‘ಜೋಕರ್‘ ಸಿನಿಮಾ ನೋಡಿಲ್ವಾ? ಸದ್ಯದಲ್ಲೇ ಅಮೆಜಾನ್ ಪ್ರೈಮ್​​ನಲ್ಲಿ ಬಿಡುಗಡೆ

ಅಮೆಜಾನ್ ವಿದೇಶದಲ್ಲಿರುವ ​ ಪ್ರೈಮ್ ಬಳಕೆದಾರರಿಗೆ​ ಜೋಕರ್​ ಸಿನಿಮಾವನ್ನು ವೀಕ್ಷಣೆಗೆ ಸಿಕ್ಕಿದೆ. ಭಾರತೀಯರಿಗೆ ಮಾತ್ರ ಲಭ್ಯವಾಗಿರಲಿಲ್ಲ. ಇದೀಗ ಜೋಕರ್​ ಸಿನಿಮಾವನ್ನು ವೀಕ್ಷಿಸದ ಮತ್ತು ವೀಕ್ಷಿಸಲು ಕಾತುರದಿಂದ ಕಾಯುತ್ತಿರುವ ಭಾರತೀಯರಿಗೆ ಏಪ್ರಿಲ್​ 20ರಂದು ಪ್ರೈಮ್​ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸುತ್ತಿದೆ.

'ಜೋಕರ್'

'ಜೋಕರ್'

 • Share this:
  ಕಳೆದ ವರ್ಷ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ 'ಜೋಕರ್'​ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಗೆ ಮಾಡಲು ದಿನಾಂಕ ಘೋಷಿಸಿದೆ. ಏಪ್ರಿಲ್​ 20ರಂದು ಸಿನಿ ಪ್ರಿಯರಿಗಾಗಿ ಅಮೆಜಾನ್​ ಓಟಿಟಿ ಫ್ಲಾರ್ಟ್​ ಫಾರ್ಮ್​​ನಲ್ಲಿ ವೀಕ್ಷಣೆಗೆ ಸಿಗಲಿದೆ.

  ಅಮೆಜಾನ್ ವಿದೇಶದಲ್ಲಿರುವ ​ ಪ್ರೈಮ್ ಬಳಕೆದಾರರಿಗೆ​ ಜೋಕರ್​ ಸಿನಿಮಾವನ್ನು ವೀಕ್ಷಣೆಗೆ ಸಿಕ್ಕಿದೆ. ಭಾರತೀಯರಿಗೆ ಮಾತ್ರ ಲಭ್ಯವಾಗಿರಲಿಲ್ಲ. ಇದೀಗ ಜೋಕರ್​ ಸಿನಿಮಾವನ್ನು ವೀಕ್ಷಿಸದ ಮತ್ತು ವೀಕ್ಷಿಸಲು ಕಾತುರದಿಂದ ಕಾಯುತ್ತಿರುವ ಭಾರತೀಯರಿಗೆ ಏಪ್ರಿಲ್​ 20ರಂದು ಪ್ರೈಮ್​ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸುತ್ತಿದೆ.

  ಜೋಕಿನ್​​​ ಫೋನಿಕ್ಸ್​​​​​​​ ಜೋಕರ್​ ಆಗಿ ಕಾಣಿಸಿಕೊಂಡಿರುವ ಸೈಕಲಾಜಿಕಲ್​​​ ಥ್ರಿಲ್ಲರ್​​ ಕಥೆಯನ್ನು ಜೋಕರ್​ ಸಿನಿಮಾ ಹೊಂದಿದೆ. ಫಿಲಿಪ್ಸ್​​​ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಜೋಕಿನ್​​​ ಫೋನಿಕ್ಸ್​​​​​​​ ಅವರ ಅದ್ಭುತ ನಟನೆಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿ ಕೂಡ ಲಭಿಸಿದೆ.

     ಕೊರೋನಾ ಲಾಕ್​ಡೌನ್​ ವೇಳೆಯಲ್ಲಿ ಜನರು ಮನರಂಜನಾ ಮಾಧ್ಯಮಗಳ ಮೊರೆ ಹೋಗಿದ್ದಾರೆ. ಅಮೆಜಾನ್​, ನೆಟ್​ಫಿಕ್ಸ್​, ಹಾಟ್​​ ಸ್ಟಾರ್​, ಝೀ5ಗಳ ಮೂಲಕ ಸಿನಿಮಾಗಳನ್ನು ನೋಡುತ್ತಿದ್ದಾರೆ. ಮಾಹಿತಿಗಳ ಪ್ರಕಾರ ಲಾಕ್​ಡೌನ್​​​ ಸಂದರ್ಭದಲ್ಲಿ ಶೇ.198.68 ರಷ್ಟು ಜನರು ಓಟಿಟಿ ಬಳಕೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: ಫ್ರೀ ಇದ್ದೀರಾ? ಯ್ಯೂಟೂಬ್​​​ನಲ್ಲಿರುವ ಕನ್ನಡ ‘ದಿ ಬೆಸ್ಟ್ ಆ್ಯಕ್ಟರ್‘ ಕಿರುಚಿತ್ರ ನೋಡಿ

  ಇದನ್ನೂ ಓದಿ: ಲಾಕ್​​​​ಡೌನ್ ಮುಗಿಯುತ್ತಿದ್ದಂತೆ ಈ ನಟಿಗೆ ಮೊದಲು ಪಾನಿಪುರಿ ತಿನ್ನುವ ಆಸೆಯಂತೆ!   
  First published: