ಲಾಕ್‌ಡೌನ್ ನಡುವೆಯೂ ಸತ್ಯಾಗ್ರಹಕ್ಕೆ ಕರೆ; ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಗೃಹ ಬಂಧನ

ಈ ಹಿಂದೆಯೂ ಸಹ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅದನ್ನು ವಿರೋಧಿಸಿ ಬೀದಿಗೆ ಇಳಿದಿದ್ದರು.

news18-kannada
Updated:March 28, 2020, 1:50 PM IST
ಲಾಕ್‌ಡೌನ್ ನಡುವೆಯೂ ಸತ್ಯಾಗ್ರಹಕ್ಕೆ ಕರೆ; ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ಗೆ ಗೃಹ ಬಂಧನ
ವಾಟಾಳ್​ ನಾಗರಾಜ್​
  • Share this:
ಬೆಂಗಳೂರು (ಮಾರ್ಚ್‌ 28); ದೇಶಾದ್ಯಂತ ಲಾಕ್‌ಡೌನ್ ನಡುವೆಯೂ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಗೃಹ ಬಂಧನಕ್ಕೆ ಒಳಪಡಿಸಿದ್ದಾರೆ.

ರಾಜ್ಯದಲ್ಲಿ ಎಲ್ಲಾ ದೇವಸ್ಥಾನಗಳು ಮುಚ್ಚಲ್ಪಟ್ಟಿವೆ, ಅದನ್ನ ತೆರೆದು ಪೂಜೆ ಮಾಡಬೇಕು. ಕೊರೊನಾ ವಿಚಾರವಾಗಿ ರಾಜ್ಯದ ಎಲ್ಲಾ ಕಡೆಗಳಲ್ಲೂ ಕಟ್ಟೆಚ್ಚರ ವಹಿಸಬೇಕು ಹಾಗೂ ಇಂತಹ ಸಂದರ್ಭದಲ್ಲಿ ಪೊಲೀಸರು ಸಂಯಮದಿಂದ ವರ್ತಿಸಬೇಕು ಎಂದು ಒತ್ತಾಯಿಸಿ  ಇಂದು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ದೇವಸ್ಥಾನದ ಮುಂದೆ ಏಕಾಂಗಿ ಸತ್ಯಾಗ್ರಹಕ್ಕೆ ವಾಟಾಳ್ ನಾಗರಾಜ್ ಕರೆ ನೀಡಿದ್ದರು.

ಆದರೆ, ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಸತ್ಯಾಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬೆಂಗಳೂರು ನಗರ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಗೃಹ ಬಂಧನದಲ್ಲಿರಿಸಿದೆ. ಈ ಹಿಂದೆಯೂ ಸಹ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವ್ಯಾಪಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಅದನ್ನು ವಿರೋಧಿಸಿ ಬೀದಿಗೆ ಇಳಿದಿದ್ದರು.

ಇದನ್ನೂ ಓದಿ : ಕೊರೋನಾ ಅಟ್ಟಹಾಸ; ರಾಮನಗರದ ಜಿಲ್ಲಾಧಿಕಾರಿ ಭವನದಲ್ಲಿ ಸಚಿವ ಶ್ರೀರಾಮುಲು ಸಭೆ
First published: March 28, 2020, 1:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading