ಕಲಬುರ್ಗಿ ಸಂಸದ ಉಮೇಶ್ ಜಾಧವ್​, ಶಾಸಕ ಅವಿನಾಶ್​ಗೂ ಕೊರೋನಾ ಸೋಂಕು

ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್ ಮತ್ತು ಅವರ ಮಗ, ಚಿಂಚೋಳಿ ಕ್ಷೇತ್ರದ ಶಾಸಕ ಡಾ. ಅವಿನಾಶ್ ಜಾಧವ್​ಗೆ ಅವರಿಗೂ ಕೊರೋನಾ ಸೋಂಕು ತಗುಲಿದೆ.

ಉಮೇಶ್ ಜಾಧವ್- ಅವಿನಾಶ್ ಜಾಧವ್

ಉಮೇಶ್ ಜಾಧವ್- ಅವಿನಾಶ್ ಜಾಧವ್

  • Share this:
ಕಲಬುರ್ಗಿ (ಆ. 20): ಕಲಬುರ್ಗಿ ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಜೊತೆಗೆ ಜಾಧವ್ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್​ಗೆ ಕೂಡ ಕೊರೋನಾ ಸೋಂಕು ತಗುಲಿದೆ. ಡಾ. ಅವಿನಾಶ್ ಜಾಧವ್ ಚಿಂಚೋಳಿ ಕ್ಷೇತ್ರದ ಶಾಸಕ. ತಂದೆ ಮತ್ತು ಮಗ ಇಬ್ಬರೂ ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾಲ್ಕು ದಿನಗಳ ಹಿಂದಷ್ಟೇ ಉಮೇಶ್ ಜಾಧವ್ ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಮಾಡಿದ್ದರು. ತಮಗೆ ಮತ್ತು ತಮ್ಮ ಮಗನಿಗೆ  ಕೊರೋನಾ ಪಾಸಿಟಿವ್ ಬಂದಿದೆ ಎಂದು ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿದ್ದವರಿಗೆ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಜನಪ್ರತಿನಿಧಿಗಳನ್ನೂ ಕೊರೋನಾ ಬೆಂಬಿಡದೆ ಕಾಡಲಾರಂಭಿಸಿದೆ. ಈ ಹಿಂದೆ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಜೇವರ್ಗಿ ಶಾಸಕ ಅಜಯಸಿಂಗ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು. ಅವರಿಬ್ಬರೂ ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಗುಣಮುಖರಾಗಿ ಕಲಬುರ್ಗಿಗೆ ಬಂದಿರೋ ಬೆನ್ನ ಹಿಂದೆಯೇ ಕಲಬುರ್ಗಿ ಸಂಸದ ಹಾಗೂ ಚಿಂಚೋಳಿ ಶಾಸಕರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದಿರಂದಾಗಿ ಅವರ ಹಿಂಬಾಲಕರು, ಅವರ ಜೊತೆ ಅಡ್ಡಾದಿದವರಿಗೆ ಕೊರೋನಾ ಭೀತಿ ಸೃಷ್ಟಿಯಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ನಿನ್ನೆ ಕೊರೋನಾದಿಂದ ಮೂವರು ಸಾವನ್ನಪ್ಪಿದ್ದಾರೆ. ಕಲಬುರ್ಗಿಯ ರಾಮನಗರದ 73 ವರ್ಷದ ವೃದ್ಧ, ಕಲಬುರ್ಗಿ ತಾಲೂಕಿನ ಶರಣಸಿರಸಗಿಯ 65 ವರ್ಷದ ಪುರುಷ ಹಾಗೂ ಕಲಬುರ್ಗಿಯ ಆಳಂದ ಚೆಕ್ ಪೋಸ್ಟ್ ಬಳಿಯ 55 ವರ್ಷದ ಪುರುಷ ಸಾವಿಗೀಡಾಗಿದ್ದಾರೆ. ಮೃತರ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಬುಧವಾರ ಜಿಲ್ಲೆಯಲ್ಲಿ 154 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 9,419ಗೆ ಏರಿಕೆಯಾಗಿದೆ. ನಿನ್ನೆ 247 ಸೋಂಕಿತರು ಡಿಸ್ಚಾರ್ಜ್ ಆಗಿದ್ದು, ಡಿಸ್ಚಾರ್ಜ್ ಆದವರ ಸಂಖ್ಯೆ 7378ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1,866 ಆ್ಯಕ್ಟಿವ್ ಕೇಸ್ ಗಳಿವೆ.

ಇದನ್ನೂ ಓದಿ:  Coronavirus India: ಭಾರತದಲ್ಲಿ ಒಂದೇ ದಿನ 70 ಸಾವಿರ ಕೊರೋನಾ ಕೇಸ್; 28 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಕಲ್ಯಾಣ ಕರ್ನಾಟಕದಲ್ಲಿಯೂ ಕೊರೋನಾ ಅಬ್ಬರ;

ಕಲ್ಯಾಣ ಕರ್ನಾಟಕದಲ್ಲಿ ಕೊರೋನಾ ರುದ್ರನರ್ತನ ಮುಂದುವರೆದಿದೆ. ಈ ಭಾಗದ ಜಿಲ್ಲೆಗಳಲ್ಲಿ ಬುಧವಾರ 16 ಸೋಂಕಿತರ ಸಾವನ್ನಪ್ಪಿದ್ದಾರೆ. ಈ ಪೈಕಿ 12 ಜನ ಪುರುಷರು ಹಾಗೂ ನಾಲ್ವರು ಮಹಿಳೆಯರು. ಕೊಪ್ಪಳ ಎಂಟು, ಕಲಬುರ್ಗಿ ಹಾಗೂ ಬೀದರ್ ತಲಾ ಮೂರು ಮತ್ತು ರಾಯಚೂರು ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರ್ಗಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ 100 ದಾಟಿದೆ.

ಕಲಬುರ್ಗಿ 154, ರಾಯಚೂರು 153, ಕೊಪ್ಪಳ 133, ಬೀದರ್ 43 ಹಾಗೂ ಯಾದಗಿರಿ 41 ಜನರಿಗೆ ಸೋಂಕು. ಕಲ್ಯಾಣ ಕರ್ನಾಟಕದಲ್ಲಿ ನಿನ್ನೆ 524 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಕೆ 26,761 ಕ್ಕೆ ಏರಿಕೆಯಾಗಿದೆ. ಈ ಭಾಗದಲ್ಲಿ 753 ಸೋಂಕಿತರು ಡಿಸ್ಚಾರ್ಜ್. ಕಲಬುರ್ಗಿ 247, ರಾಯಚೂರು 159, ಬೀದರ್ 151, ಕೊಪ್ಪಳ 131 ಡಿಸ್ಚಾರ್ಚ್ ಆಗಿದ್ದಾರೆ.
Published by:Sushma Chakre
First published: