Karnataka Corona Death: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ; ಒಂದೇ ದಿನದಲ್ಲಿ 353 ಮಂದಿ ಬಲಿ!

ಇಂದು ಒಂದೇ ದಿನ ರಾಜ್ಯದಲ್ಲಿ 32,218 ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 353 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೊರೋನಾ ಅಬ್ಬರಕ್ಕೆ ಜನರು ನಲುಕಿದ್ದು, ಇಂದು 9,591 ಮಂದಿ ಸೋಂಕಿಗೆ ಒಳಗಾಗಿದ್ದು, 129 ಮಂದಿ ಬಲಿಯಾಗಿದ್ದಾರೆ.

ಸೋಂಕಿತರ ಅಂತ್ಯಕ್ರಿಯೆ.

ಸೋಂಕಿತರ ಅಂತ್ಯಕ್ರಿಯೆ.

 • Share this:
  ಬೆಂಗಳೂರು (ಮೇ 20) ರಾಜ್ಯದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಇಂದು ಕೂಡ ದಾಖಲೆಯ ಪ್ರಕರಣ ಬೆಳಕಿಗೆ ಬಂದಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್​ ಮಾಡಿದ ಬಳಿಕವೂ ಈ ಪ್ರಮಾಣದ ಪ್ರಕರಣಗಳು ಕಂಡು ಬಂರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಒಂದೇ ದಿನ ರಾಜ್ಯದಲ್ಲಿ 32,218 ಪ್ರಕರಣಗಳು ಪತ್ತೆಯಾಗಿದ್ದು, ಬರೋಬ್ಬರಿ 353 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೊರೋನಾ ಅಬ್ಬರಕ್ಕೆ ಜನರು ನಲುಕಿದ್ದು, ಇಂದು 9,591 ಮಂದಿ ಸೋಂಕಿಗೆ ಒಳಗಾಗಿದ್ದು, 129 ಮಂದಿ ಬಲಿಯಾಗಿದ್ದಾರೆ. ಈ ನಡುವೆ ಬ್ಲಾಕ್​ ಫಂಗಸ್​ ಸೋಂಕು ಸಹ ರಾಜ್ಯದಲ್ಲಿ ಪತ್ತೆಯಾಗಿರುವುದು ಮತ್ತಷ್ಟು ಆತಂಕ್ಕೆ ಕಾರಣವಾಗಿದೆ. ಆದರೆ, ಸಚಿವ ಸುಧಾಕರ್ ಬ್ಲಾಕ್ ಪಂಗಸ್​ ಬಗ್ಗೆ ಆತಂಕ ಪಡುವ ಆಗತ್ಯ ಇಲ್ಲ. ಕೇಂದ್ರದಿಂದ ಹೆಚ್ಚಿನ ಔಷಧಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  ಲಾಕ್​ಡೌನ್​ ನಂತರ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಆರೋಗ್ಯ ಇಲಾಖೆ ಪ್ರತಿದಿನ ಬಿಡುಗಡೆ ಮಾಡುತ್ತಿರುವ ಅಂಕಿಅಂಶಗಳು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲೂ ಸಹ ಕೊರೋನಾ ಪ್ರಕರಣ ಇಳಿಕೆಯಾಗುತ್ತಿದೆ ಎಂದು ಸರ್ಕಾರ ವರದಿ ಮಾಡಿದೆ. ಆದರೆ, ಭಾರತದಲ್ಲಿ ಕೊರೋನಾ ಪರೀಕ್ಷೆ ಪ್ರಮಾಣ ಕಡಿಮೆ ಮಾಡಲಾಗಿದೆ. ಇದೇ ಕಾರಣಕ್ಕೆ ಪಾಸಿಟಿವ್ ಸರಾಸರಿ ಕಡಿಮೆಯಾಗಿದ್ದು, ಈ ಅಂಕಿ ಅಂಶಗಳು ನಂಬಿಕಾರ್ಹವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿರುವುದು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ.

  ಈ ನಡುವೆ ರಾಜ್ಯದಲ್ಲೂ ಇಷ್ಟು ದಿನ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುವವರ ಸಂಖ್ಯೆ ಅಧಿಕವಾಗಿಯೇ ಇತ್ತು. ಆದರೆ, ಇದೀಗ ರಾಜ್ಯಕ್ಕೆ ಕೇಂದ್ರದಿಂದ ಆಕ್ಸಿಜನ್ ಪೂರೈಕೆಯಾಗುತ್ತಿರುವುದು ತುಸು ನೆಮ್ಮದಿಗೆ ಕಾರಣವಾಗಿದೆ. ಅಲ್ಲದೆ, ಮೇ.24ಕ್ಕೆ ಲಾಕ್ಡೌನ್ ಮುಗಿಯಲಿದ್ದು, ಈ ಅವಧಿಯನ್ನು ಮತ್ತಷ್ಟು ಕಾಲ ಹೆಚ್ಚಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

  ಯುವಕರಲ್ಲೆ ಹೆಚ್ಚು ಸೋಂಕು:

  ದೇಶದಲ್ಲಿ ಎರಡನೇ ಕೊರೋನಾ ಅಲೆ ಆರಂಭವಾದ ನಂತರ 18 ರಿಂದ 45 ವರ್ಷದೊಳಗಿನ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಭಾದಿತರಾಗು ತ್ತಿದ್ದಾರೆ. ಯುವಕರಲ್ಲೇ ರೋಗ ಲಕ್ಷಣಗಳು ಕಂಡು ಬರುತ್ತಿವೆ ಇದಕ್ಕೆ ಭಾಗಶಃ ಅವರಲ್ಲಿರುವ ಬಲವಾದ ರೋಗ ನಿರೋಧಕ ಶಕ್ತಿಯೇ ಕಾರಣ ಎಂದು ಅನೇಕ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, "ದೇಹವನ್ನು ಪ್ರವೇಶಿಸುವ ಅನ್ಯ ವೈರಸ್​ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ದೇಹವು ತನ್ನದೇ ಆದ ಜೀವಕೋಶಗಳು ಮತ್ತು ಅಂಗಾಂಶಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಇದು ಸಂಭವಿಸಿದಾಗ, ದೇಹದಲ್ಲಿ ಸೈಟೊಕಿನ್ ಅಲೆಗೆ ಕಾರಣವಾಗುತ್ತದೆ. ಯುವಕರು ಕೊರೋನಾದಿಂದ ಹೆಚ್ಚು ಭಾದಿತರಾಗಲು ಇದೆ ಕಾರಣ, ವಯಸ್ಸಾದವರಲ್ಲಿ ಇದರ ಪರಿಣಾಮ ಸೌಮ್ಯವಾಗಿರುತ್ತದೆ" ಎಂದು ಉಲ್ಲೇಖಿಸಲಾಗಿದೆ.

  ಇದನ್ನೂ ಓದಿ: CoronaVirus: ಕೊರೋನಾ ಎರಡನೇ ಅಲೆಗೆ ಯುವಕರೇ ಹೆಚ್ಚಾಗಿ ತುತ್ತಾಗಲು ಕಾರಣವೇನು?

  ಸಿಎಮ್‌ಆರ್‌ಐ ಆಸ್ಪತ್ರೆಯ ಪಲ್ಮನಾಲಜಿ ನಿರ್ದೇಶಕ ರಾಜ ಧಾರ್ ಈ ಬಗ್ಗೆ ಮಾತನಾಡಿ, "ಕೊರೋನಾ ಮೊದಲ ಅಲೆಯಲ್ಲಿ ಸಾಮಾನ್ಯವಾಗಿ ವಯಸ್ಸಾದವರು ಮತ್ತು ಅತ್ಯಂತ ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದವರು ಮಾತ್ರ ಸಾವಿಗೀಡಾಗಿದ್ದರು. ಆದರೆ, ಕೊರೋನಾ ಎರಡನೇ ಅಲೆಯ ರೋಗ ಲಕ್ಷಣಗಳು ಯುವಕರಲ್ಲಿ- ಅಧಿಕ ರೋಗ ನಿರೋಧಕ ಶಕ್ತಿ ಹೊಂದಿದ್ದವರಲ್ಲೂ ಕಂಡು ಬರುತ್ತಿದೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಕಂಡು ಬರುತ್ತಿರುವ ಸೈಟೊಕಿನ್ ಪ್ರಭಾವವೇ ಆಗಿದೆ. ಈ ಸೈಟೊಕಿನ್​ನಿಂದಾಗಿ ಶ್ವಾಸಕೋಶ ಹೆಚ್ಚು ಹಾನಿಗೆ ಒಳಗಾಗುತ್ತದೆ. ನಂತರ ಹೃದಯ, ಮೂತ್ರಪಿಂಡಗಳು ಮತ್ತು ಯಕೃತ್ತು ಸಮಸ್ಯೆ ಎದುರಾಗುತ್ತದೆ. ಕೊನೆಗೆ ಇದೇ ಕಾರಣದಿಂದಾಗಿ ಉಸಿರಾಟದ ತೊಂದರೆ ಉಂಟಾಗಿ ಯುವಕರು ಸಾವನ್ನಪ್ಪುತ್ತಿದ್ದಾರೆ" ಎಂದು ಅವರು ಮಾಹಿತಿ ನೀಡಿದ್ದಾರೆ.

  ಇದನ್ನೂ ಓದಿ: Black Fungus: ಬ್ಲಾಕ್‌ ಫಂಗಸ್‌ ಬಗ್ಗೆ ಆತಂಕ ಬೇಡ, ಹೆಚ್ಚಿನ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ; ಸಚಿವ ಸುಧಾಕರ್

  ವಯಸ್ಸಾದವರು ಮತ್ತು ಮಧ್ಯವಯಸ್ಕರಿಗೆ ಈಗಾಗಲೇ ಲಸಿಕೆ ನೀಡಲಾಗಿರುವುದರಿಂದ, ಯುವಕರು ಜನಸಂಖ್ಯೆಯ ಅತ್ಯಂತ ದುರ್ಬಲ ಭಾಗವಾಗಿ ಉಳಿದಿದ್ದಾರೆ ಎಂದು ಬೆಲ್ಲೆ ವ್ಯೂ ಕ್ಲಿನಿಕ್ ಆಂತರಿಕ ಔಷದಾಲಯದ ಸಲಹೆಗಾರ ಹೇಳಿದ್ದಾರೆ. “ಅವರು ಅಸುರಕ್ಷಿತರು ಮಾತ್ರವಲ್ಲದೆ ಅವರಿಗೆ ಸೌಮ್ಯವಾದ ಕಾಯಿಲೆಯ ಲಕ್ಷಣಗಳಿಂದಾಗಿ ಯುವಕರು ಈಗಾಗಲೇ ಬಳಲುತ್ತಿದ್ದಾರೆ. ಆದರೆ ಕೊರೋನಾ ಎರಡನೇ ಅಲೆಯು ಮೊದಲನೆಯ ದಕ್ಕಿಂತ ಭಿನ್ನವಾಗಿದೆ ಮತ್ತು ಈ ಸಮಯದಲ್ಲಿ ತೀವ್ರತೆಯು ಹೆಚ್ಚು. ಕಳೆದ ಬಾರಿಗಿಂತ ಈ ಭಾರಿ ಇದು ಭಿನ್ನವಾಗಿದೆ. ಪರಿಣಾಮ ನಮ್ಮ ಬಹುಪಾಲು ಯುವಕರು ಈ ರೋಗದ ಲಕ್ಷಣಗಳಿಂದಾಗಿ ಖಿನ್ನತೆಗೆ ಒಳಗಾಗಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

  ಕೇಂದ್ರ ಸರ್ಕಾರ ನಿರ್ಮಿಸಿರುವ ಸಮಗ್ರ ರೋಗ ಕಣ್ಗಾವಲು ತಂಡ ದೇಶದಲ್ಲಿ ಈಗಾಗಲೇ ಕೊರೋನಾ ಎರಡನೇ ಅಲೆಗೆ ತುತ್ತಾಗಿರುವವರ ಪೈಕಿ ಸುಮಾರು ಶೇ.32 ರಷ್ಟು ಜನ (ಆಸ್ಪತ್ರೆಗೆ ದಾಖಲಾದ ಮತ್ತು ಮನೆಯಲ್ಲೇ ಪ್ರತ್ಯೇಕತೆಯಲ್ಲಿರುವ) 30 ವಯಸ್ಸಿಗಿಂತ ಕಡಿಮೆ ವಯಸ್ಸಿನವರಾಗಿದ್ದಾರೆಂದು ತಿಳಿಸಿದೆ. ಮೊದಲ ತರಂಗದಲ್ಲಿ ಇದು ಶೇ.21 ರಷ್ಟಿತ್ತು. ಹೀಗಾಗಿ ಈ ಭಾರಿ ಯುವಕರಿಗೆ ಹೆಚ್ಚಿನ ಆಮ್ಲಜನಕದ ಅಗತ್ಯತೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
  Published by:MAshok Kumar
  First published: