ಕೊರೋನಾ ವೈರಸ್ ಲಾಕ್​ ಡೌನ್​: ಎರಡು ತಿಂಗಳ ಪಡಿತರ ವಿತರಣೆ ಮಾಡುವಂತೆ ಆದೇಶಿಸಿದ ಜಾರ್ಖಂಡ್ ಸರ್ಕಾರ

ಎರಡು ತಿಂಗಳು ಮುಂಚಿತವಾಗಿ ಪಡಿತರವನ್ನು ನೀಡುವ ಈ ನಿರ್ಧಾರವು ರಾಜ್ಯದ 90 ಪ್ರತಿಶತ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

news18-kannada
Updated:March 26, 2020, 2:11 PM IST
ಕೊರೋನಾ ವೈರಸ್ ಲಾಕ್​ ಡೌನ್​: ಎರಡು ತಿಂಗಳ ಪಡಿತರ ವಿತರಣೆ ಮಾಡುವಂತೆ ಆದೇಶಿಸಿದ ಜಾರ್ಖಂಡ್ ಸರ್ಕಾರ
ಹೇಮಂತ್​ ಸೊರೇನ್​
  • Share this:
ನವದೆಹಲಿ: ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಲಾಕ್​ಡೌನ್​ ಘೋಷಿಸಿರುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳಿಗೆ ಎರಡು ತಿಂಗಳ ಮುಂಚಿತವಾಗಿ ಪಡಿತರವನ್ನು ನೀಡಲು ತಮ್ಮ ಸರ್ಕಾರ ನಿರ್ಧರಿಸಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದ್ದಾರೆ.

ರಾಜ್ಯದ ಶೇಕಡ 90 ರಷ್ಟು ಕುಟುಂಬಗಳು ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿವೆ ಎಂದಿದ್ದಾರೆ.

"ನಿಮ್ಮ ಮಗ ಅಥವಾ ಸಹೋದರ ಜಾರ್ಖಂಡ್ ಜನರಿಗೆ ಸಹಾಯ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ," ಎಂದು ಸೊರೆನ್ ಬುಧವಾರ ಟ್ವೀಟ್ ಮಾಡಿದ್ದಾರೆ.

ರೋಗ ಹರಡುವುದನ್ನು ತಡೆಗಟ್ಟಲು 21 ದಿನಗಳ ಲಾಕ್ಡೌನ್ ಆದೇಶವನ್ನು ಪಾಲಿಸಬೇಕೆಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.

ಜಾರ್ಖಂಡ್ ನಲ್ಲಿ ಇದುವರೆಗೆ ಯಾವುದೇ ಕೋವಿಡ್ -19 ಪ್ರಕರಣಗಳು ವರದಿಯಾಗಿಲ್ಲ.

ಕೆಲವು ಪಡಿತರ ಅಂಗಡಿಗಳು ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿವೆ ಮತ್ತು ಇನ್ನೂ ಕೆಲವು ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಕ್​ಡೌನ್​ ಲಾಭವನ್ನು ಪಡೆದುಕೊಳ್ಳುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಾರ್ವಜನಿಕ ವಿತರಣಾ ಕೇಂದ್ರಗಳಲ್ಲಿ ಅಗತ್ಯ ವಸ್ತುಗಳ ದರದ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಸರ್ಕಾರವು ಜನರಿಗೆ ಸಾಕಷ್ಟು ದಿನಗಳವರೆಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಹೊಂದಿದೆ ಎಂದು ಜನರಿಗೆ ಭರವಸೆ ನೀಡಿತ್ತು.ರಾಂಚಿ ಜಿಲ್ಲಾಧಿಕಾರಿ ರಾಯ್ ಮಹಿಮಪತ್ ರೇ ಮಾತನಾಡಿ, ಜನರು ಅಗತ್ಯ ಸರಕುಗಳನ್ನು ಪಡೆಯಲು ಆಡಳಿತವು ವೆಗ್ಗಿಗೊ ಎಂಬ ಆ್ಯಪ್ ಅನ್ನು ಪ್ರಾರಂಭಿಸಿದೆ ಎಂದರು.

ಅಗತ್ಯ ಸರಕುಗಳಿಗಾಗಿ ಆಡಳಿತವು ಹೋಮ್ ಡೆಲಿವರಿ ಸೇವೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಕೊರೋನಾ ವೈರಸ್ ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading