Lockdown In Mysuru: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜುಬಿಲೆಂಟ್ ನೌಕರ ಹೇಳಿದ್ದೇನು ಗೊತ್ತಾ?

Coronavirus In Mysore: ಜುಬುಲೆಂಟ್ಸ್ ಕಾರ್ಖಾನೆ ನೌಕರ ಆಸ್ಪತ್ರೆಯಿಂದ ಡಿಸ್ವಾರ್ಜ್ ಆದ ನಂತರ ಆತನ ವಿಡಿಯೋ ಬಿಡುಗಡೆ‌ ಮಾಡಿರುವ ಜಿಲ್ಲಾಡಳಿತ ಆತನ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.

news18-kannada
Updated:April 15, 2020, 9:25 AM IST
Lockdown In Mysuru: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜುಬಿಲೆಂಟ್ ನೌಕರ ಹೇಳಿದ್ದೇನು ಗೊತ್ತಾ?
ಜುಬಿಲೆಂಟ್ ಫಾರ್ಮಾದ ನೌಕರ ಸಂತೋಷ್
  • Share this:
ಮೈಸೂರು(ಏ. 14): ಮೈಸೂರಿನ ಕೊರೊನಾ ಹಾಟ್‌ಸ್ಪಾಟ್ ಆಗಿರುವ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ಕಳೆದೆರಡು ದಿನಗಳಿಂದ ಕೊಂಚ ನೆಮ್ಮದಿಯ ವಾತವರಣ ನಿರ್ಮಾಣವಾಗಿದೆ. ಎರಡು ದಿನಗಳಿಂದ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಇದು ಜುಬಿಲೆಂಟ್ಸ್ ಕಾರ್ಖಾನೆಯ ನೌಕರರಲ್ಲೂ ಸಂತಸ ತಂದಿದೆ. ಬರೋಬ್ಬರಿ 1,500ಕ್ಕೂ ಹೆಚ್ಚು ಮಂದಿ ಜುಬಿಲೆಂಟ್ಸ್ ಸಂಬಂಧ ಕ್ವಾರಂಟೈನ್ ಆಗಿದ್ದಾರೆ. ಎಲ್ಲರಲ್ಲೂ ನಮಗೆ ಪಾಸಿಟಿವ್ ಬರುತ್ತಾ ಅನ್ನೋ ಆತಂಕ ಇರುವಾಗಲೇ ಎರಡು ದಿನಗಳ‌ಲ್ಲಿ ಒಂದೇ ಒಂದು ಪಾಸಿಟಿವ್ ಪತ್ತೆಯಾಗದೆ ಇರೋದು ಸಮಾಧಾನದ ವಿಚಾರವಾಗಿದೆ. ಈ ಜೊತೆಗೆ ಜುಬಿಲೆಂಟ್ಸ್ ಕಾರ್ಖಾನೆ ನೌಕರರು ಒಬ್ಬೊಬ್ಬರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗುತ್ತಿದ್ದಾರೆ.

ಇತ್ತ ಮೈಸೂರಿನ‌ ಕೋವಿಡ್ ಆಸ್ಪತ್ರೆಯಿಂದ ಇಬ್ಬರು‌ ಕೊರೊನಾ ಸೋಂಕಿತರು ಇಂದು ಡಿಸ್ವಾರ್ಜ್ ಆಗಿದ್ದು, ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ‌ ಶಂಕರ್ ಮಾಹಿತಿ ನೀಡಿ, ಗುಣಮುಖರಾದ ಇಬ್ಬರು ವ್ಯಕ್ತಿಗಳು ಜುಬಿಲೆಂಟ್ಸ್ ಕಾರ್ಖಾನೆ ನೌಕರರು ಎಂದು ತಿಳಿಸಿದ್ದಾರೆ. ಆ ಮೂಲಕ ಈವರಗೆ ಮೈಸೂರಿನಲ್ಲಿ 12 ಸೋಂಕಿತರು ಗುಣಮುಖರಾಗಿದಂತಾಗಿದೆ. ಮೈಸೂರಿನಲ್ಲಿ 48 ಜನರಿಗೆ ಸೋಂಕು ತಗುಲಿ, 12 ಜನ ಸೋಂಕಿತರು ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿ, ಸದ್ಯ‌ ಮೈಸೂರಿನಲ್ಲಿ 36 ಆಕ್ಟಿವ್ ಕೊರೊನಾ ಪಾಸಿಟಿವ್ ಪ್ರಕರಣಗಳಿವೆ. 8 ಮಂದಿ ತಬ್ಲಿಘಿ‌ ಪ್ರಕರಣ ಹಾಗೂ ಓರ್ವ ವ್ಯಕ್ತಿ ವಿದೇಶದಿಂದ ಬಂದವರ ಜೊತೆಗಿನ ಸಂಪರ್ಕಿತ ವ್ಯಕ್ತಿ ಬಿಟ್ಟರೆ ಉಳಿದೆಲ್ಲವು ಜುಬಿಲೆಂಟ್ಸ್ ಕಾರ್ಖಾನೆ ಸಂಬಂಧಿಸಿದ ಕೊರೊನಾ ಪ್ರಕರಣಗಳಾಗಿವೆ.

ಇನ್ನು, ಜುಬುಲೆಂಟ್ಸ್ ಕಾರ್ಖಾನೆ ನೌಕರ ಆಸ್ಪತ್ರೆಯಿಂದ ಡಿಸ್ವಾರ್ಜ್ ಆದ ನಂತರ ಆತನ ವಿಡಿಯೋ ಬಿಡುಗಡೆ‌ ಮಾಡಿರುವ ಜಿಲ್ಲಾಡಳಿತ ಆತನ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ. ಜುಬಿಲೆಂಟ್ಸ್ ಕಾರ್ಖಾನೆ ನೌಕರ ಸಂತೋಷ್ ಇಂದು ಕೋವಿಡ್ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿ ಕೊರೊನಾದಿಂದ ಹೇಗೆ ಮುಕ್ತನಾದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮುನ್ನೆಚ್ಚರಿಕೆ ಕ್ರಮದಲ್ಲಿ ಚಾಮರಾಜನಗರ ಒಂದು ಹೆಜ್ಜೆ ಮುಂದು; ಕೊರೋನಾ ತಡೆಗೆ SARI ಸಮೀಕ್ಷೆ

ಜಿಲ್ಲಾಧಿಕಾರಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಸಂತೋಷ್, ನನಗೆ ಮಾರ್ಚ್ 23ಕ್ಕೆ ಜ್ವರ ಬಂದಿತ್ತು. ಅಂದು ನಾನು ಕಂಪನಿಯ ಆಸ್ಪತ್ರೆಗೆ ತೋರಿಸಿದ್ದೆ.‌ ಕಂಪನಿ ಆಸ್ಪತ್ರೆ ವೈದ್ಯರು ಎರಡು ದಿನ ವಿಶ್ರಾಂತಿಗೆ ಸೂಚಿಸಿದ್ದರು. ಅವರ ಸೂಚನೆಯಂತೆ ನಾನು ರೂಂಗೆ ಹೋಗಿ ವಿಶ್ರಾಂತಿ ಪಡೆದೆ. ಆ ನಂತರ ಮತ್ತೆ ಮಾರ್ಚ್ 26 ರಂದು ಕಾರ್ಖಾನೆಗೆ ಕೆಲಸಕ್ಕೆ ಬಂದಾಗ ಅಲ್ಲಿ ಒಬ್ಬರು (P52) ಪಾಸಿಟಿವ್ ಅಂತ ಗೊತ್ತಾಯಿತು. ಆಗ ಕಾರ್ಖಾನೆ ಆಸ್ಪತ್ರೆಯ ರಿಜಿಸ್ಚರ್‌ನಲ್ಲಿದ್ದ ಎಲ್ಲರನ್ನೂ ಕ್ವಾರೆಂಟೈನ್ ಮಾಡಿದರು. ನನ್ನನ್ನು ಪ್ರಶ್ನೆ ಮಾಡಿ ನಿಮ್ಮನ್ನ ಪರೀಕ್ಷೆ ಮಾಡಬೇಕು ಎಂದು ಹೇಳಿದ್ರು, ಸ್ಯಾಂಪಲ್ ಟೆಸ್ಟ್‌ನಲ್ಲಿ ನನ್ನದು ಪಾಸಿಟಿವ್ ಬಂತು. ಆ ನಂತರ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಇಲ್ಲಿ ಸೂಕ್ತ ಚಿಕಿತ್ಸೆ ನೀಡಿದರು. ವೈದ್ಯರು ನರ್ಸ್‌ಗಳು ಹಾಗೂ ಇತರೆ ಸಿಬ್ಬಂದಿ ನನ್ನನ್ನ ಚೆನ್ನಾಗಿ ಆರೈಕೆ ಮಾಡಿದ್ದಾರೆ. ಕೊರೊನಾಗೆ ಯಾರು ಭಯಪಡಬೇಕಿಲ್ಲ ಇದು ವಾಸಿಯಾಗುವ ಕಾಯಿಲೆ‌. ನನಗೆ ಕೊರೊನಾ ವಾಸಿಯಾಗಿದೆ. ಯಾರೂ ಹೆದರುವ ಅಗತ್ಯವಿಲ್ಲ, ಸರ್ಕಾರದ ಸೂಚನೆ ಪಾಲಿಸಿ ಅಂತ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ದಿನೆ ದಿನೆ ಮೈಸೂರಿನಲ್ಲಿ ಕೊರೊನಾ ಆತಂಕ ಕಡಿಮೆ ಆಗ್ತಿದೆ. ಒಟ್ಟು 12 ಮಂದಿ ಕೊರೊನಾದಿಂದ ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದು, ಎಲ್ಲರು ತಮ್ಮ‌ ತಮ್ಮ ಮನೆಗಳಲ್ಲಿ ಕ್ವಾರೈಂಟನ್ ಆಗಿದ್ದಾರೆ. ಕೆಲವರು ಪತ್ರ ಬರೆದು ಜಿಲ್ಲಾಡಳಿತಕ್ಕೆ ‌ಧನ್ಯವಾದ ಹೇಳಿದ್ರೆ, ಇನ್ನು‌ ಕೆಲವರು ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರಾಜ್ಯದಲ್ಲೆ ಎರಡನೆ ಸ್ಥಾನದಲ್ಲಿರುವ ಮೈಸೂರು‌ ಜಿಲ್ಲೆ ನಿಧಾನಗತಿಯಲ್ಲಿ ಕೊರೊನಾ ವಿರುದ್ದದ ಯುದ್ದದ್ದಲ್ಲಿ ಗೆಲುವು ಸಾಧಿಸಲು ಹೊರಟಿದೆ. ಮುಂದಿನ‌ ದಿನಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗದಿದ್ದರೆ ಬಹುತೇಕ ಎಲ್ಲ ಕೊರೊನಾ ಸೋಂಕಿತರು ಗುಣಮುಖರಾಗುವ ನಿರೀಕ್ಷೆ ಇದೆ.‌

First published: April 14, 2020, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading