HOME » NEWS » Coronavirus-latest-news » JIO AIRTEL VODAFONE IDEA BSNL EXTEND FREE INCOMING CALLS BENEFIT HG

Lockdown Effect: ಮೇ.3ರ ತನಕ ವ್ಯಾಲಿಡಿಟಿ ವಿಸ್ತರಣೆ ಮಾಡಿದ ಟೆಲಿಕಾಂ ಕಂಪೆನಿಗಳು

ಕೊರೋನಾ ಲಾಕ್​ಡೌನ್​ ಹಿನ್ನಲೆಯಲ್ಲಿ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಅನುಕೂಲವಾಗುವಂತೆ ವ್ಯಾಲಿಡಿಯನ್ನು ಮೇ 3ರ ತನಕ ವಿಸ್ತರಿಸಿದೆ.

news18-kannada
Updated:April 19, 2020, 2:17 PM IST
Lockdown Effect: ಮೇ.3ರ ತನಕ ವ್ಯಾಲಿಡಿಟಿ ವಿಸ್ತರಣೆ ಮಾಡಿದ ಟೆಲಿಕಾಂ ಕಂಪೆನಿಗಳು
ಟೆಲಿಕಾಂ ಕಂಪೆನಿಗಳು
  • Share this:
ಕೊರೋನಾ ಲಾಕ್​ಡೌನ್​ ಹಿನ್ನಲೆಯಲ್ಲಿ ಟೆಲಿಕಾಂ ಕಂಪೆನಿಗಳು ಪ್ರಿಪೇಯ್ಡ್​ ಗ್ರಾಹಕರಿಗೆ ಅನುಕೂಲವಾಗುವಂತೆ ವ್ಯಾಲಿಡಿಯನ್ನು ಮೇ 3ರ ತನಕ ವಿಸ್ತರಿಸಿದೆ.

ಮಹಾಮಾರಿ ಕೊರೋನಾ ಹಾವಳಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏಪ್ರಿಲ್​ 14ವರೆಗೆ ಲಾಕ್​ಡೌನ್​ ಆದೇಶವನ್ನು ಹೊರಡಿಸಿತ್ತು. ಈ ಸಮಯದಲ್ಲಿ ಕೆಲವು ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಸುಲಭವಾಗುವಂತೆ ತನ್ನ ವ್ಯಾಲಿಟಿಡಿಯನ್ನು ಏ. 17ರ ವರೆಗೆ ವಿಸ್ತರಿಸುದಾಗಿ ಹೇಳಿತ್ತು. ಕೇಂದ್ರ ಸರ್ಕಾರ ಮತ್ತೆ ಕೊರೋನಾ ವೈರಸ್ ಹಾವಳಿಯನ್ನು ಹದ್ದುಬಸ್ತಿಗೆ ತರಲು ಮೇ.3ರ ತನಕ ಮತ್ತೆ ಲಾಕ್​​ಡೌನ್​ ವಿಸ್ತರಣೆ ಮಾಡಿದೆ. ಇದಕ್ಕೆ ಅನುಗುಣವಾಗಿ ಟೆಲಿಕಾಂ ಕಂಪೆನಿಗಳು ಕೂಡ ತನ್ನ ವ್ಯಾಲಿಡಿಟಿಯನ್ನು ಮೇ.3ರವರೆಗೆ ವಿಸ್ತರಿಸಿದೆ.

ರಿಲಾಯನ್ಸ್​ ಜಿಯೋ, ಭಾರ್ತಿ ಏರ್​ಟೆಲ್, ವೊಡಾಫೋನ್​ ಐಡಿಯಾ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್​​ ಟೆಲಿಕಾಂ ಕಂಪೆನಿ ವ್ಯಾಲಿಡಿಯನ್ನು ವಿಸ್ತರಣೆ ಮಾಡಿದೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರು ಮತ್ತು ಪ್ರತಿಯೊಬ್ಬರಿಗೂ ಈ ಸೇವೆ ನೆರವಾಗಲಿದೆ ಎಂದು ಜಿಯೋ ತಿಳಿಸಿದೆ.

ಲಾಕ್​ಡೌನ್​​ ಅವಧಿಯಲ್ಲಿ ಸುಮಾರು 3 ಕೋಟಿ ಗ್ರಾಹಕರಿಗೆ ಪ್ರಿಪೇಯ್ಡ್​ ರಿಜಾರ್ಚ್ ಮಾಡಿಕೊಳ್ಳಲು ಸಾಧ್ಯವಾಗುವುವುದಿಲ್ಲ. ಹಾಗಾಗಿ ಮೇ. 3ರವರೆಗೆ ಸೇವೆಗಳು ಮುಂದುವರೆಯಲಿವೆ ಎಂದು ಏರ್​ಟೆಲ್​ ತಿಳಿಸಿದೆ.

ವೊಡಾಫೋನ್​​ ಐಡಿಯದ ವ್ಯವಸ್ಥಾಪಕ ನಿರ್ದೇಶಕ ಅವನೀಶ್​​ ಖೋಸ್ಲಾ ನಮ್ಮ ಉದ್ದೇಶ ಸಂಕಷ್ಟ ಕಾಲದಲ್ಲಿ ನಮ್ಮ ಎಲ್ಲ ಗ್ರಾಹಕರಿಗು ಮೇ 3ರವರೆಗೂ ವಿಸ್ತರಿಸುತ್ತಿದ್ದೇವೆ. ಗ್ರಾಹಕರು ಒಳಬರುವ ಕರೆಗಗಳನ್ನು ಯಾವುದೇ ತೊಡಕಿಲ್ಲದೆ ಬಳಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ

ಇದನ್ನೂ ಓದಿ: ಜೂಮ್​ ಆ್ಯಪ್​ಗೆ ನಿಷೇಧ ಹೇರಿದ ಬೆನ್ನಲ್ಲೇ ಕೇಂದ್ರದಿಂದ ಬಿಗ್​​ ಆಫರ್​; 1 ಕೋಟಿ ಗೆಲ್ಲುವ ಅವಕಾಶ

ಇದನ್ನೂ ಓದಿ: Zoom app ಸುರಕ್ಷಿತವಲ್ಲ ಹಾಗಿದ್ದರೆ ಮತ್ಯಾವುದು ಬೆಸ್ಟ್​?
Youtube Video
First published: April 19, 2020, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories