1ರಿಂದ 12ನೇ ತರಗತಿವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್​- ನಿರ್ಮಲಾ ಸೀತಾರಾಮನ್​

ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪುನರುಚ್ಚಿಸುತ್ತೇನೆ ಎನ್ನುತ್ತಲೇ ಮಾತು ಆರಂಭಿಸಿದ ನಿರ್ಮಲಾ ಸೀತಾರಾಮನ್​, ನಾವು ಸ್ವಾವಲಂಬಿ ಭಾರತವನ್ನು ನಿರ್ಮಿಸಬೇಕಿದೆ ಎಂದರು.

ಸಚಿವೆ ನಿರ್ಮಲಾ ಸೀತಾರಾಮನ್

ಸಚಿವೆ ನಿರ್ಮಲಾ ಸೀತಾರಾಮನ್

 • Share this:
  ನವದೆಹಲಿ (ಮೇ 17): 20 ಲಕ್ಷ ಕೋಟಿ ಪ್ಯಾಕೇಜ್​ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಕಳೆದ ನಾಲ್ಕು ದಿನಗಳಿಂದ ಅದನ್ನು ಹಂಚಿಕೆ ಮಾಡುವ ಕೆಲಸ ಮಾಡುತ್ತಿದೆ. ಈಗ ಐದು ಹಾಗೂ ಕೊನೆಯ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್​ ಮಾತನಾಡಿದರು. ಈ ವೇಳೆ ಹಲವು ಘೋಷಣೆಯನ್ನು ಅವರು ಮಾಡಿದರು. 

  ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಪುನರುಚ್ಚಿಸುತ್ತೇನೆ ಎನ್ನುತ್ತಲೇ ಮಾತು ಆರಂಭಿಸಿದ ನಿರ್ಮಲಾ ಸೀತಾರಾಮನ್​, ನಾವು ಸ್ವಾವಲಂಬಿ ಭಾರತವನ್ನು ನಿರ್ಮಿಸಬೇಕಿದೆ ಎಂದರು. ಕೊರೋನಾ ವೈರಸ್​ ಹಾವಳಿ ಮಧ್ಯೆಯೂ ಆರೋಗ್ಯ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಕುಟುಂಬವನ್ನು ಬಿಟ್ಟು ಆಸ್ಪತ್ರೆಯಲ್ಲೇ ಹೆಚ್ಚು ಸಮಯ ತೊಡಗಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಸಿಬ್ಬಂದಿ ಹಿತ ದೃಷ್ಟಿಯಿಂದ ವಿಮೆ ಯೋಜನೆಯನ್ನು ಕೇಂದ್ರ ಘೋಷಣೆ ಮಾಡಿದೆ.

  ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಆ ಇನ್ನು, ಹೊಸ ಲ್ಯಾಬ್​ಗಳ ನಿರ್ಮಾಣಕ್ಕೆ 550 ಕೋಟಿ ರೂಪಾಯಿ, ಮಾಸ್ಕ್​ ಹಾಗೂ ಪಿಪಿಇ ಕಿಟ್​ಗಳಿಗೆ 3,750 ರೂಪಾಯಿ ಮೀಸಲಿಡಲಾಗಿದೆ.

  ಪಿಎಂ ಗರೀಬ್​ ಕಲ್ಯಾಣ್​ ಯೋಜನೆ ಅನುಕೂಲ ಆಗಿದೆ. ಪಿಎಂ ಕಿಸಾನ್​ ಯೋಜನೆ ಅಡಿಯಲ್ಲಿ 2,000 ರೂಪಾಯಿ ರೈತರಿಗೆ ಸಿಕ್ಕಿದೆ. 20 ಕೋಟಿ ಜನರಿಗೆ ಜನಧನ ಯೋಜನೆ ಸಹಕಾರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

  ಆನ್​ಲೈನ್​ ಶಿಕ್ಷಣಕ್ಕೆ ಆದ್ಯತೆ:

  ಆನ್​ಲೈನ್​ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ. 1ರಿಂದ 12ನೇ ತರಗತಿವರೆಗಿನ ಶಿಕ್ಷಣಕ್ಕೆ ಪ್ರತ್ಯೇಕ ಚಾನಲ್ ಆರಂಭಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ. ಮೇ 30ರಿಂದ 100 ವಿವಿಗಳಲ್ಲಿ ಆನ್​ಲೈನ್​ ಶಿಕ್ಷಣ ಆರಂಭವಾಗಲಿದೆ ಎಂದು ನಿರ್ಮಲಾ ಸೀತಾರಾಮನ್​ ಮಾಹಿತಿ ನೀಡಿದರು.

  ಕಂಪನಿಗಳಿಗೆ ಬಿಗ್​ ರಿಲೀಫ್​:

  ಲಾಕ್​ಡೌನ್​ನಿಂದ ಸಾಕಷ್ಟು ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ, ಕಂಪನಿಗಳು ಸಾಲ ಮರು ಪಾವತಿ ಮಾಡದಿದ್ದರೆ ಅಂಥವರನ್ನು ಸುಸ್ತಿದಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್​ ಹೇಳಿದರು.

  ಇತರೆ ಅಂಶಗಳು:

  • ವಿದೇಶಿ ಮಾರುಕಟ್ಟೆಗಳಲ್ಲಿ ಭಾರತದ ಕಂಪನಿಗಳಲ್ಲಿ ಭಾರತದ ಕಂಪನಿಗಳಿಗೆ ನೋಂದಣಿಗೆ ಅವಕಾಶ

  • ಸಾರ್ವಜನಿಕ ಕ್ಷೇತ್ರದ ಕೆಲ ಉದ್ಯಮಗಳು ಖಾಸಗೀಕರಣ

  • ಎಲ್ಲ ವಲಯಗಳಲ್ಲೂ ಖಾಸಗಿ ಕಂಪನಿಗಳಿಗೆ ಹೂಡಿಕೆಗೆ ಅವಕಾಶ

  • ರಾಜ್ಯಗಳ ಸಾಲ ಪಡೆಯುವ ಮಿತಿ ಶೇ.60 ಹೆಚ್ಚಳ

  First published: