ಹೇಗಿದ್ದೀರಿ ಎಂದು ಕಾರಜೋಳ ಪ್ರಶ್ನೆ; ಇನ್ನೂ ಬದುಕಿದ್ದೀವಿ ಎಂದ ಕಂಟೈನ್ಮೆಂಟ್ ಝೋನ್ ಜನ

ಇನ್ನೂ ನಾವು ಬದುಕಿಯೇ ಇದ್ದೇವೆ. ನಮ್ಮ ಏರಿಯಾಕ್ಕೆ ಬಹಳ ಬೇಗ ಬಂದು, ನಮ್ಮ ಬಗ್ಗೆ ಕಾಳಜಿ ತೋರಿಸುತ್ತೀದ್ದೀರಿ. ನಾವು ಇನ್ನೂ ಬದುಕಿಯೇ ಇದ್ದೇವೆ ಎಂಬ ವ್ಯಂಗ್ಯ ಮಾತುಗಳಿಗೆ ಉಸ್ತುವಾರಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋವಿಂದ ಕಾರಜೋಳ (ಎಡಬದಿ)

ಗೋವಿಂದ ಕಾರಜೋಳ (ಎಡಬದಿ)

  • Share this:
ಕಲಬುರ್ಗಿ: ಕಲಬುರ್ಗಿಯಲ್ಲಿ ಕೊರೋನಾ ವ್ಯಾಪಕಗೊಳ್ಳುತ್ತಿದ್ದು, ಜಿಲ್ಲೆಯಾದ್ಯಂತ 20 ಕಂಟೈನ್ಮೆಂಟ್ ಝೋನ್ ಸ್ಥಾಪಿಸಲಾಗಿದೆ. ಅತಿ ಹೆಚ್ಚು ಸೋಂಕಿತರಿಗೆ ಕಾರಣವಾಗಿರೋ ಮೋಮಿನಪುರ ಕಂಟೈನ್ ಮೆಂಟ್ ಝೋನ್​ಗೆ ಇಂದು ಡಿಸಿಎಂ ಗೋವಿಂದ ಕಾರಜೋಳ ಭೇಟಿ ನೀಡಿದ್ದರು. ಸಚಿವರಿಗಾಗಿ ಕಾದು ಕಾದು ಸುಸ್ತಾಗಿದ್ದ ಕಂಟೈನ್ಮೆಂಟ್ ಜನ, ಹೇಗಿದ್ದೀರಿ ಎಂಬ ಕಾರಜೋಳರ ಪ್ರಶ್ನೆಗೆ ಇನ್ನೂ ಬದುಕಿಯೇ ಇದ್ದೇವೆ ಎಂದು ಗರಂ ಆಗಿ ಉತ್ತರ ಕೊಟ್ಟಿದ್ದಾರೆ.

ಕಲಬುರ್ಗಿಯ ಕಂಟೈನ್ಮೆಂಟ್ ಝೋನ್ ಗೆ ಭೇಟಿ ನೀಡಿದ ವೇಳೆ ಡಿಸಿಎಂ ಗೋವಿಂದ ಕಾರಜೋಳ ಮತ್ತು ಸ್ಥಳೀಯ ನಾಯಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಬೆಳಕಿಗೆ ಬಂದಿದೆ. ಮೋಮಿನಪುರ ಕಂಟೈನ್​ಮೆಂಟ್ ಝೋನ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಆ ಪ್ರದೇಶಕ್ಕೆ ಭೇಟಿ ನೀಡಲು ಹೊರಟಿದ್ದರು. ಅವರನ್ನು ಸ್ವಾಗತಿಸಲು, ಸ್ಥಳೀಯ ಮುಖಂಡರ ಜೊತೆ ಚರ್ಚೆಗೆ ಅವಕಾಶ ಸಿಗಲೆಂದು ಮುಸ್ಲಿಂ ಚೌಕ್ ಬಳಿ ಟೆಂಟ್ ಹಾಕಲಾಗಿತ್ತು. ಕಾರಜೋಳ ಕಾರಿನಿಂದ ಇಳಿಯುತ್ತಿದ್ದಂತೆಯೇ ಸ್ವಾಗತ ಕೋರಲಾಯಿತು.

ಇದನ್ನೂ ಓದಿ: ಮೆಜೆಸ್ಟಿಕ್​ನಲ್ಲಿ ಜನ ಜಂಗುಳಿ; ಕೆಎಸ್​ಆರ್​ಟಿಸಿ ಬಸ್​ಗಳ ಮೂಲಕ ಊರಿಗೆ ತೆರಳಿದ ಸಾರ್ವಜನಿಕರು

ಕಾರಿನಿಂದ ಇಳಿದು ಟೆಂಟ್ ಬಳಿ ಬರುತ್ತಿರಬೇಕಾದರೆ ಕಾರಜೋಳ ಅವರು ಹೇಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಲ್ಲಿದ್ದವರು ಇನ್ನೂ ಬದುಕಿದ್ದೇವೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಕಾಂಗ್ರೆಸ್ ನಾಯಕ ಮಜರ್ ಆಲಂ ಅವರಿಂದ ಬಂದ ಉತ್ತರಕ್ಕೆ ಕಾರಜೋಳ ಕುಪಿತಗೊಂಡರು. ಇನ್ನೂ ನಾವು ಬದುಕಿಯೇ ಇದ್ದೇವೆ. ನಮ್ಮ ಏರಿಯಾಕ್ಕೆ ಬಹಳ ಬೇಗ ಬಂದು, ನಮ್ಮ ಬಗ್ಗೆ ಕಾಳಜಿ ತೋರಿಸುತ್ತೀದ್ದೀರಿ. ನಾವು ಇನ್ನೂ ಬದುಕಿಯೇ ಇದ್ದೇವೆ ಎಂಬ ವ್ಯಂಗ್ಯ ಮಾತುಗಳಿಗೆ ಉಸ್ತುವಾರಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಈ ರೀತಿ ವರ್ತಿಸಿದರೆ ನಿಮ್ಮೊಂದಿಗೆ ಮಾತಾಡಲ್ಲ ಅಂತ ಕಾರಜೋಳ ಸಿಟ್ಟು ತೋರಿಸಿ ಅಲ್ಲಿಂದ ವಾಪಸ್ಸಾಗಲು ಮುಂದಾದರು. ಸ್ಥಳೀಯ ಶಾಸಕಿ ಖನೀಸ್ ಫಾತಿಮಾ ಮನವೊಲಿಕೆಗೆ ಯತ್ನಿಸಿದರಾದರೂ, ಕಾರಜೋಳ ಅವರು ಸಿಟ್ಟಿನಿಂದಲೇ ಕಾರು ಹತ್ತಿ ಹೊರಟು ಹೋದರು. ಅವರ ಹಿಂದೆಯೇ ಅಧಿಕಾರಿಗಳ ತಂಡವೂ ವಾಪಸ್ಸಾಯಿತು. ಕಾರಜೋಳ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗ್ರೀನ್​​​ ಜೋನ್​​ ಜಿಲ್ಲೆಗಳಲ್ಲಿ ಶೇ.100ರಷ್ಟು ಸರ್ಕಾರಿ ನೌಕರರು ಹಾಜರಾಗುವಂತೆ ರಾಜ್ಯ ಸರ್ಕಾರ ಆದೇಶ

ನಮ್ಮ ಪ್ರದೇಶಕ್ಕೆ ಬಂದು, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆಂದು ಗಂಟೆಗಟ್ಟಲೆ ಕಾಯುತ್ತಾ ಕುಳಿತಿದ್ದವೆ. ಆದರೆ ಏಕಾಏಕಿ ಬಂದು 30 ಸೆಕೆಂಡುಗಳಲ್ಲಿಯೇ ಏಕಾಏಕಿ ವಾಪಸ್ಸಾಗಿದ್ದಾರೆ. ನಾಮಕಾವಸ್ತೆ ಬಂದು ಹೋಗುವವರು ನಮಗೆ ಜಿಲ್ಲಾ ಉಸ್ತುವಾರಿ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಮುಸ್ಲಿಂ ಚೌಕ್​ನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ವರದಿ: ಶಿವರಾಮ ಅಸುಂಡಿ

First published: