JDS MLC Bojegowda: ಜೆಡಿಎಸ್​​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ವಕ್ಕರಿಸಿದ ಕೊರೋನಾ ಪಾಸಿಟಿವ್​​​​​​​

ಇತ್ತೀಚೆಗೆ ಮಂಗಳೂರು ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಕೊರೋನಾ ವೈರಸ್​ ಪಾಸಿಟಿವ್​​ ಕಾಣಿಸಿಕೊಂಡಿತ್ತು. ಇದಾದ ನಂತರ ಮತ್ತೋರ್ವ ರಾಜಕಾರಣಿ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ಗೆ ಕೂಡ ಸೋಂಕು ದೃಢಪಟ್ಟಿತ್ತು. ಈಗ ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ಬಂದಿದೆ.

news18-kannada
Updated:July 8, 2020, 8:17 AM IST
JDS MLC Bojegowda: ಜೆಡಿಎಸ್​​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ವಕ್ಕರಿಸಿದ ಕೊರೋನಾ ಪಾಸಿಟಿವ್​​​​​​​
ಜೆಡಿಎಸ್​​ ಎಂಎಲ್​ಸಿ ಬೋಜೆಗೌಡ
  • Share this:
ಬೆಂಗಳೂರು(ಜು.08): ರಾಜ್ಯದ ಜನಪ್ರತಿನಿಧಿಗಳಿಗೂ ಮಾರಕ ಕೊರೋನಾ ವೈರಸ್​ ಬಿಸಿ ತಟ್ಟಿದೆ. ಇತ್ತೀಚೆಗೆ ಮಂಗಳೂರು ಬಿಜೆಪಿ ಶಾಸಕ ಭರತ್‌ ಶೆಟ್ಟಿಗೆ ಕೊರೋನಾ ವೈರಸ್​ ಪಾಸಿಟಿವ್​​ ಕಾಣಿಸಿಕೊಂಡಿತ್ತು. ಇದಾದ ನಂತರ ಮತ್ತೋರ್ವ ರಾಜಕಾರಣಿ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಡಾ. ರಂಗನಾಥ್​ಗೆ ಕೂಡ ಸೋಂಕು ದೃಢಪಟ್ಟಿತ್ತು. ಈಗ ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೆಗೌಡರಿಗೆ ಕೋವಿಡ್​​-19 ಪಾಸಿಟಿವ್​​ ಬಂದಿದೆ.

ಇತ್ತೀಚೆಗಷ್ಟೇ ಜೆಡಿಎಸ್​​ ವಿಧಾನಪರಿಷತ್ ಸದಸ್ಯ ಬೋಜೆಗೌಡ ಕೊರೋನಾ ಪರೀಕ್ಷೆ ತಪಾಸಣೆಗೊಳಗಾಗಿದ್ದರು. ಈಗ ಬೋಜೆಗೌಡರ​​​ ಕೊರೋನಾ ರಿಪೋರ್ಟ್​ ಬಂದಿದ್ದು, ಸೋಂಕು ಇರುವುದು ಧೃಡಪಟ್ಟಿದೆ. ಹೀಗಾಗಿ ಇವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ಕೋವಿಡ್​​-19 ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಸರ್ಕಾರದ ನಿಯಮದ ಪ್ರಕಾರ ಬೋಜೆಗೌಡ 14 ದಿನ ಹೋಮ್​​ ಕ್ವಾರಂಟೈನ್​​ನಲ್ಲಿ ಇರಬೇಕಾಗಿದೆ. ಅಲ್ಲಿಯತನಕ ತಮ್ಮ ಆರೋಗ್ಯದ ಬಗ್ಗೆ ಮಾತ್ರ ಗಮನಹರಿಸಬೇಕಿದೆ. ಏಮಾದರೂ ಸಮಸ್ಯೆ ಇದ್ದರೆ ಕೂಡಲೇ ವೈದ್ಯರ ಗಮನಕ್ಕೆ ತರಬೇಕಿದೆ. ಕ್ಷೇತ್ರದ ಜನ, ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ಫೋನ್​​ನಲ್ಲಿ ಮಾತ್ರ ಸಂಪರ್ಕಕ್ಕೆ ಸಿಗಬಹುದು. ಎರಡು ವಾರಗಳ ಕಾಲ ಯಾರ ಭೇಟಿಗೂ ಅವಕಾಶವಿಲ್ಲ ಎಂದು ಬೋಜೆಗೌಡ ಆಪ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಾ.ಪಂ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ ಚುನಾವಣಾ ಆಯೋಗ; ಜಿಲ್ಲಾಡಳಿತಕ್ಕೆ ಸೂಚನೆ

ಇನ್ನು, ಬೋಜೆಗೌಡರಿಗೆ ಪಾಸಿಟಿವ್​​ ಕಾಣಿಸಿಕೊಂಡಿರುವುದರಿಂದ ತಮ್ಮ ಇಡೀ ಕುಟುಂಬಕ್ಕೂ ಕೋವಿಡ್​​-19 ಪರೀಕ್ಷೆ ಮಾಡಿಸಬೇಕಾಗಿದೆ. ಬೋಜೆಗೌಡ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗೂ ಕೊರೋನಾ ಟೆಸ್ಟ್​ ಮಾಡಬೇಕಿದೆ. ಬಳಿಕ ಎಲ್ಲರಿಗೂ 14 ದಿನ ಹೋಮ್​​ ಕ್ವಾರಂಟೈನ್​​ ಮಾಡಲಾಗುತ್ತದೆ.
Published by: Ganesh Nachikethu
First published: July 8, 2020, 8:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading