ಜಾನ್ಸನ್ ಮತ್ತು ಜಾನ್ಸನ್ ಕಂಪೆನಿ ಭಾರತದಲ್ಲಿ ತನ್ನ ಕೋವಿಡ್ -19 ಲಸಿಕೆ ಬಳಸಲು ಅನುಮೋದನೆ ಕೋರಿ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ಗೆ ಪ್ರಸ್ತಾವನೆ ಸಲ್ಲಿಸಿತ್ತು, ಈ ಪ್ರಸ್ತಾವನೆ ಅರ್ಜಿಯನ್ನು ಯಾವುದೇ ಕಾರಣ ಅಥವಾ ನಿಖರ ಮಾಹಿತಿ ನೀಡದೆ ಸೋಮವಾರ ಹಿಂತೆಗೆದುಕೊಂಡಿದೆ ಎಂದು ಸರ್ಕಾರಿ ಸಂಸ್ಥೆ ಹೇಳಿದೆ.
ಯುಎಸ್ ಮೂಲದ ಕಂಪನಿಯಾದ ಜಾನ್ಸನ್ ಕೋವಿಡ್ -19 ಲಸಿಕೆ ಬ್ರಿಡ್ಜಿಂಗ್ ಕ್ಲಿನಿಕಲ್ ಅಧ್ಯಯನವನ್ನು ಭಾರತದಲ್ಲಿ ನಡೆಸಲು ಅನುಮೋದನೆ ಕೋರುವುದಾಗಿ ಏಪ್ರಿಲ್ ನಲ್ಲಿ ಹೇಳಿತ್ತು. ಅಪರೂಪದ ರಕ್ತ ಹೆಪ್ಪುಗಟ್ಟುವಿಕೆಯ ವರದಿಗಳ ಮೇಲೆ ಆ ಸಮಯದಲ್ಲಿ ಯುನೈಟೆಡ್ ಸ್ಟೇಟಿನಲ್ಲಿ ನಡೆಸುತ್ತಿದ್ದ ಎಲ್ಲಾ ಪ್ರಯೋಗಗಳಿಗೆ ತಾತ್ಕಾಲಿಕ ವಿರಾಮ ನೀಡಿತ್ತು. ಇದೇ ಸಮಯದಲ್ಲಿ ತನ್ನ ಲಸಿಕೆ ಅನುಮೋದನೆಗಾಗಿ ಇಲ್ಲಿ ಅರ್ಜಿ ಸಲ್ಲಿಸಿತ್ತು.
ನಷ್ಟ ಪರಿಹಾರದ ವಿಚಾರ ಸೇರಿದಂತೆ, ಇತರೇ ಕಾನೂನು ಸವಾಲುಗಳನ್ನು ಕಂಪೆನಿಯು ಎದುರಿಸುತ್ತಿದ್ದಂತೆ ಔಷಧ ತಯರಿಕೆ, ವಿತರಣೆಯಿಂದ ಹಿಂದೆ ಸರಿಯುವುದಾಗಿ ಹೇಳಿದೆ, ಅದರೆ ರಾಜ್ಯ ಖಾತೆ ಆರೋಗ್ಯ ಸಚಿವರು ಕಳೆದ ವಾರ ಲಸಿಕೆ ತಯಾರಕರೊಂದಿಗೆ ಸಂವಹನ ನಡೆಸಲು ಹಾಗೂ ಒಂದು ಸಮನ್ವಯ ತಂಡವನ್ನು ರಚಿಸಲಾಗಿದೆ ಎಂದು ಹೇಳಿದ್ದರು.
"ಈ ಲಸಿಕೆ ಸಮನ್ವಯ ತಂಡವು ಫೈಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಸೇರಿದಂತೆ ಇತರೆ ಲಸಿಕೆ ತಯಾರಕ ಕಂಪೆನಿಗಳ ಜೊತೆ ನಿರಂತರ ಸಂವಾದದಲ್ಲಿ ಇರುತ್ತದೆ, ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ತೊಡಕುಗಳನ್ನು ಚರ್ಚಿಸಲು ಮತ್ತು ಪರಿಹರಿಸಲು, ಈ ಸಮಿತಿ ಕೆಲಸ ಮಾಡುತ್ತದೆ’’ ಎಂದು ಭಾರತಿ ಪ್ರವೀಣ್ ಪವಾರ್ ಹೇಳಿದರು.
ಜಾನ್ಸನ್ ಮತ್ತು ಜಾನ್ಸನ್ ಮತ್ತು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಕಂಪನಿಯು ಲಸಿಕೆ ಅನುಮೋದನೆ ಅರ್ಜಿಯನ್ನು ಏಕೆ ಹಿಂತೆಗೆದುಕೊಂಡಿತು ಎಂಬ ವಿಷಯದ ಕುರಿತಂತೆ ಪ್ರಶ್ನೆ ಕೇಳಲು ಮುಂದಾದಾಗ ಸುದ್ದಿಸಂಸ್ಥೆ ರಾಯಿಟರ್ಸ್ ವಿನಂತಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ ಎಂದು ವರದಿಯಾಗಿದೆ.
ಜುಲೈ 31 ರ ಹೊತ್ತಿಗೆ, ಫೈಜರ್ ಇಂಕ್, ಬಯೋಎನ್ಟೆಕ್ ಎಸ್ಇ ಮತ್ತು ಮಾಡರ್ನಾ ಇಂಕ್ ಕಂಪೆನಿಗಳಂತೆ ನಮಗೂ ಅನುಮತಿ ನೀಡಬೇಕು ಎಂದು ಜಾನ್ಸನ್ & ಜಾನ್ಸನ್ ಯುಎಸ್ ಎಫ್ಡಿಎಗೆ ಸಂಪೂರ್ಣ ಅನುಮೋದನೆಯನ್ನು ಕೋರಿತ್ತು, ಆದರೆ ಈಗಾಗಲೇ ಇತರೇ ಲಸಿಕೆಗಳು ಅಮೇರಿಕನ್ ಎಫ್ಡಿಎ ಇಂದ ಸಂಪೂರ್ಣ ಅನುಮೋದನೆಯನ್ನು ಪಡೆದುಕೊಂಡಿವೆ.
ಭಾರತದಲ್ಲಿ, ಔಷಧ ನಿಯಂತ್ರಣ ಮಂಡಳಿ ಜೂನ್ ತಿಂಗಳಲ್ಲಿ ಮಾಡರ್ನಾ ಲಸಿಕೆಯ ತುರ್ತ ಬಳಕೆಗೆ ಭಾರತದಲ್ಲಿ ಅನುಮತಿ ನೀಡಿತ್ತು. ಜೊತೆಗೆ ಈಗಾಗಲೇ ಭಾರತ ದೇಸಿ ನಿರ್ಮಿತ ಲಸಿಕೆ ಕೋವ್ಯಾಕ್ಸಿನ್ ಕೂಡ ಸಾಕಷ್ಟು ಚಾಲ್ತಿಯಲ್ಲಿರುವ ಕೋವಿಡ್ ಲಸಿಕೆಯಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ