ಅಮ್ಮನ ತಿಥಿಗೆ ದುಬೈನಿಂದ ಬಂದು 1,500 ಜನಕ್ಕೆ ಊಟ ಹಾಕಿಸಿದ ಕೊರೋನಾ ಸೋಂಕಿತ!

ಮಧ್ಯಪ್ರದೇಶ ಮೂಲದ ವ್ಯಕ್ತಿಯೋರ್ವ ತನ್ನ ಅಮ್ಮನ ತಿಥಿಗೆ ದುಬೈನಿಂದ ವಾಪಾಸ್ ಬಂದಿದ್ದ. ಅಮ್ಮನ ತಿಥಿಗೆ 1,500 ಜನರನ್ನು ಆಹ್ವಾನಿಸಿದ್ದ ಆತ ಭರ್ಜರಿಯಾಗಿ ಊಟ ಹಾಕಿಸಿದ್ದ. 

Sushma Chakre | news18-kannada
Updated:April 4, 2020, 11:12 AM IST
ಅಮ್ಮನ ತಿಥಿಗೆ ದುಬೈನಿಂದ ಬಂದು 1,500 ಜನಕ್ಕೆ ಊಟ ಹಾಕಿಸಿದ ಕೊರೋನಾ ಸೋಂಕಿತ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಏ. 4): ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕೊರೋನಾ ವೈರಸ್​ನಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಜನರ ನಡುವೆ ಸಾಮಾಜಿಕ ಅಂತರ ಇರಬೇಕು ಮತ್ತು ಗುಂಪು ಸೇರಬಾರದು ಎಂಬ ಕಾರಣಕ್ಕೆ ದೇಶಾದ್ಯಂತ ಲಾಕ್​ಡೌನ್ ಘೋಷಿಸಲಾಗಿದೆ. ಈ ಲಾಕ್​ಡೌನ್​ಗೂ ಮೊದಲು ದೆಹಲಿಯ ನಿಜಾಮುದ್ದೀನ್​ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸುಮಾರು 4 ಸಾವಿರ ಜನರು ಪಾಲ್ಗೊಂಡಿದ್ದರಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ಮಧ್ಯೆ ಮಧ್ಯಪ್ರದೇಶದಲ್ಲಿ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶ ಮೂಲದ ವ್ಯಕ್ತಿಯೋರ್ವ ತನ್ನ ಅಮ್ಮನ ತಿಥಿಗೆ ದುಬೈನಿಂದ ವಾಪಾಸ್ ಬಂದಿದ್ದ. ಅಮ್ಮನ ತಿಥಿಗೆ 1,500 ಜನರನ್ನು ಆಹ್ವಾನಿಸಿದ್ದ ಆತ ಭರ್ಜರಿಯಾಗಿ ಊಟ ಹಾಕಿಸಿದ್ದ.  ಈ ವಿಷಯ ತಿಳಿದು, ದುಬೈನಿಂದ ಬಂದಿದ್ದರಿಂದ ಆತನನ್ನು ಹೋಂ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಆತನನ್ನು ಮಾತ್ರವಲ್ಲದೆ ತಿಥಿಗೆ ಬಂದು ಊಟ ಮಾಡಿ ಹೋಗಿದ್ದ ಇಡೀ ಕಾಲೋನಿಯನ್ನೇ ಸೀಲ್ ಮಾಡಲಾಗಿತ್ತು. ದುಬೈನಿಂದ ಬಂದಿದ್ದ ಆ ವ್ಯಕ್ತಿಯ ಜೊತೆಗೆ ಆತನ ಕುಟುಂಬದ 12 ಜನರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ 1,500 ಜನರಿಗೂ ಕೊರೋನಾ ಸೋಂಕಿನ ಭೀತಿ ತಟ್ಟಿದೆ.

ಇದನ್ನೂ ಓದಿ: ಕೊರೋನಾದಿಂದ ಅಮೆರಿಕದಲ್ಲಿ 24 ಗಂಟೆಯಲ್ಲಿ 1,480 ಸಾವು!; ವಿಶ್ವಾದ್ಯಂತ ಸಾವಿನ ಸಂಖ್ಯೆ 59,160ಕ್ಕೆ ಏರಿಕೆ

ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದುಬೈನಿಂದ ಅಮ್ಮನ ಅಂತ್ಯಕ್ರಿಯೆಗೆಂದು ಊರಿಗೆ ಬಂದಿದ್ದ ಸುರೇಶ್​ ಎಂಬಾತ ಮಾ. 20ರಂದು ತನ್ನ ಕಾಲೋನಿ ಮತ್ತು ಸಂಬಂಧಿಕರು ಸೇರಿ 1,500 ಜನರಿಗೆ ತಿಥಿಯ ಊಟ ಹಾಕಿಸಿದ್ದ. ಮಾ. 25ರಂದು ಸುರೇಶ್​ಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದ್ದರಿಂದ ಆತನನ್ನು ಮತ್ತು ಆತನ ಹೆಂಡತಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ನಂತರ ಆತನ ಹತ್ತಿರದ 23 ಸಂಬಂಧಿಕರನ್ನು ವೈದ್ಯರು ತಪಾಸಣೆ ನಡೆಸಿದಾಗ ಅವರಲ್ಲಿ 10 ಜನರಿಗೆ ಕೊರೋನಾ ಇರುವುದು ಖಚಿತವಾಗಿದೆ.

ಒಟ್ಟಾರೆ 12 ಸೋಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ತಿಥಿಯಲ್ಲಿ ಪಾಲ್ಗೊಂಡಿದ್ದವರೆಲ್ಲರ ಮಾಹಿತಿಯನ್ನೂ ಕಲೆಹಾಕಲಾಗುತ್ತಿದ್ದು, ಅವರ ಮೇಲೆ ನಿಗಾ ಇರಿಸಲಾಗಿದೆ.

ಇದನ್ನೂ ಓದಿ: ನಾನು, ಶ್ರೀರಾಮುಲು ಅಣ್ಣ-ತಮ್ಮಂದಿರಂತೆ ಇದ್ದೇವೆ, ನಮ್ಮ ನಡುವೆ ಮುನಿಸಿಲ್ಲ; ಸಚಿವ ಸುಧಾಕರ್ ಸ್ಪಷ್ಟನೆ
First published:April 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading