Video Viral: ಕೊರೋನಾ ಭೀತಿ; ಬಿಹಾರದ ಜೋಡಿಗೆ ವಿಡಿಯೋ ಕಾಲ್​ನಲ್ಲೇ ಮದುವೆ!

ಈ ಮದುವೆಯ 30 ಸೆಕೆಂಡ್ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಮದುಮಗಳ ಕುಟುಂಬಸ್ಥರು ಟಿವಿ ಮುಂದೆ ನಿಂತಿರುತ್ತಾರೆ. ಖಾಜಿ ಮದುವೆಗೆ ಒಪ್ಪಿಗೆಯೇ ಎಂದು ಕೇಳಿದಾಗ ಜೋಡಿಯಿಬ್ಬರೂ ಒಪ್ಪಿಕೊಳ್ಳುತ್ತಾರೆ.

news18-kannada
Updated:March 25, 2020, 2:03 PM IST
Video Viral: ಕೊರೋನಾ ಭೀತಿ; ಬಿಹಾರದ ಜೋಡಿಗೆ ವಿಡಿಯೋ ಕಾಲ್​ನಲ್ಲೇ ಮದುವೆ!
ಬಿಹಾರದಲ್ಲಿ ನಡೆದ ಆನ್​ಲೈನ್ ಮದುವೆ
  • Share this:
ನವದೆಹಲಿ (ಮಾ. 25): ಕೊರೋನಾ ವೈರಸ್‍ನಿಂದಾಗಿ ದೇಶದ ಬಹುತೇಕರ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಲಾಕ್​​ಡೌನ್​ಗೆ ಕರೆ ನೀಡಿರುವುದರಿಂದ ಯಾವುದೇ ಸಮಾರಂಭಗಳನ್ನು ಮಾಡುವಂತಿಲ್ಲ. ಮನೆಯಿಂದ ಹೊರಗೆ ಬರಲೂ ಹಿಂದೇಟು ಹಾಕುವಂತಾಗಿದೆ. ಹೀಗಾಗಿ, ಬಿಹಾರದ ಜೋಡಿಯೊಂದು ಆನ್​ಲೈನಲ್ಲಿಯೇ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉತ್ತರ ಪ್ರದೇಶದ ಹುಡುಗ ಮತ್ತು ಬಿಹಾರದ ಪಾಟ್ನಾದ ಹುಡುಗಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಕೊರೋನಾ ಭೀತಿಯಿಂದ ಸಮಾರಂಭಗಳನ್ನು ಮಾಡದಂತೆ ಸೂಚನೆ ನೀಡಿರುವುದರಿಂದ ಮೊದಲೇ ನಿಶ್ಚಯವಾಗಿದ್ದ ದಿನದಂದೇ ಮದುವೆ ಮಾಡಲು ನಿರ್ಧರಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡೂ ಕುಟುಂಬದವರ ಉಪಸ್ಥಿತಿಯಲ್ಲಿ ನಿಖಾ ನೆರವೇರಿಸಲಾಯಿತು.

ಇದನ್ನೂ ಓದಿ: ಕೊರೋನಾ ಪರಿಣಾಮ; ಸೌದಿ ಹುಡುಗನಿಗೂ ತೆಲಂಗಾಣದ ಹುಡುಗಿಗೂ ಆನ್​ಲೈನ್​ನಲ್ಲೇ ಮದುವೆ!

ಈ ಮದುವೆಯ 30 ಸೆಕೆಂಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮದುಮಗಳ ಕುಟುಂಬಸ್ಥರು ಟಿವಿ ಮುಂದೆ ನಿಂತಿರುತ್ತಾರೆ. ಖಾಜಿ ಮದುವೆಗೆ ಒಪ್ಪಿಗೆಯೇ ಎಂದು ಕೇಳಿದಾಗ ಜೋಡಿಯಿಬ್ಬರೂ ಒಪ್ಪಿಕೊಳ್ಳುತ್ತಾರೆ. ಆಗ ವಧುವನ್ನು ಕ್ಯಾಮೆರಾ ಎದುರು ಕರೆದುಕೊಂಡು ಬರಲಾಗುತ್ತದೆ. ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಮದುವೆ ಮಾಡಿಸಲಾಗುತ್ತದೆ.
ಇದೇ ರೀತಿ ಹಲವು ಪ್ರಕರಣಗಳು ನಡೆದಿವೆ. ಮುಸ್ಲಿಂ ಸಮುದಾಯದಲ್ಲಿ ಗಂಡು-ಹೆಣ್ಣಿಬ್ಬರೂ ಮದುವೆಯ ಶಾಸ್ತ್ರಗಳನ್ನು ಪಾಲಿಸಬೇಕಾದ ಅಗತ್ಯ ಇಲ್ಲದಿರುವುದರಿಂದ ಆನ್​ಲೈನ್​ನಲ್ಲಿ ನಿಖಾ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆ.

 
First published:March 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading