ಇನ್ನು, ಲಾಕ್ಡೌನ್ ಸಂದರ್ಭದಲ್ಲಿ ಅನೇಕ ಬಡುವರು ಊಟ ಇಲ್ಲದೇ ಸಾಯುತ್ತಿದ್ದಾರೆ. ಇಂತಹ ಅನಾಥ ಶವಗಳಿಗೆ ಮುಕ್ತಿ ಕಾಣಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಯಾಗಿ ಇವರು ಮಾಡುತ್ತಿದ್ದಾರೆ. ವಾರಸುದಾರರಿಲ್ಲದೇ ಅನಾಥವಾಗಿ ಬಿದ್ದ ಶವಗಳಿಗೆ ಮುಕ್ತ ಕಾಣುವ ಕೆಲಸವನ್ನು ಮಾದೇಗೌಡ ಮಾಡುತ್ತಾ ಬಂದಿದ್ದಾರೆ. ಹೀಗೆ ಕಳೆದ ಮೂರು ದಶಕಗಳಿಂದ ಸುಮಾರು 80ಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತಿ ಕಾಣಿಸಿದ್ದಾರೆ.
ಬೆಂಗಳೂರು(ಮೇ.09): ಪೊಲೀಸರೆಂದರರೇ ಸಾಮಾನ್ಯವಾಗಿ ಜನಕ್ಕೆ ಯಾಕೋ ನಡುಕ. ಇವರು ಯಮ ಸ್ವರೂಪಿಗಳು, ಅವರಿಂದ ಜೋಪಾನವಾಗಿರಿ. ಪೊಲೀಸರ ಕೈಗೆ ಸಿಕ್ಕಿದರೆ ನಿಮ್ಮ ಕಥೆ ಮುಗಿಯಿತು. ಜನರ ಮೇಲೆ ಇವರು ದರ್ಪ ತೋರುತ್ತಾರೆ, ಒರಟಾಗಿ ವರ್ತಿಸಿ ಹೆದರಿಸುತ್ತಾರೆ ಎನ್ನುವುದು ಸಾಮಾನ್ಯಜನರ ಅಭಿಪ್ರಾಯ. ಇದು ನಿಜವೂ ಹೌದು, ಪೊಲೀಸರು ಕೂಡ ಹಾಗೆಯೇ ಗಂಭೀರದಿಂದ ಇರುತ್ತಾರೆ. ಇಂತವರ ಮಧ್ಯೆ ಜನರಿಗೆ ಸಹಾಯ ಮಾಡಬೇಕೆಂಬ ಸಾವಿರಾರು ಪೊಲೀಸರು ನಮ್ಮ ಮಧ್ಯೆ ಇದ್ದಾರೆ. ಹೀಗೆ ಜನರಿಗೆ ಸಹಾಯ ಮಾಡುವ ಪೊಲೀಸರ ಪೈಕಿ ಚಾಮರಾಜನಗರ ಮಾದೇಗೌಡ ಎಂಬುವರು ಒಬ್ಬರು.
ಇಡೀ ದೇಶದ ಜನತೆ ಲಾಕ್ಡೌನ್ನಿಂದ ತತ್ತರಿಸಿ ಹೋಗಿದ್ದಾರೆ. ಇನ್ನೂ ಇಂಥ ಪರಿಸ್ಥಿತಿಯಲ್ಲಿ ನಿರ್ಗತಿಕರ ಪಾಡಂತೂ ಕೇಳುವಂತಿಲ್ಲ. ಹೀಗಿರುವಾಗ ಯಾವುದೇ ಮೇಲಧಿಕಾರಿ ಅಥವಾ ಸರ್ಕಾರದ ಸೂಚನೆ ಇಲ್ಲದಿದ್ದರೂ ಚಾಮರಾಜನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಎಚ್.ಬಿ ಮಾದೇಗೌಡ ಸ್ವಯಂ ಪ್ರೇರಿತರಾಗಿ ನಿರ್ಗತಿಕರಿಗೆ ಸಹಾಯ ಮಾಡುತ್ತಿದ್ದಾರೆ.
ಇನ್ನು, ಲಾಕ್ಡೌನ್ ಸಂದರ್ಭದಲ್ಲಿ ಅನೇಕ ಬಡವರು ಹೊಟ್ಟೆಗೆ ಊಟ ಇಲ್ಲದೇ ಸಾಯುತ್ತಿದ್ದಾರೆ. ಹೀಗೆ ಸತ್ತು ಬೀದಿಬದಿ ಅನಾಥ ಶವಗಳಿಗೆ ಮುಕ್ತಿ ಕಾಣಿಸುವ ಕೆಲಸವನ್ನು ಈ ಪೊಲೀಸ್ ಅಧಿಕಾರಿ ಮಾದೇಗೌಡ ಮಾಡುತ್ತಿದ್ದಾರೆ. ವಾರಸುದಾರರಿಲ್ಲದೇ ಅನಾಥವಾಗಿ ಬಿದ್ದ 80ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಥಾರ ಮಾಡಿ ಮುಗಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ತಹಬದಿಗೆ ಬಂದ ಕೊರೋನಾ: ಇಂದು ಇಬ್ಬರಿಗೆ ಸೋಂಕು, 505 ಸೋಂಕಿತರ ಪೈಕಿ 485 ಮಂದಿ ಗುಣಮುಖ
ಇತ್ತೀಚೆಗೆ ಪುಣಜನೂರು-ಸತ್ಯಮಂಗಲ ರಸ್ತೆಯಲ್ಲಿ ಕಾಡಾನೆ ತುಳಿತದಿಂದ ಅನಾಥ ವ್ಯಕ್ತಿಯೋರ್ವ ಮೃತಪಟ್ಟಿದ್ದ. ಈ ವೇಳೆ ಕೋವಿಡ್-19 ಭೀತಿಯಿಂದ ಯಾರು ಈ ಅನಾಥ ಶವ ಸಂಸ್ಕಾರ ನಡೆಸಲು ಮುಂದೆ ಬರಲಿಲ್ಲ. ಆಗ ಶವ ಮಹಜರು ನಡೆಸಿದ್ದ ಮಾದೇಗೌಡ ಈ ಶವಕ್ಕೆ ಮುಕ್ತಿ ಕಾಣಿಸಿದ್ದಾರೆ. ಜೆಸಿಬಿ ಕರೆಸಿ ಗುಂಡಿ ತೆಗೆಸಿ ತಾವೇ ಗುಂಡಿಯೊಳಗೆ ಇಳಿದು ಅನಾಥ ಶವದ ಅಂತ್ಯ ಸಂಸ್ಥಾರ ಮಾಡಿರುವುದು ಸಾರ್ವಜನಿರ ಮೆಚ್ಚುಗೆಗೆ ಕಾರಣವಾಗಿದೆ.
First published:
May 9, 2020, 8:27 PM IST