ಕ್ವಾರಂಟೈನ್ ಗೆ ಹೋಗಲು ನಿರಾಕರಣೆ ; ಆತ್ಮಹತ್ಯೆಯ ಬೆದರಿಕೆ ಹಾಕಿದ ವಲಸೆ ಕಾರ್ಮಿಕರು

Kalaburagi Coronavirus News: ತಡರಾತ್ರಿ ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿಳಿದ ಕಾರ್ಮಿಕರು, ಕ್ವಾರಂಟೈನ್ ಕೇಂದ್ರಕ್ಕೆ ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾರೆ.

news18-kannada
Updated:May 13, 2020, 12:51 PM IST
ಕ್ವಾರಂಟೈನ್ ಗೆ ಹೋಗಲು ನಿರಾಕರಣೆ ; ಆತ್ಮಹತ್ಯೆಯ ಬೆದರಿಕೆ ಹಾಕಿದ ವಲಸೆ ಕಾರ್ಮಿಕರು
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಮೇ.13): ಕ್ವಾರಂಟೈನ್ ಕೇಂದ್ರಕ್ಕೆ ನಮ್ಮನ್ನು ಕಳುಹಿಸಿದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುಂಬೈನಿಂದ ಕಲಬುರ್ಗಿಗೆ ಆಗಮಿಸಿದ ವಲಸೆ ಕಾರ್ಮಿಕರು ಎಚ್ಚರಿಸಿದ ಘಟನೆ ನಡೆದಿದೆ. ಮುಂಬೈಯಿಂದ ಕಲಬುರ್ಗಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಕಾರ್ಮಿಕರನ್ನು ಅಧಿಕಾರಿಗಳು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ತಮ್ಮನ್ನು ನೇರವಾಗಿ ಮನೆಗಳಿಗೆ ಕಳುಹಿಸಿಕೊಡುವಂತೆ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಸಾರಿಗೆ ಬಸ್ ಮೂಲಕ ಕಲಬುರ್ಗಿಗೆ ಆಗಮಿಸಿದ ಸುಮಾರು 60 ಜನ ವಲಸೆ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.

ತಡರಾತ್ರಿ ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿಳಿದ ಕಾರ್ಮಿಕರು, ಕ್ವಾರಂಟೈನ್ ಕೇಂದ್ರಕ್ಕೆ ಹೋಗಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಸಂಸದ ಉಮೇಶ ಜಾಧವ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಕ್ವಾರಂಟೈನ್‌ಗೆ ಕಳಿಸುವುದಾದರು ಮುಂಬೈನಿಂದ ಯಾಕೆ ಕರೆಯಿಸಿದ್ರಿ ಎಂದು ಪ್ರಶ್ನಿಸಿದ್ದಾರೆ. ನಮ್ಮನ್ನು ಕರೆಸಿ ಅಪಮಾನ ಮಾಡುತ್ತಿದ್ದಿರಿ ಎಂದು ಜಾಧವ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮನೆಗೆ ಕಳಿಸಿ ಇಲ್ಲವಾದ್ರೆ ನಡೆದುಕೊಂಡಾದ್ರು ಮುಂಬೈಗೆ ತೆರಳುತ್ತೇವೆ. ಇದಕ್ಕೂ ತಡೆದಲ್ಲಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಹೊರತಾಗಿ ಕ್ವಾರಂಟೈನ್ ಕೇಂದ್ರಕ್ಕೆ ಹೋಗುವದಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿಯಿಂದ ಜೋಧಪುರಕ್ಕೆ ಎರಡು ಶ್ರಮಿಕ್ ರೈಲು ; ಲಾಕ್ ಡೌನ್ ನಲ್ಲಿ ಸಿಲುಕಿದ ಕಾರ್ಮಿಕರ ಪ್ರಯಾಣಕ್ಕೆ ಕೇಂದ್ರ ಅವಕಾಶ

ಅಧಿಕಾರಿಗಳ ಮನ ವೊಲಿಸಿಕೆಗೆ ಯತ್ನಸಿದರೂ, ಕ್ವಾರಂಟೈನ್ ಕೇಂದ್ರಕ್ಕೆ ಹೋಗಲ್ಲವೆಂದು ಪಟ್ಟು ಹಿಡಿದು ಬಸ್ ನಿಲ್ದಾಣದಲ್ಲಿಯೇ ಕುಳಿತಿದ್ದಾರೆ. ಕೊನೆಗೂ ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಚಿತ್ತಾಪುರ ತಾಲೂಕು ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ದು, ಅಲ್ಲಿ ಬಿಟ್ಟಿದ್ದಾರೆ. ಸಂಸದ ಜಾಧವ್ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ವಲಸೆ ಕಾರ್ಮಿಕರು ಕ್ವಾರಂಟೈನ್ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ.
First published: May 13, 2020, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading