ಗೋವಾ ಸರ್ಕಾರದಿಂದ ಕನ್ನಡಿಗರಿಗೆ ಹಳಸಿದ ಅನ್ನ; ನಮ್ಮದು ನಾಯಿ ಪಾಡು ಎಂದ ಕಾರ್ಮಿಕರು

ಕೂಲಿ ಕೆಲಸಕ್ಕಾಗಿ ಗೋವಾಕ್ಕೆ ತೆರಳಿರುವ ವಿಜಯಪುರ ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ನಾನಾ ಭಾಗಗಳ ಜನರು ಈಗ ಅಕ್ಷರಷಃ ಕಂಗಾಲಾಗಿದ್ದಾರೆ. 

ಕಾರ್ಮಿಕರು

ಕಾರ್ಮಿಕರು

 • Share this:
  ವಿಜಯಪುರ(ಮಾ. 30): ಭಾರತ ಲಾಕ್ ಡೌನ್ ನಿಂದ ಸಂತ್ರಸ್ತರಾಗಿರುವ ಗೋವಾದ ಕನ್ನಡಿಗರಿಗೆ ಅಲ್ಲಿನ ಸರಕಾರ ಹಳಸಿದ ಅನ್ನ ತಿನ್ನುವಂತೆ ಮಾಡಿದೆ. ಈ ಕುರಿತು ಅಳಲು ತೋಡಿಕೊಂಡಿರುವ ಗೋವಾದಲ್ಲಿರುವ ಕನ್ನಡಿಗರು, ತಮ್ಮ ಪಾಡು ನಾಯಿ ಪಾಡಾಗಿದೆ.  ಕಳೆದ ಎರಡು ಮೂರು ದಿನಗಳಿಂದ ತಮ್ಮ ಪರಿಸ್ಥಿತಿ ಅಯೋಮಯವಾಗಿದೆ ಎನ್ನುತ್ತಿದ್ದಾರೆ.

  ಕೂಲಿ ಕೆಲಸಕ್ಕಾಗಿ ಗೋವಾಕ್ಕೆ ತೆರಳಿರುವ ವಿಜಯಪುರ ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ನಾನಾ ಭಾಗಗಳ ಜನರು ಈಗ ಅಕ್ಷರಷಃ ಕಂಗಾಲಾಗಿದ್ದಾರೆ.  ನಮ್ಮ ಗೋಳನ್ನು ಕೇಳುವವರೇ ಇಲ್ಲ. ಹಳಸಿದ ಅನ್ನ ತಿನ್ನಲು ಕೊಡುತ್ತಿದ್ದಾರೆ. ನಾವು ಮನುಷ್ಯರಲ್ಲವೇ ಎಂದು ಅಲ್ಲಿನ ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ.

  ವಿಜಯಪುರ ಜಿಲ್ಲೆಯ ಸುಮಾರು 300 ಜನರನ್ನು ಗೋವಾ ಸರಕಾರ ಮಾಪ್ಸಾ ಸ್ಟೇಡಿಯಂ ನಲ್ಲಿ ಇಟ್ಟಿದೆ. ಮಕ್ಕಳು, ಗರ್ಭಿಣಿಯರು, ವಯಸ್ಸಾದವರಿಗೂ ಹಳಸಿದ ಅನ್ನವೇ ಮೃಷ್ಟಾನ್ನವಾಗಿದೆ.  ನಮಗೆ ಸರಿಯಾಗಿ ಊಟವನ್ನೂ ಸಹ ಕೊಡುತ್ತಿಲ್ಲ ಎಂದು ಮಹಿಳೆಯರು ಗೋಗರೆಯುತ್ತಿದ್ದಾರೆ.

  ಇದನ್ನೂ ಓದಿ : ಕೊರೋನಾ ಭೀತಿ; ತವರಿಗೆ ಸೇರುವ ತವಕದಲ್ಲಿ ನಡೆದುಕೊಂಡೇ ಹುಟ್ಟೂರಿಗೆ ತೆರಳುತ್ತಿರುವ ಕಾರ್ಮಿಕರು

  ಚುನಾವಣೆ ಬಂದಾಗ ಓಟ್ ಕೇಳಲು ಬರುವ ಜನಪ್ರತಿನಿಧಿಗಳೇ ಈಗೆಲ್ಲಿದ್ದೀರಿ ಎಂದು ಈ ಜನ ಪ್ರಶ್ನಿಸಿದ್ದಾರೆ. ನಿಮಗೆಲ್ಲ ಅಷ್ಟು ನಿಯತ್ತಿದ್ದರೆ ಬಸ್ ತಂದು ನಮ್ಮನ್ನು ನಮ್ಮ ನಾಡಿಗೆ ಸೇರಿಸಿ ಎಂದು ಸವಾಲು ಕೂಡಾ ಹಾಕಿದ್ದಾರೆ. ನಮಗೆಲ್ಲ ನಮ್ಮೂರಿಗೆ ತೆರಳಲು ಬಸ್ ಸೌಲಭ್ಯ ಕೊಡಿಸಿ. ಇಲ್ಲವೇ ನಮಗೆ ಒಳ್ಳೆಯ ಊಟವಾದರೂ ಕೊಡಿಸಿ ಎಂದು ಈ ಜನ ಅಂಗಲಾಚಿದ್ದಾರೆ.  ಕಡೇ ಪಕ್ಷ ಕರ್ನಾಟಕ ಸರಕಾರ ತಮ್ಮ ಕಡೆಗೆ ಗಮನ ಹರಿಸಬೇಕು ಎಂದು ಗೋಳು ತೋಡಿಕೊಂಡಿದ್ದಾರೆ.
  First published: