ಗೋವಾದಲ್ಲಿ ಕನ್ನಡ ಕುಟುಂಬದ ಪರದಾಟ: ವಿಡಿಯೋ ಮೂಲಕ ಸಹಾಯಕ್ಕೆ ಮನವಿ

ಶಾಸಕ ಪಿ ರಾಜೀವ್ ಪ್ರತಿನಿಧಿಸುವ ಕುಡಚಿ ಮತಕ್ಷೇತ್ರ ವ್ಯಾಪ್ತಿಯ ನಿಡಗುಂದಿ ಗ್ರಾಮದವರಾದ ಇವರು ಶಾಸಕ ಪಿ ರಾಜೀವ ಅವರಿಗೆ ವಿನಂತಿಸಿಕೊಂಡಿದೆ.

G Hareeshkumar | news18-kannada
Updated:April 12, 2020, 7:12 AM IST
ಗೋವಾದಲ್ಲಿ ಕನ್ನಡ ಕುಟುಂಬದ ಪರದಾಟ: ವಿಡಿಯೋ ಮೂಲಕ ಸಹಾಯಕ್ಕೆ ಮನವಿ
ಮನವಿ ಮಾಡುತ್ತಿರುವ ಕನ್ನಡಿಗ ಕುಟುಂಬ
  • Share this:
ಚಿಕ್ಕೋಡಿ(ಏ.12): ಲಾಕ್​ ಡೌನ್ ಹಿನ್ನೆಲೆಯಲ್ಲಿ ಈಗ ತಿನ್ನಲು ಅನ್ನವೂ ಸಹ ಸಿಗುತ್ತಿಲ್ಲ. ಇವರು ರೇಷನ್ ಸಹ ಕೊಡುತ್ತಿಲ್ಲ.ಗೋವಾ ಸರ್ಕಾರದಿಂದ ನಮಗೆ ಯಾವುದೇ ಅನುಕೂಲ ಸಿಗುತ್ತಿಲ್ಲ ಎಂದು ಅಳಲು‌ ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ದಯವಿಟ್ಟು ಕುಡಚಿ ಕ್ಷೇತ್ರದ ಶಾಸಕ ಪಿ ರಾಜೀವ್ ಅವರು ನಮ್ಮ ರಕ್ಷಣೆ ಮಾಡಬೇಕು ಎಂದು ವಿಡಿಯೋ ಮೂಲಕ ಈ‌ ಕುಟುಂಬ ಅಳಲು ತೋಡಿಕೊಂಡಿದೆ. ಶಾಸಕ ಪಿ ರಾಜೀವ್ ಪ್ರತಿನಿಧಿಸುವ ಕುಡಚಿ ಮತಕ್ಷೇತ್ರ ವ್ಯಾಪ್ತಿಯ ನಿಡಗುಂದಿ ಗ್ರಾಮದವರಾದ ಇವರು ಶಾಸಕ ಪಿ ರಾಜೀವ ಅವರಿಗೆ ವಿನಂತಿಸಿಕೊಂಡಿದೆ.

ಕನ್ನಡಿಗರಿಗೆ ಮೊಸ ಮಾಡುತ್ತಿದೆಯಾ ಗೋವಾ ಸರ್ಕಾರ : 

ಕೇಂದ್ರ ಸರ್ಕಾರ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಖಡಕ್ ಸೂಚನೆ ಕೊಟ್ಟಿದೆ. ಬೇರೆ ಬೇರೆ ರಾಜ್ಯಗಳಂದ ಬಂದಂತಹ ಕೂಲಿ ಕಾರ್ಮಿಕರನ್ನ ರಕ್ಷಣೆ ಮಾಡಬೇಕು. ಆ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಾಯ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರೂ ಗೋವಾ ಮಾತ್ರ ಸಹಾಯ ಮಾಡುತ್ತಿಲ್ಲ ಎನ್ನುವ ಆರೋಪ ಈ ಕುಟುಂಬ ಮಾಡಿದೆ.

ಈ ಹಿಂದೆಯೂ ಕರ್ನಾಟಕದ ನೂರಾರು ಕುಟುಂಬಗಳು ಗೋವಾ ರಾಜ್ಯದಿಂದ ನೂರಾರು ಕಿಲೋಮೀಟರ್ ಕಾಲ್ನಡಿಗೆ ಮೂಲಕ ಕರ್ನಾಟಕ ರಾಜ್ಯದ ಗಡಿ ಕಣಕುಂಬಿಗೆ ಬಂದಿದ್ದವು. ಆ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟದ ಕುರಿತು ನ್ಯೂಸ್18 ಕನ್ನಡ ವಿಸ್ತಾರವಾದ ವರದಿ ಪ್ರಸಾರ ಮಾಡುತ್ತಿದ್ದಂತೆ ಕೇಂದ್ರ ಸರ್ಕಾರ ಗೋವಾ ರಾಜ್ಯಕ್ಕೆ ಕಾರ್ಮಿಕರ ರಕ್ಷಣೆ ಮಾಡಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿತ್ತು. ಬಳಿಕ ಎಚ್ಚೆತ್ತ ಗೋವಾ ಸರ್ಕಾರ ಕೂಡ ಬಸ್​ಗಳ ಮೂಲಕ ಕನಕುಂಬಿ ವರೆಗೆ ಬಂದು ದುಡಿಯಲು ಹೋದ ಕಾರ್ಮಿಕರನ್ನ ವಾಪಸ್ ಕರೆದುಕೊಂಡು ಹೋಗಿತ್ತು.

ಇದನ್ನೂ ಓದಿ : ದೆಹಲಿ ಸಭೆಯಲ್ಲಿ ಭಾಗಿಯಾದವರ ಕಣ್ಣಾಮುಚ್ಚಾಲೆ - ತಪ್ಪಿಸಿಕೊಂಡು ತಿರುಗುವವರನ್ನು ಜೈಲಿಗೆ ಕಳುಹಿಸಿ ; ಡಿಸಿಎಂ ಗೋವಿಂದ ಕಾರಜೋಳ ಎಚ್ಚರಿಕೆ

ಈಗ ನಮ್ಮ ರಾಜ್ಯದ ಕಾರ್ಮಿಕರ ಕುಟುಂಬ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ಕೂಡಲೆ ರಾಜ್ಯ ಸರ್ಕಾರದ ಗೋವಾ ಸರ್ಕಾರದ ಜೋತೆ ಮಾತುಕತೆ ನಡೆಸಿ ನಮ್ಮ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕಿದೆ.(ವರದಿ : ಲೋಹಿತ್​ ಶಿರೋಳ)
First published: April 12, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading