ಬೆಂಗಳೂರು: ರಾಜ್ಯದಲ್ಲೂ ಮಾರಕ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಲಾಕ್ಡೌನ್ ಸೇರಿದಂತೆ ಹತ್ತು ಹಲವು ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಆದರೆ, ಇದರ ಉಸ್ತುವಾರಿ ನೋಡಿಕೊಳ್ಳಬೇಕಾದ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ನಡುವೆ ಸಮನ್ವಯ ಕೊರತೆ ಎದುರಾಗಿತ್ತು. ಹೀಗಾಗಿ ಇಬ್ಬರು ಸಚಿವರಿಗೆ ಇದೀಗ ರಾಜ್ಯಪಾಲರು ಸಮಾನ ಅಧಿಕಾರಿ ಹಂಚಿಕೆ ಮಾಡಿದ್ದಾರೆ.
ಕೊರೊನಾ ನಿಯಂತ್ರಣ ವಿಚಾರದಲ್ಲಿ ಆರೋಗ್ಯ ಸಚಿವರು ವಿಫಲರಾದ ಹಿನ್ನೆಲೆಯಲ್ಲಿ ಡಾ.ಸುಧಾಕರ್ಗೆ ಕೊರೋನಾ ನಿಯಂತ್ರಣ ವಿಷಯವಾಗಿ ಆರೋಗ್ಯ ಇಲಾಖೆಯ ಹೆಚ್ಚುವರಿ ಹೊಣೆ ನೀಡಿ ರಾಜ್ಯಪಾಲ ವಿ.ಆರ್ ವಾಲ ಆದೇಶ ಹೊರಡಿಸಿದ್ದಾರೆ.
ಕೋವಿಡ್ -19 ತಡೆಗಟ್ಟುವ ವಿಚಾರ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಡುವೆ ಸಮನ್ವಯತೆ ಕೊರತೆ ಎದುರಾಗಿತ್ತು. ಪರಿಸ್ಥಿತಿಯನ್ಜು ಸಮತೋಲಿತವಾಗಿ ಸಾಧಿಸಲು ಇಬ್ಬರೂ ವಿಫಲರಾಗಿದ್ದರು. ಇದೇ ವಿಚಾರವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಸಚಿವರನ್ನು ಟೀಕೆ ಸಹ ಮಾಡಿದ್ದರು. ಇದೀಗ ಪರಿಸ್ಥಿತಿಯನ್ನು ಇಬ್ಬರು ಸಮಾನವಾಗಿ ನಿರ್ವಹಿಸಲು ಹಾಗೂ ಯಾವುದೇ ಅಧಿಕಾರ ಸ್ಥಾನಮಾನ ಅಡ್ಡಿ ಬರದ ನಿಟ್ಟಿನಲ್ಲಿ ಸುಧಾಕರ್ ಅವರಿಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಜಬಾಬ್ದಾರಿ ವಹಿಸಲಾಗಿದೆ.
ಇದನ್ನು ಓದಿ: ಕೊರೋನಾವನ್ನು ಎದುರಿಸಲು ಎಲ್ಲಾ ಬಗೆಯಲ್ಲೂ ಸಿದ್ದರಾಗಿ; ಪತ್ರ ಬರೆದು ರಾಜ್ಯಗಳನ್ನು ಎಚ್ಚರಿಸಿದ ಕೇಂದ್ರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ