ಕೊರೋನಾ ಕರ್ಫ್ಯೂ; ಪೊಲೀಸ್ ಡ್ಯೂಟಿಗೆ ಅಜಯ್ ಜೈ; ಖಾಕಿತೊಟ್ಟು ಫೀಲ್ಡಿಗಿಳಿದ ಕಬಡ್ಡಿ ಸ್ಟಾರ್

ಹಿಮಾಚಲ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಗಸ್ತು ತಿರುಗಿ ಮನೆಯಲ್ಲೇ ಇರಿ ಎಂದು ಅಜಯ್ ಠಾಕೂರ್ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಾಜಿ ಬೆಂಗಳೂರು ಬುಲ್ಸ್ ಆಟಗಾರ ಆನ್ ಡ್ಯೂಟಿ ಎಂದು ಬರೆದುಕೊಂಡಿದ್ದಾರೆ.

news18-kannada
Updated:March 27, 2020, 12:22 PM IST
ಕೊರೋನಾ ಕರ್ಫ್ಯೂ; ಪೊಲೀಸ್ ಡ್ಯೂಟಿಗೆ ಅಜಯ್ ಜೈ; ಖಾಕಿತೊಟ್ಟು ಫೀಲ್ಡಿಗಿಳಿದ ಕಬಡ್ಡಿ ಸ್ಟಾರ್
ಅಜಯ್ ಠಾಕೂರ್
  • Share this:
ಮಾರಣಾಂತಿಕ ಕೊರೋನಾ ವೈರಸ್​​ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ಗುರುವಾರ ಒಂದೇ ದಿನ 88 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 694ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಏಪ್ರಿಲ್ 14ರವರೆಗೆ ಲಾಕ್​ಡೌನ್​ ಆದೇಶ ಹೊರಡಿಸಲಾಗಿದೆ. ಮಾರಕ ಸೋಂಕು ನಿವಾರವಣೆಗೆ ಇಡೀ ದೇಶವನ್ನೇ 21 ದಿನಗಳ ಕಾಲ ಲಾಕ್​ಡೌನ್ ಮಾಡಲಾಗಿದೆ. ಆಗಿದ್ದರೂ ಸೋಂಕು ಸದ್ಯದ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿಲ್ಲ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ.

ಆದರೆ, ಇಂಥ ಭೀಕರ ಸ್ಥಿತಿಯಲ್ಲೂ ಜನತೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನರನ್ನು ರಸ್ತೆಗೆ ಇಳಿಯದೆ ಮನೆಯಲ್ಲೇ ಇರಿ ಎಂದು ಸೂಚನೆ ನೀಡಲಾಗಿದೆ. ಆದರೂ, ಇದನ್ನು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಲಾಕ್‌ಡೌನ್ ಮಾಡಿದ್ದರೂ ಸಹ ಕ್ಯಾರೆ ಎನ್ನದ ಹಲವಾರು ಜನ ರಸ್ತೆಗೆ ಇಳಿಯುತ್ತಿದ್ದಾರೆ.

ಇಂದಿನ ಆ ದಿನ: ಟಿ-20 ವಿಶ್ವಕಪ್​ನಲ್ಲಿ ಕಾಂಗರೂಗಳಿಗೆ ಕೊಹ್ಲಿಯ ವಿರಾಟ ಪ್ರದರ್ಶನ; ಸೆಮೀಸ್​ಗೆ ಎಂಟ್ರಿ!

ಈ ನಡುವೆ ಭಾರತದ ಕಬಡ್ಡಿ ಆಟಗಾರ ರೈಡರ್ ಅಜಯ್ ಠಾಕೂರ್ ಅವರು, ಕೊರೊನಾ ವೈರಸ್ ತಡಗಟ್ಟುವ ಸಲುವಾಗಿ ಖಾಕಿ ತೊಟ್ಟು ಹಿಮಾಚಲ ಪ್ರದೇಶದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ. ಖಾಕಿ ತೊಟ್ಟು ಪ್ರಧಾನ ಮಂತ್ರಿಗಳ ಲಾಕ್ ಡೌನ್ ಆದೇಶವನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

 ಹಿಮಾಚಲ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಗಸ್ತು ತಿರುಗಿ ಮನೆಯಲ್ಲೇ ಇರಿ ಎಂದು ಅಜಯ್ ಠಾಕೂರ್ ಜಾಗೃತಿ ಮೂಡಿಸುತ್ತಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಮಾಜಿ ಬೆಂಗಳೂರು ಬುಲ್ಸ್ ಆಟಗಾರ 'ಆನ್ ಡ್ಯೂಟಿ' ಎಂದು ಬರೆದುಕೊಂಡಿದ್ದಾರೆ.

VIDEO: ಸಖತ್ ವೈರಲ್ ಆಗುತ್ತಿದೆ ಅಪ್ಪನೊಂದಿಗೆ ಚಹಾಲ್ ಮಾಡಿದ ಟಿಕ್ ಟಾಕ್ ವಿಡಿಯೋ

  
View this post on Instagram
 

Please Stay home save lives


A post shared by AJAY THAKUR (@ajaythakurkabaddi) on Mar 25, 2020 at 7:54am PDT


'ನೀವು ಮನೆಯಲ್ಲೇ ಇರಿ. ಹಾಗೆ ಬೇರೆಯವರಿಗೂ ಮನೆಯಲ್ಲೇ ಇರಿ ಎಂದು ಹೇಳುವ ಸಮಯವಿದು. ಆಡಳಿತದೊಂದಿಗೆ ಸಹಕರಿಸಿ. ನೀವು ಹೀಗೆ ಮಾಡಿದರೆ ಮಾತ್ರ ಕೊರೋನಾ ವೈರಸ್ ತಡೆಗಟ್ಟಲು ಸಾಧ್ಯ' ಎಂದು ಮನವಿ ಮಾಡಿದ್ದಾರೆ.

 
ಅಜಯ್ ಠಾಕೂರ್ ಅವರು ಹಿಮಾಚಲ ಪ್ರದೇಶದಲ್ಲಿ ಪೊಲೀಸ್ ಉಪವರಿಷ್ಠಾಧಿಕಾರಿಯಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ಪ್ರಸಿದ್ದಿ ಪಡೆದಿರುವ ಅಜಯ್ ಠಾಕೂರ್ ಪದ್ಮಶ್ರೀ ಪುರಸ್ಕೃತ ಕೂಡಾ. ಸದ್ಯ ಹಿಮಾಚಲ ಪ್ರದೇಶ ರಾಜ್ಯದ ಬಿಲಾಸ್ಪುರದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
First published: March 27, 2020, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading