• Home
 • »
 • News
 • »
 • coronavirus-latest-news
 • »
 • ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ; ಭಾರತದಲ್ಲಿ ಔಷಧಗಳ ಬೆಲೆಯಲ್ಲಿ ಭಾರೀ ಏರಿಕೆ

ಚೀನಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ; ಭಾರತದಲ್ಲಿ ಔಷಧಗಳ ಬೆಲೆಯಲ್ಲಿ ಭಾರೀ ಏರಿಕೆ

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಬೈಲ್​ ದರ ಕೂಡ ಹೆಚ್ಚುವ ಭೀತಿ ಕಾಡಿದೆ. ಕ್ಸಿಯೊಮಿ, ಒಪ್ಪೋ, ವಿವೋ, ಸ್ಯಾಮ್​ಸುಂಗ್​ನ​ ಬಿಡಿ ಭಾಗಗಳು ಚೀನಾದಲ್ಲಿ ಸಿದ್ಧಗೊಳ್ಳುತ್ತವೆ. ಹೀಗಾಗಿ ಈ ಉದ್ಯಮಗಳ ಮೇಲೂ ಹೆಚ್ಚು ಪರಿಣಾಮ ಉಂಟಾಗಬಹುದು.

 • Share this:

  ನವದೆಹಲಿ (ಫೆ.18): ಕೊರೊನಾ ವೈರಸ್​ ಅಟ್ಟಹಾಸ ಚೀನಾದಲ್ಲಿ ಮುಂದುವರಿದಿದೆ. ಸಾವಿನ ಸಂಖ್ಯೆ 1,860ರ ಗಡಿ ದಾಟಿದೆ. ಇನ್ನು, ಚೀನಾದಲ್ಲಿ ಕಾಣಿಸಿಕೊಂಡಿರುವ ಭೀಕರ ವೈರಸ್​ಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಹೀಗಾಗಿ ಚೀನಾಗೆ ತೆರಳದಂತೆ ಎಲ್ಲ ದೇಶಗಳ ವಿಮಾನಗಳಿಗೆ ನಿರ್ಬಂಧ ಹೇರಲಾಗಿದೆ. ಇದರ ಪರಿಣಾಮ ಭಾರತದ ಮೇಲೂ ಉಂಟಾಗಿದ್ದು, ಕೆಲ ಔಷಧಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.


  ಭಾರತ ಔಷಧಿ ತಯಾರಿಕೆಗೆ ಬೇಕಾದ ಕೆಲ ರಾಸಾಯನಿಕಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ.  ನೋವು ನಿವಾರಕಕ್ಕೆ ಬಳಕೆ ಆಗುವ ಪ್ಯಾರಸಿಟಮಾಲ್  ಮಾತ್ರೆ ಬೆಲೆ ಶೇ. 40 ಏರಿಕೆ ಕಂಡಿದೆ. ಇನ್ನು, ಆ್ಯಂಟಿಬಯಾಟಿಕ್​ಗಳ​ ಬೆಲೆ ಶೇ. 70 ಏರಿಕೆ ಕಂಡಿದೆ. ಒಂದೊಮ್ಮೆ ಮುಂದಿನ ತಿಂಗಳ ಆರಂಭದಲ್ಲಿ ರಾಸಾಯನಿಕಗಳ ಪೂರೈಕೆ ಆಗದಿದ್ದರೆ ಏಪ್ರಿಲ್​ನಲ್ಲಿ ಫಾರ್ಮಾ ಇಂಡಸ್ಟ್ರಿ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ.


  ದೇಶದಲ್ಲಿ ಔಷಧಿಗಳ ಜೊತೆಗೆ, ಮೊಬೈಲ್​ ದರ ಕೂಡ ಹೆಚ್ಚುವ ಭೀತಿ ಕಾಡಿದೆ. ಕ್ಸಿಯೋಮಿ, ಒಪ್ಪೋ, ವಿವೋ, ಸ್ಯಾಮ್​ಸಂಗ್​ನ​ ಬಿಡಿಭಾಗಗಳು ಚೀನಾದಲ್ಲಿ ಸಿದ್ಧಗೊಳ್ಳುತ್ತವೆ. ಹೀಗಾಗಿ ಈ ಉದ್ಯಮಗಳ ಮೇಲೂ ಹೆಚ್ಚು ಪರಿಣಾಮ ಉಂಟಾಗಬಹುದು.


  ಇದನ್ನೂ ಓದಿ: ಚೀನಾದಲ್ಲಿ ಕೊರೊನಾ: ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ? ಯಾವ್ಯಾವ ವಸ್ತು ದುಬಾರಿ?


  ಭಾರತದ ಬಹುತೇಕ ಕೈಗಾರಿಕೆಗಳು ಕಚ್ಚಾ ಸರಕಿಗೆ ಚೀನಾ ದೇಶದ ಮೇಲೆ ಅವಲಂಬಿತವಾಗಿವೆ. ಚೀನಾದಿಂದ ಸರಕು ಬರದಿದ್ದರೆ ಅದನ್ನೇ ನಂಬಿರುವ ಕೈಗಾರಿಕೆಗಳು ಮುಚ್ಚಲ್ಪಡುತ್ತವೆ. ದೇಶದ ಆರ್ಥಿಕತೆ ಈಗಷ್ಟೇ ಸುಧಾರಣೆ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ಚೀನಾ ಸಂಪರ್ಕ ಕಡಿತಗೊಂಡಿರುವುದು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

  Published by:Rajesh Duggumane
  First published: