟಿವ್ ಇರುವ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಗುವುದು.

ಕೊರೋನಾ ಸೋಂಕಿತ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಬಿಬಿಎಂಪಿ ಅಧಿಕಾರಿಗಳಿಗೆ ಆತಂಕ ಹೆಚ್ಚಿದೆ. ಈ ಹಾಸ್ಟೆಲ್ ಮಾತ್ರ ಮಲ್ಲೇಶ್ವರದಲ್ಲಿದೆ. ವಿದ್ಯಾರ್ಥಿನಿಯರು, ಹೆಬ್ಬಾಳ, ರಾಜರಾಜೇಶ್ವರಿ ನಗರ ಸೇರಿದಂತೆ ಅನೇಕ ಕಡೆ ಕಾಲೇಜಿಗೆ ಹೋಗುತ್ತಿದ್ದರು. ಹೀಗಾಗಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದ ಕಾಲೇಜುಗಳಿಗೂ ಟೆನ್ಶನ್ ಶುರುವಾಗಿದೆ.ಕಾಲೇಜುಗಳ ವಿವರ ಪಡೆದುಕೊಂಡು ಟೆಸ್ಟ್ ಮಾಡಲು ಬಿಬಿಎಂಪಿ ಮುಂದಾಗಿದೆ.

ಇದನ್ನೂ ಓದಿ: ಗೋವಾ-ಕಾರವಾರ ಗಡಿ ಭಾಗದಲ್ಲಿ ಮತ್ತೆ ಟಫ್ ರೂಲ್ಸ್; ಇಂದಿನಿಂದ ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಪ್ರವೇಶ

ಬೆಂಗಳೂರಿನ ವಿದ್ಯಾರ್ಥಿ ನಿಲಯದಲ್ಲಿ ಕೊರೋನಾ ಸ್ಫೋಟ ವಿಚಾರವಾಗಿ ಒಬ್ಬರಿಗೆ ಮೊದಲು ಕೊರೊನಾ ಕೇಸ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ನಲ್ಲಿರುವ 53 ವಿದ್ಯಾರ್ಥಿನಿಯರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇದರಲ್ಲಿ 15 ವಿದ್ಯಾರ್ಥಿನಿಯರಿಗೆ ಕೊರೊನಾ ಪತ್ತೆಯಾಗಿತ್ತು. ಹಾಸ್ಟೆಲ್​ನಲ್ಲಿ ಪಾಸಿಟಿವ್ ಬಂದ 4 ವಿದ್ಯಾರ್ಥಿನಿಯರಿಗೆ ನಾಳೆ ಪರೀಕ್ಷೆ ಇದೆ.

ಕೊರೋನಾ ಪಾಸಿಟಿವ್ ಇರೋ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುತ್ತೇವೆ. ಯಾವುದೇ ವಿದ್ಯಾರ್ಥಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿಲ್ಲ. ಹೀಗಾಗಿ ನಾಳಿನ ಪರೀಕ್ಷೆಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಲಾಗುತ್ತದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲು ಕಾಲೇಜುಗಳಿಗೆ ಸೂಚಿಸಲಾಗಿದೆ. ಪ್ರತ್ಯೇಕವಾದ ರೂಮ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ನಾವು ಪಿಪಿಇ ಕಿಟ್, ಮಾಸ್ಕ್ ಎಲ್ಲಾ ಕೊಟ್ಟು ವಿದ್ಯಾರ್ಥಿನಿಯರನ್ನ ಕಳುಹಿಸಿಕೊಡುತ್ತೇವೆ ಎಂದು ಬಿಬಿಎಂಪಿ ಎಂಓಹೆಚ್ ಡಾ. ನಂದಾ ಹೇಳಿದ್ದಾರೆ.

ಮಂಗಳೂರಿನಲ್ಲೂ ಹೆಚ್ಚಿದ ಕೊರೋನಾ ಆರ್ಭಟ:ಇದರ ಜೊತೆಗೆ ಮಂಗಳೂರಿನ ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಮಂಗಳೂರಿನ ಬಳ್ಳಾಲ್ ಭಾಗ್ ಬಳಿಯ ಶ್ರೀದೇವಿ ನರ್ಸಿಂಗ್ ಕಾಲೇಜಿನ 51 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಸಿಟಿವ್ ಪತ್ತೆಯಾಗಿದೆ. ಸದ್ಯ ಕಾಲೇಜು ಮತ್ತು ಹಾಸ್ಟೆಲ್ ಅನ್ನು ಕಂಟೇನ್​ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ.
Youtube Video

ಕೋವಿಡ್ ವಿಚಾರದಲ್ಲಿ ಮಂಗಳೂರಿನ ಯೆನೇಪೋಯಾ ಶಿಕ್ಷಣ ಸಂಸ್ಥೆ ಯಡವಟ್ಟು ಮಾಡಿಕೊಂಡಿದೆ. ಕೊರೋನಾ ಸೋಂಕಿತರ ಸಂಪರ್ಕಿತ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆ ಮನೆಗೆ ಕಳುಹಿಸಿದೆ. ಸುಮಾರು 870 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಯೆನೇಪೋಯಾ ಶಿಕ್ಷಣ ಸಂಸ್ಥೆಯ 31 ವಿದ್ಯಾರ್ಥಿಗಳಿಗೆ ಕಳೆದ ವಾರ ಪಾಸಿಟಿವ್ ಪತ್ತೆಯಾಗಿತ್ತು. ಆದರೆ, 31 ಜನರ ಜೊತೆ ಸಂಪರ್ಕ ಹೊಂದಿದ್ದ ವಿದ್ಯಾರ್ಥಿಗಳನ್ನ ಮನೆಗೆ ಕಳುಹಿಸಲಾಗಿದೆ. ಹೀಗಾಗಿ ಮೂರು ದಿನಗಳ ಒಳಗೆ ಉತ್ತರಿಸುವಂತೆ ಶಿಕ್ಷಣ ಸಂಸ್ಥೆಗೆ ನೋಟೀಸ್ ನೀಡಲಾಗಿದೆ. ಶಿಕ್ಷಣ ಸಂಸ್ಥೆ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದೆ.
Published by: Sushma Chakre
First published: March 18, 2021, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories