• ಹೋಂ
 • »
 • ನ್ಯೂಸ್
 • »
 • Corona
 • »
 • Corona Vaccine| 12-17 ವರ್ಷದ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ; ಡ್ರಗ್ ಕಂಟ್ರೋಲ್​ಗೆ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ

Corona Vaccine| 12-17 ವರ್ಷದ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ; ಡ್ರಗ್ ಕಂಟ್ರೋಲ್​ಗೆ ಜಾನ್ಸನ್ ಅಂಡ್ ಜಾನ್ಸನ್ ಅರ್ಜಿ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಭಾರತದಲ್ಲಿ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆಯನ್ನು ಪರೀಕ್ಷಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿರುವುದು ಮಹತ್ವದ ಬೆಳವಣಿಗೆಯಾಗಿ ಗುರುತಿಸಲಾಗಿದೆ.

 • Share this:

  ನವ ದೆಹಲಿ (ಆಗಸ್ಟ್​ 20); ದೇಶದಲ್ಲಿ ಕೊರೋನಾ ಮೂರನೇ ಅಲೆ ವೇಗ ಪಡೆದು ಕೊಳ್ಳುತ್ತಿದೆ. ಅದರಲ್ಲೂ ಈ ಬಾರಿ ಮಕ್ಕಳು ಸಾಂಕ್ರಾಮಿಕ ರೋಗಕ್ಕೆ ಹೆಚ್ಚು ತುತ್ತಾಗುತ್ತಿರುವ ಸುದ್ದಿ ಎಲ್ಲೆಡೆಯಿಂದ ಕೇಳಿ ಬರುತ್ತಿರುವುದು ಆತಂಕಕ್ಕೆ ಕಾರಣವಾ ಗಿದೆ. ತಜ್ಞರು ಈ ಹಿಂದೆಯೇ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಹೀಗಾಗಿ ಮಕ್ಕಳಿಗೂ ನೀಡಬಲ್ಲಂತಹ ಲಸಿಕೆಯನ್ನು ಅಭಿವೃದ್ಧಿ ಪಡಿಸಲು ಭಾರತೀಯ ವೈಧ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ವೈರಾಣು ಸಂಸ್ಥೆ ಕಳೆದ ವರ್ಷವೇ ಮುಂದಾಗಿತ್ತು. ಅಲ್ಲದೆ, ನವೆಂಬರ್​ನಲ್ಲಿ 2 ರಿಂದ 18 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ನೀಡುವುದಾಗಿಯೂ ತಿಳಿಸಿತ್ತು. ಈ ನಡುವೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಭಾರತದಲ್ಲಿ 12-17 ವಯಸ್ಸಿನ ಮಕ್ಕಳಿಗೆ ಒಂದೇ ಡೋಸ್ ಲಸಿಕೆ ಪರೀಕ್ಷೆಗೆ ಅನುಮತಿ ನೀಡುವಂತೆ ಫೆಡರಲ್ ಡ್ರಗ್ ಕಂಟ್ರೋಲ್ ಸ್ಟ್ಯಾಂಡರ್ಡ್ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.


  ಭಾರತದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಕಳೆದ ಜನವರಿಯಿಂದಲೇ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅನೇಕರಿಗೆ ಲಸಿಕೆ ನೀಡಲಾಗುತ್ತಿದೆ. ಹಲವರ ಒತ್ತಾಯ, ಆಗ್ರಹ ಮತ್ತು ಸುಪ್ರೀಂ ತೀರ್ಪಿನ ಮೇರೆಗೆ ಜೂನ್​ ತಿಂಗಳಿನಿಂದ ಪ್ರತಿಯೊಬ್ಬ ವಯಸ್ಕರಿಗೂ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಆದರೆ, ಈವರೆಗೆ ಮಕ್ಕಳಿಗೆ ನೀಡಬೇಕಾದ ಕೊರೋನಾ ಲಸಿಕೆ ಕ್ಲಿನಿಕಲ್ ಪ್ರಯೋಗದ ಹಂತದಲ್ಲೇ ಇದೆ.  ವಿರುದ್ಧ ಲಸಿಕೆ ಹಾಕಲು ಅವಕಾಶ ನೀಡಿದೆ.


  ಈ ನಡುವೆ, ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಭಾರತದಲ್ಲಿ 12 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆಯನ್ನು ಪರೀಕ್ಷಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿರುವುದು ಮಹತ್ವದ ಬೆಳವಣಿಗೆಯಾಗಿ ಗುರುತಿಸಲಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಅಮೆರಿಕ ಮೂಲದ ಔಷಧೀಯ ಕಂಪನಿಯಾಗಿದ್ದು, ಒಂದೇ ವಯಸ್ಕರಿಗೂ ಒಂದೇ ಡೋಸ್ ಕೊರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನು ಈಗಾಗಲೇ ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ.


  ಆರೋಗ್ಯ ಸಚಿವಾಲಯದ ಪ್ರಕಾರ ದೇಶದಾದ್ಯಂತ ಈವರೆಗೆ 57.16 ಕೋಟಿ ಕೊರೋನಾ ಲಸಿಕೆಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 48,84,440 ಲಸಿಕೆಗಳನ್ನು ಒಳಗೊಂಡಂತೆ ಈವರೆಗೆ ಒಟ್ಟು 57,16,71,264 ಲಸಿಕೆಗಳನ್ನು ನೀಡಲಾಗಿದೆ. ಈ ಪೈಕಿ 18 ರಿಂದ 44 ವರ್ಷದೊಳಗಿನ 26,66,831 ಫಲಾನುಭವಿಗಳಿಗೆ ಮೊದಲ ಕಂತಿನಲ್ಲಿ ಲಸಿಕೆ ಹಾಕಲಾಗಿದೆ ಮತ್ತು 6,01,437 ಫಲಾನುಭವಿಗಳಿಗೆ ಎರಡನೇ ಕಂತಿನಲ್ಲಿ ಲಸಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.


  ಇದನ್ನೂ ಓದಿ: Afghanistan Crisis: ಹುಡುಕಿದ ಪತ್ರಕರ್ತ ಸಿಕ್ಕಿಲ್ಲವೆಂದು ಆತನ ಸಂಬಂಧಿಗಳನ್ನು ಕೊಂದ ತಾಲಿಬಾನಿಗಳು!


  ಲಸಿಕೆ ಜಾಗೃತಿ ಅಭಿಯಾನ;


  ಗ್ರಾಮಾಂತರದಲ್ಲಿ ಲಸಿಕೆ ಹಿಂಜರಿಕೆಯು ಆಳವಾಗಿ ಬೇರೂರಿದೆ, ಇದರ ವಿರುದ್ಧ ಹೋರಾಡಲು, UP ಸರ್ಕಾರವು ಇತ್ತೀಚೆಗೆ Network18 ಮತ್ತು Federal Bank- ನೇತೃತ್ವದ ಲಸಿಕೆ ಜಾಗೃತಿ ಉಪಕ್ರಮ, ಸಂಜೀವನಿ-ಎ ಶಾಟ್ ಆಫ್ ಲೈಫ್‌ನೊಂದಿಗೆ ಕೈಜೋಡಿಸಿತು. ಭಾರತದ ಅತಿದೊಡ್ಡ ಲಸಿಕೆ ಜಾಗೃತಿ ಅಭಿಯಾನದೊಂದಿಗೆ ಸಹಕರಿಸುವ ಮೂಲಕ, ಯೋಗಿ ಸರ್ಕಾರವು ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ರಾಜ್ಯದಲ್ಲಿ 100% ಲಸಿಕೆಯನ್ನು ಹಾಕುವ ಗುರಿಯನ್ನು ಹೊಂದಿದೆ.


  ಇದನ್ನೂ ಓದಿ: Sanjeevani Drive: ಭಾರತದ ಅತಿದೊಡ್ಡ ಲಸಿಕೆ ಜಾಗೃತಿ ಅಭಿಯಾನಕ್ಕೆ ಕೈಜೋಡಿಸಿದ UP ಸರ್ಕಾರ


  COVID-19 ಪ್ರಕರಣಗಳು ಹೆಚ್ಚಾಗತೊಡಗಿದಂತೆ ಮತ್ತು ಮೂರನೆಯ ಅಲೆಯ ಭಯವು ಕಾಣದಂತೆ ಎಲ್ಲೆಡೆ ಇದ್ದುದರಿಂದ, ರಾಜ್ಯ ಸರ್ಕಾರಗಳು ಸಾಮೂಹಿಕ ಲಸಿಕೆ ಹಾಕಲು ಸಜ್ಜಾಗಿವೆ. ಲಸಿಕೆ ಹಾಕುವಲ್ಲಿ ಉತ್ತರ ಪ್ರದೇಶವು ಈಗಾಗಲೇ ಇತರ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ ಮತ್ತು ಇತ್ತೀಚೆಗೆ 5.50 ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡುವ ಮೂಲಕ ಮತ್ತು ಇದುವರೆಗೆ 5,51,27,657 ಜನರಿಗೆ ಲಸಿಕೆ ಹಾಕುವ ಮೂಲಕ ಒಂದು ಮೈಲಿಗಲ್ಲನ್ನು ಸಾಧಿಸಿದೆ ಎಂದು ಹೇಳಬಹುದು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  Published by:MAshok Kumar
  First published: