ಹೊಸ ಭಾರತಕ್ಕಾಗಿ ಹೊಸ ರಾಷ್ಟ್ರಗೀತೆ: ‘ಜಯತುಜಯತುಭಾರತಂ, ವಸುದೇವ ಕುಟುಂಬಕಮ್’

‘ಜಯತುಜಯತುಭಾರತಂ, ವಸುದೇವ ಕುಟುಂಬಕಮ್’ ಎಂಬ ಒಂದು ಹೊಸ ರಾಷ್ಟ್ರಗೀತೆಯ ಅನನ್ಯವಾದ ಬಹುಭಾಷಾ ಚಿತ್ರಣದಲ್ಲಿ ಒಂದು ದೇಶ ಒಂದು ಧ್ವನಿ 200 ಹಾಡುಗಾಗರನ್ನು ಒಟ್ಟಿಗೆ ಸೇರಿಸಿದೆ.

news18-kannada
Updated:May 23, 2020, 6:19 PM IST
ಹೊಸ ಭಾರತಕ್ಕಾಗಿ ಹೊಸ ರಾಷ್ಟ್ರಗೀತೆ: ‘ಜಯತುಜಯತುಭಾರತಂ, ವಸುದೇವ ಕುಟುಂಬಕಮ್’
ಸಾಂದರ್ಭಿಕ ಚಿತ್ರ
  • Share this:
The Covid-19 ಸಾಂಕ್ರಾಮಿಕ ರೋಗವು ನಮ್ಮ ಸಾಮೂಹಿಕ ಸಂಕಲ್ಪವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಪರೀಕ್ಷಿಸಿದೆ. ಸ್ವಾತಂತ್ರ್ಯ ನಂತರ ಭಾರತವು ತನ್ನ ಅತಿದೊಡ್ಡ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ನಮ್ಮನ್ನು ಒಗ್ಗೂಡಿಸುವ ಧ್ವನಿಗಳು ನಮಗೆ ಬೇಕಾಗಿವೆ. ಕರೋನಾ ಯೋಧರಿಗೆ ಮೀಸಲಾಗಿರುವ ಹೊಸ ರಾಷ್ಟ್ರಗೀತೆ ಒನ್ ನೇಷನ್ ಒನ್ ವಾಯ್ಸ್ ಅನ್ನು ಪ್ರಾರಂಭಿಸುವುದರೊಂದಿಗೆ, ಭಾರತೀಯ ಗಾಯಕರ ಹಕ್ಕುಗಳ ಸಂಘ (ISRA) ಮತ್ತು ಪ್ರಾಯೋಜಕರಲ್ಲಿ ಒಬ್ಬರಾದ Asian Paints ಒಟ್ಟಾಗಿ, ವೈವಿಧ್ಯತೆಯಲ್ಲಿ ನಮ್ಮ ಶಕ್ತಿಯನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಆಚರಿಸುವ ಕಲಾತ್ಮಕ ಪ್ರಯತ್ನದಲ್ಲಿ ಭಾರತವನ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿವೆ.

ಮೇ 17, ಭಾನುವಾರದಂದು ಒನ್ ನೇಷನ್ ಒನ್ ವಾಯ್ಸ್ ಗೀತೆಯ ಬಿಡುಗಡೆಯ ಸಂದರ್ಭದಲ್ಲಿ, ಜಯತುಜಯತುಭಾರತಂ, ವಸುದೇವ ಕುಟುಂಬಕಂ ಅನ್ನು 14 ವಿವಿಧ ಭಾಷೆಗಳಲ್ಲಿನ 200 ಗಾಯಕರು ಹಾಡುವ ಮೂಲಕ ಹಾಡಿನ ಅಭೂತಪೂರ್ವ ಅಕಪೆಲ್ಲಾ ಚಿತ್ರಣದೊಂದಿಗೆ ಸೇರಿಕೊಂಡರು. ಇದರಲ್ಲಿನ ಇನ್ನೊಂದು ವಿಸ್ಮಯಕಾರಿ ಸಂಗತಿಯೆಂದರೆ ಪ್ರತಿಯೊಬ್ಬ ಗಾಯಕರೂ ತಮ್ಮ ಮನೆಯಿಂದಲೇ ಪ್ರಸಾರ ಮಾಡುವ ಮೂಲಕ ದೂರದಿಂದಲೇ ಸಹಕರಿಸಿರುವುದು.

ವಿಡಿಯೋದಲ್ಲಿ ಕಾಣಿಸಿಕೊಂಡ ಕಲಾವಿದರ ತಾರಾಮಂಡಲದಲ್ಲಿ ಪ್ರಖ್ಯಾತರಾದ ಆಶಾ ಭೋಸ್ಲೆ, ಅನುಪ್ ಜಲೋಟಾ, ಅಲ್ಕಾ ಯಾಗ್ನಿಕ್, ಹರಿಹರನ್, ಕೈಲಾಶ್ ಖೇರ್, ಕವಿತಾ ಕೃಷ್ಣಮೂರ್ತಿ, ಕುಮಾರ್ ಸಾನು, ಮಹಾಲಕ್ಷ್ಮಿ ಅಯ್ಯರ್, ಮನೋ, ಪಂಕಜ್ ಉಧಾಸ್, ಎಸ್ಪಿ ಬಾಲಸುಬ್ರಮಣ್ಯಂ, ಶಾನ್, ನಿಘಾನ್ ಸುರೇಶ್ ವಾಡ್ಕರ್, ಶೈಲೇಂದ್ರ ಸಿಂಗ್, ಶ್ರೀನಿವಾಸ್, ತಲಾತ್ ಅಜೀಜ್, ಉದಿತ್ ನಾರಾಯಣ್, ಶಂಕರ್ ಮಹಾದೇವನ್ ಮತ್ತು ಜಸ್ಬೀರ್ ಜಾಸ್ಸಿ ಸೇರಿದ್ದಾರೆ. ಟಿವಿ, ರೇಡಿಯೋ, ಸೋಷಿಯಲ್ ಮೀಡಿಯಾ, ಆ್ಯಪ್‌ಗಳು, ಒಟಿಟಿ, ವಿಒಡಿ, ಐಎಸ್‌ಪಿ, ಡಿಟಿಎಚ್ ಮತ್ತು ಸಿಆರ್‌ಬಿಟಿ ಸೇರಿದಂತೆ 100 ಕ್ಕೂ ಹೆಚ್ಚು ವೇದಿಕೆಗಳಲ್ಲಿ ಈ ಹಾಡನ್ನು ಬಿಡುಗಡೆ ಮಾಡಲಾಗಿದ್ದು, ಈ ಬಿಡುಗಡೆಗೆ 100 ಕ್ಕೂ ಹೆಚ್ಚು ಪ್ರಸಾರ, ಸಾಮಾಜಿಕ, ವಿಸ್ತರಣೆ ಮತ್ತು ತಂತ್ರಜ್ಞಾನ ವೇದಿಕೆಗಳು ಸಹಕಾರ ನೀಡಿವೆ.

ಇದರ ಪ್ರಸಾರದಿಂದ ಬರುವ ಸಂಪೂರ್ಣ ಆದಾಯವು Covid-19 ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದವರಿಗೆ ಹಣಕಾಸಿನ ನೆರವು ನೀಡಲು ಮೀಸಲಾಗಿರುವಂತಹ ಪಿಎಂ ಕೇರ್ಸ್ ಫಂಡ್‌ಗೆ ಹೋಗುತ್ತದೆ. ಈ ಚಿತ್ರಣದ ಮೊದಲ ನೋಟವನ್ನು ಪಡೆಯಲು ಬಯಸುವಿರಾ? ಈ ಕೆಳಗೆ ಐತಿಹಾಸಿಕ ಒನ್ ನೇಷನ್ ಒನ್ ವಾಯ್ಸ್ ಅಕಾಪೆಲ್ಲಾ ಪ್ರದರ್ಶನವನ್ನು ನೋಡಿ.Asian Paints ಗಾಗಿ, ಸೋನು ನಿಗಮ್, ಶ್ರೀನಿವಾಸ್ ಮತ್ತು ISRA CEO ಸಂಜಯ್ ಟಂಡನ್ ಅವರು ಪರಿಕಲ್ಪಿಸಿರುವ ಒನ್ ನೇಷನ್ ಒನ್ ವಾಯ್ಸ್ ಪ್ಲಾಟ್‌ಫಾರ್ಮ್ ಅನ್ನು ಬೆಂಬಲಿಸುವುದು ಏಕೈಕ ಆಯ್ಕೆಯಾಗಿದೆ. Asian Paints CEO ಮತ್ತು MD ಅಮಿತ್ ಸಿಂಗಲ್ ವಿವರಿಸುವಂತೆ “Asian Paints ಯಾವಾಗಲೂ ಕಾಳಜಿ ವಹಿಸುವಂತಹ ಒಂದು ಜವಾಬ್ದಾರಿಯುತ ಬ್ರಾಂಡ್ ಆಗಿದೆ. ರಾಷ್ಟ್ರವಾಗಿ ನಾವು ಇಂದು ಎದುರಿಸುತ್ತಿರುವ ಸವಾಲಿನ ಭವಿಷ್ಯದ ಮಧ್ಯೆ, ಹೆಜ್ಜೆ ಹಾಕಲು ಮತ್ತು ಕ್ರಮ ತೆಗೆದುಕೊಳ್ಳಲು ಇದಕ್ಕಿಂತ ಉತ್ತಮವಾದ ಸಮಯ ಬೇರೊಂದಿಲ್ಲ. ಮನೆಗಳೊಂದಿಗೆ ನಮ್ಮ ಭಾವನಾತ್ಮಕ ಸಂಪರ್ಕವನ್ನು ಗಮನಿಸಿದರೆ, ನಮ್ಮ ದೇಶದ ಅತ್ಯಂತ ಮೆಚ್ಚುಗೆ ಪಡೆದ ಕಲಾವಿದರ ಸುಮಾರು 200 ಅಪೇಕ್ಷಿತ ಮನೆಗಳಿಂದ ಈ ಅಮೋಘವಾದ ಧ್ವನಿಗಳಿಗೆ ಶಕ್ತಿ ತುಂಬಲು ನಾವು ಹೆಮ್ಮೆಪಡುತ್ತೇವೆ.

ಒಂದು ಭಾರತೀಯ ಬ್ರಾಂಡ್ ಆಗಿ ನಾವು ಪಿಎಂ ಕೇರ್ಸ್ ಫಂಡ್‌ಗೆ ಸಹಾಯ ಮಾಡುವ ಮೂಲಕ ನಮ್ಮ ದೇಶವಾಸಿಗಳನ್ನು ಮತ್ತು ಮಹಿಳೆಯರನ್ನು ಬೆಂಬಲಿಸು೦ವ ಮೂಲಕ ನಾವು ನವಚೈತನ್ಯವನ್ನು ಪಡೆಯುತ್ತೇವೆ. ಒನ್ ನೇಷನ್ ಒನ್ ವಾಯ್ಸ್ ಕೇವಲ ಒಂದು ಗೀತೆಯಲ್ಲ ಆದರೆ ಜನರ ಪ್ರಸ್ತುತ ಭಾವನೆಗಳನ್ನು ಪ್ರತಿಬಿಂಬಿಸುವ ಒಂದು ಚಳುವಳಿಯಾಗಿದೆ. ಈ ಬಿಕ್ಕಟ್ಟಿನಿಂದ ಮೊದಲಿಗಿಂತಲೂ ಶಕ್ತಿಶಾಲಿಯಾಗಿ ಹೊರಬರಲು ಇದು ನಮ್ಮ ದೇಶವನ್ನು ಪ್ರೇರೇಪಿಸುತ್ತದೆ ಮತ್ತು ಒಗ್ಗೂಡಿಸುತ್ತದೆ ಎಂದು ನಮಗೆ ಖಾತರಿಯಿದೆ.”ಅಗತ್ಯವಾದ ಸಂದರ್ಭದಲ್ಲಿ ಉದಾರವಾಗಿ ಕೊಡುಗೆ ನೀಡಲು Asian Paints ಹಿಂದೇಟು ಹಾಕಲಿಲ್ಲ. ಕಂಪನಿಯು ಈಗಾಗಲೇ ರೂ. 35 ಕೋಟಿ ಮೊತ್ತವನ್ನು ಪಿಎಂ ಕೇರ್ಸ್ ಫಂಡ್‌ಗೆ ಮತ್ತು ಎಲ್ಲಾ ರಾಜ್ಯಗಳ ಸಿಎಂ ಫಂಡ್‌ಗಳಿಗೆ ಕೊಡುಗೆ ನೀಡಿದೆ. ಭಾರತದ ಅತಿದೊಡ್ಡ ಬಣ್ಣದ ಕಂಪನಿಯನ್ನಾಗಿ ಮಾಡುವಲ್ಲಿ ಗಮನ ಎಳೆದಿದ್ದಾರೆ ಮತ್ತು ಜನರ ಜೀವನದ ಬಗ್ಗೆ ತಮ್ಮ ಅತಿಯಾದ ಕಾಳಜಿಯನ್ನು ತೋರಿಸಿದ್ದಾರೆ. ಏನೇ ಇದ್ದರೂ, , ಒನ್ ನೇಷನ್ ಒನ್ ವಾಯ್ಸ್ ಯೋಜನೆಯು ತನ್ನದೇ ಆದ ಕೆಲವು ಸವಾಲುಗಳನ್ನು ಹೊಂದಿದೆ.

ವಿಶೇಷವಾಗಿ ಸಾಮಾಜಿಕ ಅಂತರದ ಈ ಸಮಯದಲ್ಲಿ ಅಂತಹ ಮಹಾಗಜವನ್ನು ಒಟ್ಟುಗೂಡಿಸುವುದು, ರಾಷ್ಟ್ರವ್ಯಾಪಿ ಸಹಯೋಗವನ್ನು ಹೊಂದಲು ಕೆಲವು ಅಡೆತಡೆಗಳನ್ನು ಎದುರಿಸುತ್ತಿದೆ. ಆರಂಭಿಕರಾಗಿ, ಹೆಚ್ಚಿನ ಕಲಾವಿದರು ಅಗತ್ಯವಾದ ರೆಕಾರ್ಡಿಂಗ್ ಸಾಧನಗಳನ್ನು ಯಾವಾಗಲೂ ಹೊಂದಿರಲಿಲ್ಲ. ಮನೆಯಲ್ಲಿ ರೆಕಾರ್ಡ್ ಮಾಡಲಾಗಿದ್ದ ಅವರ ಪ್ರತ್ಯೇಕ ಭಾಗಗಳನ್ನು ಕೂಡ ನಿಖರವಾಗಿ ಸಂಯೋಜಿಸಬೇಕಾಗಿತ್ತು.

ಆದರೆ ಇಚ್ಛಾಶಕ್ತಿ ಇದ್ದರೆ, ಅಲ್ಲಿ ಖಂಡಿತಾ ಮಾರ್ಗವಿರುತ್ತದೆ. ಅವರ ಮನೆಗಳಿಂದ ನಮ್ಮ ಮನೆಯವರೆಗೆ, ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುವ ಮತ್ತು ಮಾನವೀಯತೆಯನ್ನು ಸಾರುವ ಆ ಅನನ್ಯ ಭಾರತೀಯ ಮೌಲ್ಯಗಳನ್ನು ತಿಳಿಸಲು ಈ ಕಲಾವಿದರಿಗೆ ಸಾಧ್ಯವಾಯಿತು, ಅವರ ಜನ್ಮಸ್ವರೂಪಿ ಸಂಗೀತ ಪ್ರತಿಭೆ ಮತ್ತು ಕಾಂತಿಯಿಂದಾಗಿ ಒನ್ ನೇಷನ್ ಒನ್ ವಾಯ್ಸ್ ವೇದಿಕೆಯಲ್ಲಿ ಅತ್ಯದ್ಭುತವಾಗಿ ಒಗ್ಗೂಡಿಸಲಾಗಿದೆ, ಇದು ಈ ಒಗ್ಗಟ್ಟಿನ ಸಂದೇಶವನ್ನು ಸಾರಲು ಮಾತ್ರ ನೆರವಾಯಿತು. ನಮ್ಮ ಸಾಮೂಹಿಕ ಭವಿಷ್ಯವು ವೈಯಕ್ತಿಕ ಕಾರ್ಯಗಳ ಮೇಲೆ ಅವಲಂಬಿತವಾಗಿರುವ ಈ ಸಮಯದಲ್ಲಿ, ಈ ಸಂಗತಿಗಳೆಲ್ಲವೂ ನಿಜವಾಗಿಯೂ ಜೀವನಪಾಠದ ಮೌಲ್ಯಗಳಾಗಿವೆ.
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading