ನಾಳೆ ರಾತ್ರಿ 9 ಗಂಟೆಗೆ ನಿದ್ರೆ ಮಾಡಬೇಕೆನಿಸಿದರೆ ನಾನು ಮಲಗುತ್ತೇನೆ!; ದೀಪ ಹಚ್ಚೋ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

ನಾಳೆ ರಾತ್ರಿ 9 ಗಂಟೆಗೆ ದೀಪ ಹಚ್ಚುವುದು ಅಥವಾ ಮಲಗುವುದು ಜನರ ವೈಯಕ್ತಿಕ ವಿಚಾರ. ನನಗೆ ನಾಳೆ ಮಲಗಬೇಕು ಎನಿಸಿದರೆ ನಾನು ದೀಪ ಹಚ್ಚುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Sushma Chakre | news18-kannada
Updated:April 4, 2020, 12:06 PM IST
ನಾಳೆ ರಾತ್ರಿ 9 ಗಂಟೆಗೆ ನಿದ್ರೆ ಮಾಡಬೇಕೆನಿಸಿದರೆ ನಾನು ಮಲಗುತ್ತೇನೆ!; ದೀಪ ಹಚ್ಚೋ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
  • Share this:
ಕೊಲ್ಕತ್ತಾ (ಏ. 4): ಭಾನುವಾರ ರಾತ್ರಿ 9 ಗಂಟೆಗೆ ದೇಶದ ಎಲ್ಲ ಜನರೂ ಮನೆಯ ಲೈಟ್ ಆರಿಸಿ, ಮನೆಯ ಟೆರೇಸ್ ಅಥವಾ ಬಾಲ್ಕನಿಗೆ ಬಂದು ದೀಪ, ಟಾರ್ಚ್​ಗಳನ್ನು ಬೆಳಗಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಿಎಂ ಮೋದಿ, ಅದು ಅವರವರ ವೈಕ್ತಿಕ ವಿಚಾರ. ನನಗೆ ನಾಳೆ ರಾತ್ರಿ 9 ಗಂಟೆಗೆ ನಿದ್ರೆ ಮಾಡಬೇಕು ಎನಿಸಿದರೆ ಮಲಗುತ್ತೇನೆ ಎಂದು ಹೇಳಿದ್ದಾರೆ.

ನಾಳೆ ರಾತ್ರಿ 9 ಗಂಟೆಗೆ ದೀಪ ಹಚ್ಚುವುದು ಅಥವಾ ಮಲಗುವುದು ಜನರ ವೈಯಕ್ತಿಕ ವಿಚಾರ. ನನಗೆ ನಾಳೆ ಮಲಗಬೇಕು ಎನಿಸಿದರೆ ನಾನು ದೀಪ ಹಚ್ಚುವುದಿಲ್ಲ. ನಿಮಗೆ ಅವರು ಹೇಳಿದಂತೆ ದೀಪ ಹಚ್ಚಬೇಕೆನಿಸಿದರೆ ಹಚ್ಚಿ, ಆದರೆ, ಆ ಬಗ್ಗೆ ನನ್ನನ್ನು ಕೇಳಬೇಡಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮುಂದುವರೆದ ಕೊರೋನಾ ದಾಳಿ; 68ಕ್ಕೇರಿದ ಸಾವಿನ ಸಂಖ್ಯೆ, ಒಟ್ಟು 2902 ಪ್ರಕರಣಗಳು ದಾಖಲು

ಕೊರೋನಾ ವೈರಸ್ ದಾಳಿಯಿಂದ ತತ್ತರಿಸಿರುವ ಭಾರತದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ದೇಶದ ಜನರೆಲ್ಲರೂ ತಮ್ಮ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಏ. 5ಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮೊಂಬತ್ತಿ, ಹಣತೆ ಅಥವಾ ಮೊಬೈಲ್ ಟಾರ್ಚ್​ ಬೆಳಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದಾರೆ.

ಇದನ್ನೂ ಓದಿ: ಅಮ್ಮನ ತಿಥಿಗೆ ದುಬೈನಿಂದ ಬಂದು 1,500 ಜನಕ್ಕೆ ಊಟ ಹಾಕಿಸಿದ ಕೊರೋನಾ ಸೋಂಕಿತ!
First published:April 4, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading