HOME » NEWS » Coronavirus-latest-news » JDS MP PRAJWAL REVANNA CONDUCTS MEETING AT HASSAN DC OFFICE TO OVERSEE OPERATIONS TO CONTROL CORONA PANDEMIC SNVS

ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡದಿರಿ: ಸಂಸದ ಪ್ರಜ್ವಲ್ ರೇವಣ್ಣ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್ ಅವರು ಮಾತನಾಡಿ ಜಿಲ್ಲಾದ್ಯಂತ ಅನಗತ್ಯವಾಗಿ ಓಡಾಡುವ ದ್ವಿ ಚಕ್ರ ವಾಹನ ಮತ್ತು ಕಾರುಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಳ್ಳಲು ಸೂಚನೆ ನೀಡಿದ್ದು, ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಹೇಳಿದರು.

news18
Updated:April 4, 2020, 8:56 PM IST
ಅಗತ್ಯ ವಸ್ತುಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡದಿರಿ: ಸಂಸದ ಪ್ರಜ್ವಲ್ ರೇವಣ್ಣ
ಸಂಸದ ಪ್ರಜ್ವಲ್ ರೇವಣ್ಣ
  • News18
  • Last Updated: April 4, 2020, 8:56 PM IST
  • Share this:
ಹಾಸನ: ಕೊವೀಡ್-19 ಸೋಂಕಿನ ಅಪಾಯಕಾರಿ ಪರಿಸ್ಥಿತಿ ಮತ್ತು ಜನರ ಭಯವನ್ನು ದುರುಪಯೋಗ ಮಾಡಿಕೊಂಡು ದಿನ ಬಳಕೆಯ ವಸ್ತುಗಳನ್ನು ವರ್ತಕರು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಸಂಸದರಾದ ಪ್ರಜ್ವಲ್ ರೇವಣ್ಣ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಟಾಸ್ಕ್ ಪೋರ್ಸ್ ಸಮಿತಿಗಳೊಂದಿಗೆ ಕೊವೀಡ್-19 ನಿಯಂತ್ರಣ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕುಗಳಲ್ಲಿ ತಹಶಿಲ್ದಾರರು ಅಂಗಡಿ ಮುಂಗಟ್ಟುಗಳ ಮಾಲೀಕರುಗಳಿಗೆ ನಿರ್ದಿಷ್ಟ ದರಪಟ್ಟಿಯನ್ನು ನಿಗದಿಪಡಿಸಿ ಅದರಂತೆ ಮಾರಾಟ ಮಾಡುವಂತೆ ಕ್ರಮವಹಿಸಿ ಎಂದು ಸೂಚನೆ ನೀಡಿದರಲ್ಲದೆ, ಇಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ನಿರತರಾಗಬೇಕೆಂದು ಹೇಳಿದರು.

ಜಿಲ್ಲೆಯ ಜನ ಸಾಮಾನ್ಯರಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರು ಸಕಾರಾತ್ಮಕವಾಗಿ ಸ್ಪಂದಿಸಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿರುವ ವಿಧಾನ ಶ್ಲಾಘನೀಯ ಅದಕ್ಕೆ ತಾವು ಅಭಿನಂದನೆಗಳನ್ನು ಸಲ್ಲಿಸುವುದಾಗಿ ಪ್ರಜ್ವಲ್ ರೇವಣ್ಣ ಅವರು ತಿಳಿಸಿದರು.

ಎಲ್ಲಾ ತಾಲ್ಲೂಕುಗಳಲ್ಲಿ  ಕೊರೋನಾ ನಿಯಂತ್ರಣಕ್ಕೆ ಸನ್ನದ್ದರಾಗಿರುವ ಸ್ವಯಂ ಸೇವಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಬಳಕೆ ಮಾಡಿಕೊಂಡು ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ, ಅಶಕ್ತರಿಗೆ ಮತ್ತು ಕೊಳಚೆ ಪ್ರದೇಶದ ಜನರಿಗೆ ಆಹಾರ ಮತ್ತು ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವಂತೆ ಅವರು ಸಲಹೆ ನೀಡಿದರು.

ಇದನ್ನೂ ಓದಿ: K Annamalai - ದಿನ 10: ವಿರಾಟ್ ಕೊಹ್ಲಿ ಸೆಂಚುರಿಗಳನ್ನ ಭಾರಿಸುವಂತೆ ನೀವು ಯಶಸ್ಸು ಗಳಿಸುವುದು ಹೇಗೆ?

ಕೊರೋನಾ ಸೋಂಕಿನ ವಿರುದ್ಧ ಹೊರಾಡುತ್ತಿರುವ ಅಧಿಕಾರಿಗಳು, ವೈದ್ಯಕೀಯ ಅಧಿಕಾರಿ ಸಿಬ್ಬಂದಿಗಳ ಹಿತಕಾಯುವುದು ನಮ್ಮ ಹೊಣೆ ಅಗತ್ಯ. ಮಾಸ್ಕ್, ಪಿ.ಪಿ.ಕಿಟ್ ಹಾಗೂ ಇತರ ಸಾಮಾಗ್ರಿ ಒದಗಿಸಿ ನಂತರ ಕೆಲಸ ಮಾಡಿಸಿ ಎಂದು ಲೋಕಸಭಾ ಸದಸ್ಯರು ಹೇಳಿದರು.

ಹಾಲಿ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಎಲ್ಲಾ ತಾಲ್ಲೂಕು ಆಸ್ಪತ್ರೆಗಳ್ಲಿ ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡಿಸಿ ಒಂದು ವೇಳೆ ಯಾವುದೇ ಒಂದು ಕೊರೋನಾ ಸೋಂಕು ಪ್ರಕರಣ ಪತ್ತೆಯಾದಲ್ಲಿ ಅವರನ್ನು ನೋಡುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ. ಹಾಗಾಗಿ ಯಾವುದೇ ವೈದ್ಯರ ಸೇವೆಯನ್ನು ಅಜಾಗರೂಕತೆಯಿಂದ ಲಭ್ಯವಾಗದಂತೆ ಮುಂಜಾಗ್ರತೆ ವಹಿಸಬೇಕು. ಜಿಲ್ಲೆಗೆ ಬೇಕಾದ ಸ್ಯಾನಿಟೈಸರ್ ಅನ್ನು ಖಾಸಗಿ ಕಬ್ಬು ಉತ್ಪಾದನಾ ಕಾರ್ಖಾನೆಯಿಂದ ಪಡೆಯಿರಿ ಈಗಾಗಲೇ ತಾವು ಶಾಸಕರಾದ ಮುರುಗೇಶ್ ನಿರಾಣಿಯವರೊಂದಿಗೆ ಮಾತನಾಡಿದ್ದು ಅವರು ಇದನ್ನು ಪೂರೈಸಲು ಸಮ್ಮತಿಸಿದ್ದಾರೆ, ಇದೇ ರೀತಿ ಹೆಚ್ಚುವರಿ ವೆಂಟಿಲೇಟರ್‍ಗಳನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಪೂರೈಸಲು ಪ್ರಯತ್ನಿಸಿ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ರೈತರ ಕೊಬ್ಬರಿ ಮಾರಾಟಕ್ಕೆ ರಾಜ್ಯದೊಳಗೆ ಸೂಕ್ತ ಅವಕಾಶ ನೀಡುವಂತೆ ಕೇಳಿದರಲ್ಲದೆ, ಜಿಲ್ಲೆಯ ಪ್ರತಿ ತಾಲ್ಲೂಕು ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್ ಗಳನ್ನು ಒದಗಿಸಬೇಕೆಂದು ಮತ್ತು ಔಷಧಾಲಯಗಳಿಗೆ ಅಗತ್ಯವಾದ ಔಷಧಿಗಳ ಸರಬರಾಜಿಗೆ ಅಡಚಣೆಯಾಗದಂತೆ ಜಿಲ್ಲಾಧಿಕಾರಿಯವರು ಕ್ರಮವಹಿಸುವಂತೆ ತಿಳಿಸಿದರು.ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ ಅವರು ಮಾತನಾಡಿ, ಸಿಗ್ನಲ್ ಸಮಸ್ಯೆ ಇರುವುದರಿಂದ ಪಡಿತರರಿಗೆ ಆಹಾರ ಪದಾರ್ಥಗಳನ್ನು ಪಡೆಯಲು ಓ.ಟಿ.ಪಿ. ಕಡ್ಡಾಯ ಮಾಡದಿರುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡುವಂತೆ ಹೇಳಿದರು.

ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಹಳ್ಳಿ ಹಳ್ಳಿಗೆ ನೇರವಾಗಿ ಸಾಮಾಗ್ರಿ ಸಾಗಿಸಿ ನೀಡಿ. ಸಾಧ್ಯವಾದರೆ ಮನೆಮನೆಗೆ ಹಂಚಿ ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯ ಎಂದರು. ದ್ವಿಚಕ್ರ ವಾಹನಗಳ ಅನಗತ್ಯ ಓಡಾಟವನ್ನು ಸಂಪೂರ್ಣ ನಿರ್ಭಂದಿಸಿ ಮನೆಮನೆಗೆ ತರಕಾರಿ ದಿನಸಿ ಪೂರೈಸಿ ಎಂದರು.

ಶಾಸಕರಾದ ಎ.ಟಿ. ರಾಮಸ್ವಾಮಿ ಅವರು ಮಾತನಾಡಿ ತಾಲ್ಲೂಕು ಕೇಂದ್ರಗಳ ಬಲವರ್ಧನೆಗೆ ಹಾಗೂ ಒಔಆಷಧಿ ಸಾಮಾಗ್ರಿಗಳ ಪೂರೈಕೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರಲ್ಲದೆ, ಪಡಿತರ ಸಾಮಾಗ್ರಿಗಳನ್ನು ಆದಞ್ಟು ಹಳ್ಳಿಹಳ್ಳಿಗೆ ಮನೆಮನೆಗೆ ತಲುಪಿಸಲು ಕ್ರಮವಹಿಸಬೇಕು ಎಂದರು.

ಇದನ್ನೂ ಓದಿ: ಕೊರೋನಾ ಸಂಕಷ್ಟ: ‘ಹಾಸನದಲ್ಲಿ ಒಂದೊಂದು ಕುಟುಂಬಕ್ಕೆ ತಲಾ 5 ಸಾವಿರ ರೂ. ಕೊಡಿ‘ - ಎಚ್​​.ಡಿ ರೇವಣ್ಣ ಸಿಎಂಗೆ ಆಗ್ರಹ

ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಮಾತನಾಡಿ ಈಗಾಗಲೇ ಜಿಲ್ಲೆಯ ಎಲ್ಲಾ ಭಾಗದಲ್ಲಿಯೂ ಪಡಿತರರಿಗೆ ಉಚಿತವಾಗಿ ಮತ್ತು ಕ್ರಮಬದ್ಧವಾಗಿ ಜನಸಂದಣಿಯಾಗದಂತೆ ವಿತರಿಸುವಂತೆ ಸೂಚನೆ ನೀಡಲಾಗಿದ್ದು, ಓ.ಟಿ.ಪಿ. ಇಲ್ಲದೆ ಪಡಿತರರಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

ಪ್ರತಿ ತಾಲ್ಲೂಕಿನಲ್ಲಿ ಸ್ಥಳೀಯವಾಗಿಯೇ ನಿರಾಶ್ರಿತರಿಗೆ ಆಹಾರ ತಲುಪಿಸಲುವಲ್ಲಿ ತಹಶಿಲ್ದಾರರು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕ್ರಮವಹಿಸಬೇಕು ಯಾರೋಬ್ಬರೂ ಆಹಾರದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಲ್ಲೂಕು ಕಾರ್ಯ ನಿರ್ವಹಣಾ ಅಧಿಕಾರಿಗಳ ನೇತೃತ್ವದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 8 ಗಂಟೆಯ ಸಮಯದಲ್ಲಿ ಹಾಲನ್ನು ವಿತರಣೆ ಮಾಡಬೇಕು ಎಂದರಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ಅಗತ್ಯವಿರುವ ಸ್ಯಾನಿಟೈಸರ್ ಮತ್ತು ಮಾಸ್ಕ್‍ಗಳನ್ನು ತುರ್ತಾಗಿ ಒದಗಿಸಲಾಗುವುದು ಎಂದು ಆರ್.ಗಿರೀಶ್ ಅವರು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಆರ್ ಅವರು ಮಾತನಾಡಿ ಜಿಲ್ಲಾದ್ಯಂತ ಅನಗತ್ಯವಾಗಿ ಓಡಾಡುವ ದ್ವಿ ಚಕ್ರ ವಾಹನ ಮತ್ತು ಕಾರುಗಳನ್ನು ಪೊಲೀಸ್ ಇಲಾಖೆ ವಶಪಡಿಸಿಕೊಳ್ಳಲು ಸೂಚನೆ ನೀಡಿದ್ದು, ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಅವರು ಮಾತನಾಡಿ ಪಿ.ಡಿ.ಓ. ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಕೊವೀಡ್-19 ಕುರಿತು ಜಾಗೃತಿ ಮೂಡಿಸಲು ಸ್ವತಃ ಶಿಕ್ಷಿತರಾಗಬೇಕು ಮತ್ತು ಸಾಮಾಜಿಕ ಅಂತರದ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು. ತಾಲ್ಲೂಕುಗಳಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್ ಖರೀದಿಗೆ ಈಗಾಗಲೇ ಅನುಮತಿ ನೀಡಿದ್ದು, ಸ್ಟಾಕ್ ಲಭ್ಯತೆಯ ಸಂಸ್ಥೆಯನ್ನು ಗುರುತಿಸಿ ಕೊಡಲಾಗಿದೆ ಎಂದರಲ್ಲದೆ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೆ ಕೊರೋನಾ ನಿಯಂತ್ರಣಕ್ಕಾಗಿ ಇರುವ ಟಾಸ್ಕ್ ಪೊರ್ಸ್ ಕಮಿಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ವರದಿ: ಡಿಎಂಜಿ ಹಳ್ಳಿ ಅಶೋಕ್

First published: April 4, 2020, 8:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories