Karnataka Health Bulletin: ಏರುತ್ತಲೇ ಇದೆ ಕೊರೋನಾ ಸಾವಿನ ಸಂಖ್ಯೆ; ಒಂದೇ ದಿನ 20 ಸಾವು, 947 ಹೊಸ ಪ್ರಕರಣ

CoronaVirus: ನಾಳೆಯಿಂದ ದೇಶದಾದ್ಯಂತ ಅನ್‌ಲಾಕ್-2 ಆರಂಭವಾಗಲಿದೆ. ಆದರೆ, ಒಂದೆಡೆ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆಯೂ ಅಧಿಕವಾಗುತ್ತಿದೆ. ಕಳೆದ ವಾರದವರೆಗೆ 200ರ ಸರಾಸರಿಯಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ ಸಾವಿರದ ಗಡಿ ದಾಟಿದೆ.

news18-kannada
Updated:June 30, 2020, 7:41 PM IST
Karnataka Health Bulletin: ಏರುತ್ತಲೇ ಇದೆ ಕೊರೋನಾ ಸಾವಿನ ಸಂಖ್ಯೆ; ಒಂದೇ ದಿನ 20 ಸಾವು, 947 ಹೊಸ ಪ್ರಕರಣ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಜೂನ್‌ 30); ರಾಜ್ಯ ಇಂದು ಒಂದೇ ದಿನ 947 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15242 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಾತ್ರ 503 ಜನಕ್ಕೆ ಈ ಮಾರಣಾಂತಿಕ ಸೋಂಕು ತಗುಲಿದೆ. ಅಲ್ಲದೆ, 20 ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆಯೂ 246ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಇಂದಿನ Heath Bulletienನಲ್ಲಿ ತಿಳಿಸಿದೆ.

ನಾಳೆಯಿಂದ ದೇಶದಾದ್ಯಂತ ಅನ್‌ಲಾಕ್-2 ಆರಂಭವಾಗಲಿದೆ. ಆದರೆ, ಒಂದೆಡೆ ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆ ರಾಜ್ಯಾದ್ಯಂತ ಸೋಂಕಿತರ ಸಂಖ್ಯೆಯೂ ಅಧಿಕವಾಗುತ್ತಿದೆ. ಕಳೆದ ವಾರದವರೆಗೆ 200ರ ಸರಾಸರಿಯಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ ಸಾವಿರದ ಗಡಿ ದಾಟಿದೆ.

ಇದನ್ನೂ ಓದಿ : ಮಾಸ್ಕ್‌ ಧರಿಸುವಂತೆ ಸೂಚಿಸಿದ ಮಹಿಳಾ ಸಹೋದ್ಯೋಗಿ ಮೇಲೆ ರಾಡ್‌ನಿಂದ ಹಲ್ಲೆ; ಆಂಧ್ರದಲ್ಲಿ ವ್ಯಕ್ತಿ ಅರೆಸ್ಟ್‌


ಇದಲ್ಲದೆ, ರಾಜ್ಯದಾದ್ಯಂತ ಇಂದು 235 ಜನ ಡಿಸ್ಜಾರ್ಜ್‌ ಆಗಿದ್ದಾರೆ. ಆದರೆ, 271 ಜನ ಈಗಲೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳೂ ಇದೆ ಎನ್ನಲಾಗುತ್ತಿದೆ. 

 
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading