HOME » NEWS » Coronavirus-latest-news » KARNATAKA CORONAVIRUS 3 CRORE COVID 19 VACCINE ORDERED FROM KARNATAKA GOVERNMENT DCM ASHWATH NARAYAN SAYS SCT

ರಾಜ್ಯ ಸರ್ಕಾರದಿಂದ 3 ಕೋಟಿ ಕೊರೋನಾ ಲಸಿಕೆಗೆ ಆರ್ಡರ್; ಡಿಸಿಎಂ ಅಶ್ವಥ್ ನಾರಾಯಣ ಮಾಹಿತಿ

ಸರ್ಕಾರದಿಂದ 3 ಕೋಟಿ ಕೊರೋನಾ ಲಸಿಕೆ ಆರ್ಡರ್ ಮಾಡಿದ್ದೇವೆ. ಸಿರಮ್, ಕೋ ವ್ಯಾಕ್ಸಿನ್ ಅವರಿಗೆ 1 ಕೋಟಿ ಆರ್ಡರ್ ಮಾಡಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

news18-kannada
Updated:May 8, 2021, 1:22 PM IST
ರಾಜ್ಯ ಸರ್ಕಾರದಿಂದ 3 ಕೋಟಿ ಕೊರೋನಾ ಲಸಿಕೆಗೆ ಆರ್ಡರ್; ಡಿಸಿಎಂ ಅಶ್ವಥ್ ನಾರಾಯಣ ಮಾಹಿತಿ
ಅಶ್ವಥ್ ನಾರಾಯಣ್.
  • Share this:
ಬೆಂಗಳೂರು (ಮೇ 8): ಕೊರೋನಾ ರೋಗಿಗಳಿಗೆ ರಕ್ಷಣಾ ಇಲಾಖೆಯ ಆಸ್ಪತ್ರೆಯಲ್ಲಿ 250 ಬೆಡ್ ವ್ಯವಸ್ಥೆ ಮಾಡುತ್ತಿದ್ದಾರೆ. ಗೋಯಿಂಗ್ ಕಂಪೆನಿಯೊಂದಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾತಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 500 ಬೆಡ್ ವ್ಯವಸ್ಥೆ ಮಾಡಲು ಮುಂದೆ ಬಂದಿದ್ದಾರೆ. ರಾಜ್ಯದೆಲ್ಲ ಕಡೆ ಲಿಕ್ವಿಡ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚು ಮಾಡುತ್ತಿದ್ದೇವೆ. ಸರ್ಕಾರದಿಂದ 3 ಕೋಟಿ ಕೊರೋನಾ ಲಸಿಕೆ ಆರ್ಡರ್ ಮಾಡಿದ್ದೇವೆ. ಸಿರಮ್, ಕೋ ವ್ಯಾಕ್ಸಿನ್ ಅವರಿಗೆ 1 ಕೋಟಿ ಆರ್ಡರ್ ಮಾಡಿದ್ದೇವೆ. ಅವರು ಲಸಿಕೆಗಳನ್ನು ಪೂರೈಕೆ ಮಾಡಿದ ಮೇಲೆ ಆ ಬಗ್ಗೆ ಮಾಹಿತಿ ನೀಡುತ್ತೇವೆ. ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹೆಚ್ಚು ಮಾಡುತ್ತಿದ್ದೇವೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಜಿಂದಾಲ್​ಗೆ ಭೂಮಿ ಪರಭಾರೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಾ. ಅಶ್ವಥ್ ನಾರಾಯಣ, ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿ ನಿರ್ಧಾರವಾದಂತೆ ಭೂಮಿ ಪರಭಾರೆ ಮಾಡಿದ್ದೇವೆ. ಅವತ್ತು ಆಡಳಿತ ಪಕ್ಷ ಸ್ಪಷ್ಟವಾಗಿ ತಿಳಿಸಿರಲಿಲ್ಲ. ಈಗ ಸರಿಯಾದ ಕ್ರಮದಲ್ಲಿ ಮಾಡಿದ್ದೇವೆ. ಅಂದು ಆಡಳಿತ ಪಕ್ಷ ಸರಿಯಾದ ಮಾಹಿತಿ ನೀಡದ ಹಿನ್ನಲೆ ನಾವು ಹೋರಾಟ ಮಾಡಿದೆವು. ಸ್ವಪಕ್ಷೀಯರ ವಿರೋಧ ಇದ್ದರೆ ನಮ್ಮವರಿಗೂ ಆ ಬಗ್ಗೆ ಸರಿಯಾದ ಮಾಹಿತಿ ನೀಡುತ್ತೇವೆ. ಅವರಿಗೆ ಮಾಹಿತಿ ಕೊರತೆ ಇದ್ದರೆ ಅವರಿಗೂ ಸರಿಯಾದ ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರದ ನೇತೃತ್ವದಲ್ಲಿ 1,50,000 ಆರ್​ಟಿಪಿಸಿಆರ್​ ಟೆಸ್ಟ್​ ಆಗುತ್ತಿದೆ. ಇದನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡುತ್ತೇವೆ. 24 ಗಂಟೆಯೊಳಗೆ ಈ ಆರ್ ಟಿ ಪಿ ಎಸ್ ರಿಪೋರ್ಟ್ ಕೊಡಬೇಕು. ಇದನ್ನು ಕೆಲವು ಗಂಟೆಗಳಲ್ಲಿ ಕೊಡುವ ಕೆಲಸವಾಗುತ್ತಿದೆ. ಕೋವಿಡ್ ಲಕ್ಷಣಗಳು ಮೀರಿ ಜೀವಕ್ಕೆ ಅಪಾಯ ಆಗುತ್ತಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಔಷಧ ಮಾತ್ರೆಗಳನ್ನು ಸಂಪೂರ್ಣವಾಗಿ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೇಳಿದ್ದಾರೆ.

ಕರ್ನಾಟಕದಲ್ಲಿ 2000 ಕೋವಿಡ್ ಕೇರ್ ಸೆಂಟರ್ ಇವೆ. ಅವೆಲ್ಲವೂ ಸ್ಟೆಪ್ ಡೌನ್ ಆಸ್ಪತ್ರೆಗಳಾಗಿವೆ. ಸರ್ಕಾರ ಕೋವಿಡ್ ಕೇರ್ ಸೆಂಟರ್​ಗಳನ್ನು ಕೂಡ ಮಾಡಿದೆ. ರೋಗಿಗಳು ಆಸ್ಪತ್ರೆಗಳಿಗೆ ಬರಲು ಸಾಗದಿದ್ದರೆ ಅವರಿಗೆ ನೇರ ಮನೆಗೆ ಹೋಗಿ ಟ್ರೀಟ್ಮೇಂಟ್ ಕೊಡುತ್ತೇವೆ. ಖಾಸಗಿ ಆಸ್ಪತ್ರೆಗಳಿಗೆ ಕೂಡ ಆರ್ಥಿಕ ಸಹಾಯ ಮಾಡುತ್ತೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ.
Youtube Video

ಭಾರತದಲ್ಲಿ ಈಗಾಗಲೇ 15 ಕೋಟಿ ಕೊರೋನಾ ಲಸಿಕೆಗಳನ್ನು ನೀಡಲಾಗಿದೆ. 1 ಕೋಟಿ ಲಸಿಕೆ ನಮ್ಮ ರಾಜ್ಯಕ್ಕೆ ಕೊಟ್ಟಿದೆ. ಅಂಕಿಅಂಶಗಳನ್ನು ನೋಡಿದಾಗ ನಮಗೆ ರಾ ಮೆಟಿರಿಯಲ್ ಬೇರೆ ಬೇರೆ ದೇಶದ ಜೊತೆಗೆ ಮಾತಾಡಿ ನಮಗೆ ಕೊಟ್ಟಿದ್ದಾರೆ. ಎಲ್ಲಾ ಲಸಿಕೆ ಕೊಡಲು ಸರ್ಕಾರ ಆರ್ಥಿಕ ಸಹಾಯ ಮಾಡಿದೆ. ಜುಲೈ ತಿಂಗಳಿಗೆ ಹೆಚ್ಚು ಹೆಚ್ಚು ವ್ಯಾಕ್ಸಿನ್ ತಯಾರಿಕೆ ಮಾಡಲಾಗುತ್ತಿದೆ. 17ರಿಂದ 18 ಕೋಟಿ ವ್ಯಾಕ್ಸಿನ್ ತಯಾರಿಕೆ ಆಗುತ್ತಿದೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ. ಹೀಗಾಗಿ ಸವಾಲುಗಳು ಕೂಡ ಹೆಚ್ಚಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.
Published by: Sushma Chakre
First published: May 8, 2021, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories