• Home
  • »
  • News
  • »
  • coronavirus-latest-news
  • »
  • ಆರೋಗ್ಯ ಇಲಾಖೆ ಎಡವಟ್ಟು; ಪಾಸಿಟಿವ್ ಬಂದಿದ್ರೂ ವೃದ್ಧೆಯನ್ನು ಮನೆಯಲ್ಲೇ ಬಿಟ್ಟು ಹೋದ ಸಿಬ್ಬಂದಿ

ಆರೋಗ್ಯ ಇಲಾಖೆ ಎಡವಟ್ಟು; ಪಾಸಿಟಿವ್ ಬಂದಿದ್ರೂ ವೃದ್ಧೆಯನ್ನು ಮನೆಯಲ್ಲೇ ಬಿಟ್ಟು ಹೋದ ಸಿಬ್ಬಂದಿ

ಕೊರೋನಾ ಸೋಂಕಿತ ವೃದ್ದೆಯನ್ನು ಕರೆದೊಯ್ಯದೆ ಹೋಗುತ್ತಿರುವ ಆ್ಯಂಬುಲೆನ್ಸ್

ಕೊರೋನಾ ಸೋಂಕಿತ ವೃದ್ದೆಯನ್ನು ಕರೆದೊಯ್ಯದೆ ಹೋಗುತ್ತಿರುವ ಆ್ಯಂಬುಲೆನ್ಸ್

ಮನೆಯಲ್ಲಿರುವ ಮಹಿಳೆಯರಿಗೆ ವೃದ್ದೆಯನ್ನು ಎತ್ತಿಕೊಂಡು ಬರಲು ಆಗಿಲ್ಲ. ಹೀಗಾಗಿ ಕೆಲಹೊತ್ತು ನಿಂತ ಆ್ಯಂಬುಲೆನ್ಸ್ ಸಿಬ್ಬಂದಿ ಮರಳಿ ಹೋಗಿದ್ದಾರೆ. ಬೆಳಿಗ್ಗೆ ಫೋನ್ ಮಾಡಿದರೂ ಸಹ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಬಂದು ಕರೆದೊಯ್ಯುತ್ತಾರೆ ಬಿಡಿ ಎಂದ ನಿರ್ಲಕ್ಷ್ಯದ ಉತ್ತರ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ಕಲಬುರ್ಗಿ(ಜು.08): ಕಲಬುರ್ಗಿಯ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.  ನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತೊಂದು ಮಹಾ ಎಡವಟ್ಟು ಮಾಡಿದೆ. ವೃದ್ದೆಗೆ ಕೊರೋನಾ ದೃಢವಾಗಿದ್ದರೂ ಸಹ ಆ್ಯಂಬುಲೆನ್ಸ್​ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಮನೆಯಲ್ಲೇ ಬಿಟ್ಟು ಹೋಗಿ ಅಮಾನವೀಯತೆ ತೋರಿದ್ದಾರೆ.

ಕಲಬುರ್ಗಿಯ ಅತ್ತರ್ ಕಂಪೌಂಡ್ ನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಮೂರನೇ ಮಹಡಿಯಲ್ಲಿರುವ ಮನೆಯಲ್ಲೇ ವಾಸವಾಗಿರು ವೃದ್ದೆಗೆ ಕಾಲು ಮುರಿದಿತ್ತು. ಹೀಗಾಗಿ ನಡೆದುಕೊಂಡು ಬರಲು ಸಾಧ್ಯವಾಗಿರಲಿಲ್ಲ. ವೃದ್ದೆಯ ಮನೆಯಲ್ಲಿ ಮತ್ತಿಬ್ಬರು ಮಹಿಳೆಯರು ಮಾತ್ರ ಇದ್ದು, ಅವರಿಗೂ ವೃದ್ದೆಯನ್ನು ಎತ್ತಿಕೊಂಡು ಬರಲು ಆಗಿಲ್ಲ. ವೃದ್ದೆಯನ್ನು ಎತ್ತಿಕೊಂಡು ಬಂದು ಆ್ಯಂಬುಲೆನ್ಸ್ ನಲ್ಲಿ ಕೂಡಿಸದ ಸಿಬ್ಬಂದಿ, ನೀವೆ ಕರೆದುಕೊಂಡು ಬಂದು ಆ್ಯಂಬುಲೆನ್ಸ್ ನಲ್ಲಿ ಕುಳ್ಳರಿಸಿದರೆ ಮಾತ್ರ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ.

ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ಬೇಜವಾಬ್ದಾರಿತನ; ಸಿಎಂ ಬಿಎಸ್​ ಯಡಿಯೂರಪ್ಪ ತುರ್ತು ಸಭೆ

ಆದರೆ ಮನೆಯಲ್ಲಿರುವ ಮಹಿಳೆಯರಿಗೆ ವೃದ್ದೆಯನ್ನು ಎತ್ತಿಕೊಂಡು ಬರಲು ಆಗಿಲ್ಲ. ಹೀಗಾಗಿ ಕೆಲಹೊತ್ತು ನಿಂತ ಆ್ಯಂಬುಲೆನ್ಸ್ ಸಿಬ್ಬಂದಿ ಮರಳಿ ಹೋಗಿದ್ದಾರೆ. ಬೆಳಿಗ್ಗೆ ಫೋನ್ ಮಾಡಿದರೂ ಸಹ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಬಂದು ಕರೆದೊಯ್ಯುತ್ತಾರೆ ಬಿಡಿ ಎಂದ ನಿರ್ಲಕ್ಷ್ಯದ ಉತ್ತರ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಆರೋಗ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೊರೋನಾ ಸೋಂಕು ದೃಢವಾದರೂ 70 ವರ್ಷದ ವೃದ್ಧೆ ಸದ್ಯ ಮನೆಯಲ್ಲೇ ಇದ್ದಾರೆ. ಆಕೆಗೆ ಏನಾದ್ರೂ ಆದ್ರೆ ಹೇಗೆ ಎಂದು ಮನೆ ಸದಸ್ಯರು ಕಂಗಾಲಾಗಿ ಕುಳಿತಿದ್ದಾರೆ.

Published by:Latha CG
First published: