• Home
 • »
 • News
 • »
 • coronavirus-latest-news
 • »
 • Yogi Adityanath: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಗೆ ತೆರಳಿದ್ದ ವೈದ್ಯರಿಗೆ ಅವಕಾಶ ನಿರಾಕರಣೆ

Yogi Adityanath: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಗೆ ತೆರಳಿದ್ದ ವೈದ್ಯರಿಗೆ ಅವಕಾಶ ನಿರಾಕರಣೆ

ಯೋಗಿ ಆದಿತ್ಯನಾಥ್.

ಯೋಗಿ ಆದಿತ್ಯನಾಥ್.

ವೈದ್ಯರು ತಮ್ಮ ಜ್ಞಾಪಕ ಪತ್ರದಲ್ಲಿ, ಕಾಲೇಜಿನ ಕೇಂದ್ರ ಗ್ರಂಥಾಲಯವು 24 ಗಂಟೆಗಳ ಕಾಲ ತೆರೆದಿರಬೇಕು. ಸಾಕಷ್ಟು ಔಷಧಿಗಳನ್ನು ಲಭ್ಯಗೊಳಿಸಬೇಕು ಮತ್ತು ಆಡಳಿತ ಅಧಿಕಾರಿಗಳು ಅವರೊಂದಿಗೆ ಸಭ್ಯವಾಗಿ ವರ್ತಿಸಬೇಕು ಎಂದು ಕೋರಿದ್ದರು.

 • Share this:

  ಲಖನೌ (ಮೇ 24); ಉತ್ತರಪ್ರದೇಶದ ಝಾನ್ಸಿಯಲ್ಲಿ ಭಾನುವಾರ ನಡೆದ ಪರಿಶೀಲನಾ ಸಭೆ ಸಂದರ್ಭದಲ್ಲಿ ಝಾನ್ಸಿ ವೈದ್ಯಕೀಯ ಕಾಲೇಜಿನ ವೈದ್ಯರು ಮುಖ್ಯಮಂತ್ರಿಗೆ ಒಂದು ಜ್ಞಾಪಕ ಪತ್ರವನ್ನು ಸಲ್ಲಿಸಲು ಬಯಸಿದ್ದರು. ಇದರಲ್ಲಿ ಸಂಸ್ಥೆಯ ಕೇಂದ್ರ ಗ್ರಂಥಾಲಯವನ್ನು 24 ಗಂಟೆಗಳ ಕಾಲ ತೆರೆದಿಡಬೇಕು ಎಂಬ ಬೇಡಿಕೆಯೊಂದಿಗೆ ಹಲವು ಮನವಿಗಳನ್ನು ಮಾಡಲಾಗಿತ್ತು. ಆದರೆ ವೈದ್ಯರು ಸಿಎಂ ಅವರನ್ನು ಭೇಟಿಯಾಗದಂತೆ ತಡೆಯಲಾಯಿತು ಎಂದು ಆರೋಪಿಸಲಾಗಿದೆ. ಜ್ಞಾಪಕ ಪತ್ರವನ್ನು ಸಲ್ಲಿಸಲು ಬಯಸಿದ ಕಿರಿಯ ವೈದ್ಯರು, ಸಿಎಂ ಅವರನ್ನು ಭೇಟಿಯಾಗುವ ಕುರಿತು ಮೊದಲೇ ಆಡಳಿತದ ಗಮನಕ್ಕೆ ತಂದಿರಲಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅಂದ್ರಾ ವಂಶಿ ಹೇಳಿದ್ದಾರೆ.


  ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಯಾವುದೇ ಅಡ್ಡಿ ಉಂಟಾಗದಂತೆ ಕ್ರಮ ಕೈಗೊಳ್ಳಲು ಹೀಗೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಕಿರಿಯ ವೈದ್ಯರಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ವಂಸಿ ಹೇಳಿದ್ದಾರೆ. ವೈದ್ಯಕೀಯ ಕಾಲೇಜಿನ ಜೂನಿಯರ್ ವೈದ್ಯರ ಸಂಘದ ಅಧ್ಯಕ್ಷ ಡಾ. ಹರ್ದೀಪ್ ತಮ್ಮ ಕೆಲವು ಸಹೋದ್ಯೋಗಿಗಳೊಂದಿಗೆ ಮೂರು ಅಂಶಗಳ ಜ್ಞಾಪಕ ಪತ್ರವನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಲು ಬಯಸಿದ್ದರು.


  ವೈದ್ಯರು ತಮ್ಮ ಜ್ಞಾಪಕ ಪತ್ರದಲ್ಲಿ, ಕಾಲೇಜಿನ ಕೇಂದ್ರ ಗ್ರಂಥಾಲಯವು 24 ಗಂಟೆಗಳ ಕಾಲ ತೆರೆದಿರಬೇಕು. ಸಾಕಷ್ಟು ಔಷಧಿಗಳನ್ನು ಲಭ್ಯಗೊಳಿಸಬೇಕು ಮತ್ತು ಆಡಳಿತ ಅಧಿಕಾರಿಗಳು ಅವರೊಂದಿಗೆ ಸಭ್ಯವಾಗಿ ವರ್ತಿಸಬೇಕು ಎಂದು ಕೋರಿದ್ದರು.


  ತರುವಾಯ, ಕಿರಿಯ ವೈದ್ಯರೊಂದಿಗೆ ಡಿಎಂ ಮತ್ತು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಸಭೆ ನಡೆಸಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.


  ಇದನ್ನೂ ಓದಿ: Yellow Fungus: ಕೊರೋನಾ ಆಯ್ತು..ಬ್ಲಾಕ್​ ಫಂಗಸ್​ ಆಯ್ತು ಈಗ ಹಳದಿ ಫಂಗಸ್​ ಕಾಟ; ದೆಹಲಿಯಲ್ಲಿ ಪತ್ತೆಯಾಯ್ತು ಮೊದಲ ಕೇಸ್​!


  ಝಾನ್ಸಿಯಲ್ಲಿ ನಡೆದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, "ಯುಪಿ ಸರ್ಕಾರದ ಮಾದರಿ ಎಂದರೆ ಅಗತ್ಯವಿದ್ದಾಗ ಗೈರು ಹಾಜರಾಗಿರುವುದು. ಸುಳ್ಳು ಪ್ರಚಾರದಲ್ಲಿ ತೊಡಗುವುದು. ಸಾರ್ವಜನಿಕ ಸೇವೆಯಲ್ಲಿರು ವವರನ್ನು ಬಂಧಿಸುವುದು" ಎಂದು ಕಿಡಿಕಾರಿದ್ದಾರೆ.


  "ಪೊಲೀಸರು ಕೆಲವು ವೈದ್ಯರನ್ನು ಬಂಧಿಸಿದರು, ಯಾಕೆಂದರೆ ಅವರು ತಮ್ಮ ಮೂರು ಬೇಡಿಕೆಗಳನ್ನು ಮುಖ್ಯಮಂತ್ರಿಯ ಮುಂದೆ ಮಂಡಿಸಲು ಹೋಗಿದ್ದರು. ಈ ಬೇಡಿಕೆಗಳು ತಪ್ಪೇ? ಮುಖ್ಯಮಂತ್ರಿ ಅವರ ಬೇಡಿಕೆಗಳನ್ನು ಆಲಿಸಬೇಕಿತ್ತು" ಎಂದು ಅವರು ಆರೋಪಿಸಿದ್ದಾರೆ.


  ಇದನ್ನೂ ಓದಿ: Sputnik-V: ದೆಹಲಿಯಲ್ಲೇ ಆರಂಭವಾಯ್ತು ಸ್ಪುಟ್ನಿಕ್ ಲಸಿಕೆ ಉತ್ಪಾದನೆ; ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆ ಗುರಿ


  ಭಾರತದಲ್ಲಿ ಕೊರೋನಾ ಕೇಕೆ:


  ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇನ್ನೂ ಪ್ರತಿದಿನ ಸರಿ ಸುಮಾರು ಎರಡೂವರೆ ಲಕ್ಷ ಜನ ಸೋಂಕು ಪೀಡಿತರಾಗುತ್ತಿದ್ದಾರೆ. ಕೊರೋನಾ ಲಸಿಕೆ ಕೊರತೆ ಉಂಟಾಗಿದ್ದು ಸಕಾಲಕ್ಕೆ ಎಲ್ಲರಿಗೂ ಲಸಿಕೆ ಸಿಗುವ ಸಾಧ್ಯತೆ ಇಲ್ಲ. ಇದರಿಂದ ಮೂರನೇ ಅಲೆಯ ಅಬ್ಬರವೂ ದೇಶವನ್ನು ತೀವ್ರವಾಗಿ ಕಾಡಬಹುದು ಎನ್ನಲಾಗುತ್ತಿದೆ. ಈ ನಡುವೆ ಎರಡನೇ ಅಲೆಯ ವೇಳೆಯಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಇಳಿಮುಖ ಆಗದೆ ಪ್ರತಿ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಜನ‌ ಕೊರೋನಾಗೆ ಬಲಿ ಆಗುತ್ತಿದ್ದಾರೆ. ಕೇವಲ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾಗಿದ್ದು ದಾಖಲೆಯನ್ನು ಸೃಷ್ಟಿಸಿದೆ.


  ಕೊರೋನಾ ರೋಗದಿಂದ ಸಾಯುವವರ ಸಂಖ್ಯೆಯಲ್ಲಿ ಭಾರತವು ಕಳೆದ ವಾರವೇ ಸಾವಿನಲ್ಲಿ ಅಮೇರಿಕಾವನ್ನು ಹಿಂದಿಕ್ಕಿತ್ತು. ಅಮೇರಿಕಾದಲ್ಲಿ 31 ದಿನಗಳಲ್ಲಿ 1 ಲಕ್ಷ ಜನ ಸತ್ತಿದ್ದರೆ ಭಾರತದಲ್ಲಿ ಕೇವಲ 26 ದಿನದಲ್ಲಿ 1 ಲಕ್ಷ ಜನ ಕೊರೋನಾಗೆ ಬಲಿ ಆಗಿದ್ದರು. ಈಗ ತನ್ನದೇ ದಾಖಲೆ ಮುರಿದಿರುವ ಭಾರತ ಕೇವಲ 12 ದಿನದಲ್ಲಿ ಕೊರೋನಾಗೆ 50 ಸಾವಿರ ಜನ ಬಲಿಯಾದ ದಾಖಲೆಯನ್ನು ಮಾಡಿದೆ.


  ಕೊರೋನಾ ರೋಗದಿಂದ ಸಾಯುತ್ತಿರುವವರ ವಿಚಾರದಲ್ಲಿ ಭಾರತವು ಈಗ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರ ಎಂಬ ಕುಖ್ಯಾತಿ ಗಳಿಸಿದೆ.‌ ಮೊದಲ ಸ್ಥಾನದಲ್ಲಿರುವ ಅಮೇರಿಕಾದಲ್ಲಿ 6 ಲಕ್ಷ ಜನರು ಕೊರೋನಾಗೆ ಬಲಿ ಆಗಿದ್ದರೆ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ ದೇಶದಲ್ಲಿ ಮಾರಕ ರೋಗ ಕೊರೋನಾ 4.5 ಲಕ್ಷ ಜನರನ್ನು ಬಲಿ ಪಡೆದುಕೊಂಡಿದೆ. ಭಾರತದ ಕೊರೋನಾ ರೋಗಿಗಳ ಸಾವಿನ ಸಂಖ್ಯೆ 3 ಲಕ್ಷ ದಾಟಿದ್ದು 3ನೇ ಸ್ಥಾನದಲ್ಲಿದೆ.

  Published by:MAshok Kumar
  First published: