• Home
  • »
  • News
  • »
  • coronavirus-latest-news
  • »
  • ಮಂಗಳೂರು ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಶ್ರೀರಾಮುಲು ಭಾಗಿ; ಬೀಚ್​​ನಲ್ಲಿ ಜನ ಕಂಡ್ರೆ ದಂಡ ಹಾಕಿ ಎಂದ ಖಾದರ್

ಮಂಗಳೂರು ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಶ್ರೀರಾಮುಲು ಭಾಗಿ; ಬೀಚ್​​ನಲ್ಲಿ ಜನ ಕಂಡ್ರೆ ದಂಡ ಹಾಕಿ ಎಂದ ಖಾದರ್

ಸಚಿವ ಬಿ ಶ್ರೀರಾಮುಲು

ಸಚಿವ ಬಿ ಶ್ರೀರಾಮುಲು

ಕೊರೋನಾ ವೈರಸ್​ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಿದರೆ ಜನರು ಬೀಚ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಮಂಗಳೂರಿನ ಎಲ್ಲಾ ಬೀಚ್​​ಗಳು ಜನರಿಂದ ತುಂಬಿವೆ. ಮನೆಯಿಂದ ಜನರು ಹೊರಬಾರದಂತೆ ಮಾಡಬೇಕು. ಬೀಚ್​ಗಳಲ್ಲಿ ಜನರು ಕಂಡರೆ ದಂಡ ಹಾಕಬೇಕು ಎಂದು ಖಾದರ್​ ಹೇಳಿದರು

  • Share this:

ಮಂಗಳೂರು (ಮಾ.17): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕೊರೋನಾ ತಡೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ.


ಇಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಶ್ರೀರಾಮುಲು ಪಾಲ್ಗೊಂಡಿದ್ದರು. ಈ ವೇಳೆ ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಅವರು ಮಾತನಾಡಿದರು. “ಕೊರೋನಾ ವೈರಸ್ ಬಗ್ಗೆ ಭಯದ ವಾತವರಣ ಸೃಷ್ಟಿಯಾಗಿದೆ. ಸರ್ಕಾರ ಇದನ್ನು ಸವಾಲಾಗಿ ಸ್ವೀಕರಿಸಿದೆ. ಕರ್ನಾಟಕಕ್ಕೆ ಆಗಮಿಸುತ್ತಿರುವವರನ್ನು ಥರ್ಮಲ್ ಸ್ಕ್ಯಾನಿಂಗ್​ಗೆ ಒಳಪಡಿಸಲಾಗುತ್ತಿದೆ. ಈವರೆಗೆ 1.75 ಸಾವಿರ ಜನರು ಈ ಸ್ಕ್ಯಾನಿಂಗ್​ಗೆ ಒಳಪಟ್ಟಿದ್ದಾರೆ,” ಎಂದು ಅವರು ಹೇಳಿದರು.


“ರಾಜ್ಯದಲ್ಲಿ ಈವರೆಗೆ 10 ಜನರಲ್ಲಿ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಅಮೆರಿಕ, ಇಂಗ್ಲೆಂಡ್​ನಿಂದ  ಬಂದ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪಾಸಿಟಿವ್​ ಇರುವುದು ಖಚಿತವಾಗಿದೆ. ಕಲ್ಬುರ್ಗಿಯಲ್ಲಿ ಮೃತಪಟ್ಟ ವ್ಯಕ್ತಿಯ ನಾಲ್ಕು ಆಪ್ತರ ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಕೇಸ್ ಕಾಣಿಸಿದೆ,” ಎಂದು ಮಾಹಿತಿ ನೀಡಿದರು.


ಬೀಚ್​ಗೆ ಜನ ಬಂದ್ರೆ ಫೈನ್​ ಹಾಕಿ:


ಕೊರೋನಾ ವೈರಸ್​ ಹರಡಬಾರದು ಎಂದು ರಜೆ ನೀಡಿದರೆ ಜನರು ಮಜಾ ಮಾಡುತ್ತಿದ್ದಾರೆ. ಬೀಚ್​ನಲ್ಲಿ ಜನರು ಕಂಡರೆ ದಂಡ ಹಾಕಿ ಎಂದು ಮಾಜಿ ಸಚಿವ ಯು.ಟಿ ಖಾದರ್​ ಆಗ್ರಹಿಸಿದ್ದಾರೆ.


ಈ ಬಗ್ಗೆ ಸಭೆಯಲ್ಲಿ ಮಾತನಾಡಿದ ಅವರು, “ಕೊರೋನಾ ವೈರಸ್​ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ನೀಡಿದರೆ ಜನರು ಬೀಚ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಮಂಗಳೂರಿನ ಎಲ್ಲಾ ಬೀಚ್​​ಗಳು ಜನರಿಂದ ತುಂಬಿವೆ. ಮನೆಯಿಂದ ಜನರು ಹೊರಬಾರದಂತೆ ಮಾಡಬೇಕು. ಬೀಚ್​ಗಳಲ್ಲಿ ಜನರು ಕಂಡರೆ ದಂಡ ಹಾಕಬೇಕು,” ಎಂದು ಆಗ್ರಹಿಸಿದರು.

Published by:Rajesh Duggumane
First published: