• Home
 • »
 • News
 • »
 • coronavirus-latest-news
 • »
 • Coronavirus Updates: ಕೊರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕೃತಗೊಳಿಸಿದ ಸ್ಪೇನ್

Coronavirus Updates: ಕೊರೋನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕೃತಗೊಳಿಸಿದ ಸ್ಪೇನ್

ಕೊರೋನಾ ವೈರಸ್

ಕೊರೋನಾ ವೈರಸ್

Corona Virus News Updates: ಆರ್ಥಿಕರಾಗಿ ಸಬಲರಲ್ಲದೆ ಇರುವವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕೃತಗೊಳಿಸುವ ಮೂಲಕ ಸ್ಪೇನ್​ ಸರ್ಕಾರ ಉಚಿತ ಸೇವೆ ಲಭ್ಯವಾಗುವಂತೆ ಮಾಡಿದೆ.

 • Share this:

  ಮ್ಯಾಡ್ರಿಡ್​ (ಮಾ.17):  ಸ್ಪೇನ್​ನಲ್ಲಿ ಕೊರೋನಾ ವೈರಸ್​ ತನ್ನ ಅಟ್ಟಹಾಸ ಮುಂದುವರಿಸಿದ್ದು, 342 ಜನರನ್ನು ಬಲಿ ತೆಗೆದುಕೊಂಡಿದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಅಲ್ಲಿನ ಸರ್ಕಾರ ದೇಶದ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕೃತಗೊಳಿಸಿದೆ. ಈ ಮೂಲಕ ಭೀಕರ ವೈರಸ್​ ವಿರುದ್ಧ ಹೋರಾಡಲು ಪ್ರಬಲ ಅಸ್ತ್ರ ಪ್ರಯೋಗಿಸಿದೆ.

  ಜನವರಿ ಅಂತ್ಯಕ್ಕೆ ಕೊರೋನಾ ವೈರಸ್​ ಚೀನಾದಲ್ಲಿ ತನ್ನ ಪ್ರಭಾವ ಬೀರಲು ಆರಂಭಿಸಿತ್ತು. ಮೊದಲು 30 ಜನರು ಮೃತಪಟ್ಟಿದ್ದರು. ಈ ಸಂಖ್ಯೆ ಈಗ 3,213ಕ್ಕೆ ಏರಿಕೆ ಆಗಿದೆ. ಇದು ಈಗ ಬೇರೆ ಬೇರೆ ದೇಶಗಳಿಗೆ ಹಬ್ಬಿದ್ದು, ಸ್ಪೇನ್​ ಕೂಡ ಈ ವೈರಸ್​ನಿಂದ ಹಾನಿಗೊಳಗಾದ ದೇಶವಾಗಿದೆ. ಹೀಗಾಗಿ, ಸ್ಪೇನ್​​ ಪ್ರಧಾನಿ ಪೆಡ್ರೋ ಸಾಂಚೆ ಸರ್ಕಾರ ಸೋಮವಾರ ಈ ಮಹತ್ವದ ಘೋಷಣೆ ಮಾಡಿದೆ.

  ಆರ್ಥಿಕರಾಗಿ ಸಬಲರಲ್ಲದೆ ಇರುವವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕೃತಗೊಳಿಸುವ ಮೂಲಕ ಸ್ಪೇನ್​ ಸರ್ಕಾರ ಉಚಿತ ಸೇವೆ ಲಭ್ಯವಾಗುವಂತೆ ಮಾಡಿದೆ.

  ಇದನ್ನೂ ಓದಿ: ಇಟಲಿಯಲ್ಲಿ ನಿಲ್ಲದ ಕೊರೋನಾ ಹಾವಳಿ; ಭಾನುವಾರ ಒಂದೇ ದಿನ 368 ಸಾವು, 3,500 ಹೊಸ ಪ್ರಕರಣ

  ಇನ್ನು, ಇಟಲಿಯಲ್ಲಿ ಕೊರೋನಾ ಹಾವಳಿ ಮುಂದುವರಿದಿದೆ. ಸೋಮವಾರ ಒಂದೇ ದಿನ 3,233 ಹೊಸ ಪ್ರಕರಣ ದಾಖಲಾಗಿವೆ. 349 ಜನರು ಮೃತಪಟ್ಟಿದ್ದಾರೆ. ಇದು ಇಟಲಿ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಇಟಲಿ ಹಿಂದಿಕ್ಕುವ ಸಾಧ್ಯತೆ ಇದೆ.

  ಚೀನಾದಲ್ಲಿ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ದಿನಕ್ಕೆ 10-15 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿನ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡಿದೆ. ಇನ್ನು, ಜರ್ಮನಿ, ಫ್ರಾನ್ಸ್​ ಹೊಸ ಪ್ರಕರಣಗಳ ಸಂಖ್ಯೆ  700ರ ಗಡಿ ದಾಟಿದೆ.

  First published: