HOME » NEWS » Coronavirus-latest-news » KARNATAKA BEATS MAHARASHTRA AND BECOMES THE STATE TO HAVE HIGHEST CORONA INFECTION AND DEATH CASES IN A SINGLE DAY SKTV

Coronavirus: ಕೊರೊನಾ ಹರಡುವಿಕೆಯಲ್ಲಿ ಕರ್ನಾಟಕ ಈಗ ದೇಶಕ್ಕೇ ನಂಬರ್ 1

ಈಗ ಮಾಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ಮೊದಲನೇ ಸ್ಥಾನಕ್ಕೆ ಬಂದು ನಿಂತಿದೆ. ಸೋಮವಾರ ಸಂಜೆಯ ವೇಳೆಗೆ ಕರ್ನಾಟಕದಲ್ಲಿ 39,305 ಕೇಸುಗಳು ಪತ್ತೆಯಾಗಿದ್ದರೆ ಮಹಾರಾಷ್ಟ್ರದಲ್ಲಿ 37,236 ಕೇಸುಗಳು ಮಾತ್ರ ಪತ್ತೆಯಾಗಿವೆ.

Soumya KN | news18-kannada
Updated:May 11, 2021, 10:00 AM IST
Coronavirus: ಕೊರೊನಾ ಹರಡುವಿಕೆಯಲ್ಲಿ ಕರ್ನಾಟಕ ಈಗ ದೇಶಕ್ಕೇ ನಂಬರ್ 1
ಪ್ರಾತಿನಿಧಿಕ ಚಿತ್ರ
  • Share this:
Corona Cases: ಯಾವ ವಿಚಾರದ ಬಗ್ಗೆ ಕರ್ನಾಟಕದಲ್ಲಿ ಭಯವಿತ್ತೋ ಆ ಸನ್ನಿವೇಶ ಬಂದೇಬಿಟ್ಟಿದೆ. ಇದುವರಗೆ ದೇಶದಲ್ಲಿ ಒಂದು ದಿನದಲ್ಲಿ ಅತೀ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬರುತ್ತಿದ್ದವು, ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಆದರೆ ಈಗ ಮಾಹಾರಾಷ್ಟ್ರವನ್ನು ಹಿಂದಿಕ್ಕಿ ಕರ್ನಾಟಕ ಮೊದಲನೇ ಸ್ಥಾನಕ್ಕೆ ಬಂದು ನಿಂತಿದೆ. ಸೋಮವಾರ ಸಂಜೆಯ ವೇಳೆಗೆ ಕರ್ನಾಟಕದಲ್ಲಿ 39,305 ಕೇಸುಗಳು ಪತ್ತೆಯಾಗಿದ್ದರೆ ಮಹಾರಾಷ್ಟ್ರದಲ್ಲಿ 37,236 ಕೇಸುಗಳು ಮಾತ್ರ ಪತ್ತೆಯಾಗಿವೆ.

ಕೊರೊನಾ ಸೋಂಕಿನಿಂದ ಕರ್ನಾಟದಲ್ಲಿ 596 ಜನ ಸಾವನ್ನಪ್ಪಿದ್ದು ಅದರಲ್ಲಿ 374 ಜನ ಬೆಂಗಳೂರಿನವರೇ ಇದ್ದಾರೆ. ಮಹಾರಾಷ್ಟ್ರದಲ್ಲಿ ಇದೇ ದಿನ ಒಟ್ಟು 549 ಜನ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಎರಡರಲ್ಲೂ ಕರ್ನಾಟಕ ಮೊದಲನೇ ಸ್ಥಾನಕ್ಕೆ ಬಂದು ನಿಂತಿದೆ.

ಸದ್ಯ ಕರ್ನಾಟಕದಲ್ಲಿ 14 ದಿನಗಳ ಲಾಕ್​ಡೌನ್ ಜಾರಿಯಲ್ಲಿದೆ. ಆದರೂ ಜನರ ಮತ್ತು ವಾಹನಗಳ ಓಡಾಟ ಮುಂದುವರೆದಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಆಕ್ಸಿಜನ್ ಕೊರತೆ ಇನ್ನೂ ಮುಂದುವರೆದಿದೆ. ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೆ ಇರುವ ಸರತಿ ಸಾಲುಗಳೂ ಕಡಿಮೆಯಾಗಿಲ್ಲ.

ಇದನ್ನೂ ಓದಿhttps://kannada.news18.com/news/state/bengaluru-urban-nris-who-came-to-visit-families-in-bengaluru-stayed-back-to-address-covid-distress-sktv-562341.html

ಮುಂದುವರೆದು ಬಿಬಿಎಂಪಿ ಚಿತಾಗಾರಗಳ ಬಳಿ ಫ್ರೀಜರ್​ಗಳ ವ್ಯವಸ್ಥೆ ಮಾಡಿ ಮೃತದೇಹಗಳನ್ನು ಅವುಗಳ ಸರತಿ ಬರುವವರಗೆ ಕಾಯ್ದಿರಿಸುವ ವ್ಯವಸ್ಥೆ ಮಾಡಿದೆ. ಮತ್ತೊಂದೆಡೆ ಲಸಿಕೆ ಎಲ್ಲಾ ಕಡೆ ದೊರೆಯುತ್ತಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆಗಳ ನಡುವೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.
Youtube Video

ಲಾಕ್​ಡೌನ್ ನಿಯಮಗಳು ಜಾರಿಯಾಗುವಂತೆ ನೋಡಿಕೊಳ್ಳಲು ಪೋಲೀಸರು ಮತ್ತು ಮಾರ್ಷಲ್​ಗಳು ಹರಸಾಹಸ ಪಡುತ್ತಿದ್ದಾರೆ. ಇಷ್ಟಾದರೂ ಎರಡನೇ ಅಲೆಯ ವೇಗ ಸ್ವಲ್ಪವೂ ಕಡಿಮೆಯಾಗದೇ ಇರುವುದು ಜನರನ್ನು ಆತಂಕದಲ್ಲಿರುವಂತೆ ಮಾಡಿದೆ. ಈಗ ದೇಶದಲ್ಲೇ ಕರ್ನಾಟಕದಲ್ಲಿ ಅತೀ ಹೆಚ್ಚು ಸೋಂಕು ಹರಡಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದಂತಾಗಿದೆ.
Published by: Soumya KN
First published: May 11, 2021, 10:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories