• Home
 • »
 • News
 • »
 • coronavirus-latest-news
 • »
 • ಕೊರೋನಾದಿಂದ ಪಾದರಾಯನಪುರ ಕಾರ್ಪೊರೇಟರ್ ಗುಣಮುಖ: ವಿಕ್ಟೋರಿಯಾ ಆಸ್ಪತ್ರೆಯಿಂದ ಇಮ್ರಾನ್​​ ಪಾಷಾ ಡಿಸ್ಚಾರ್ಜ್​​

ಕೊರೋನಾದಿಂದ ಪಾದರಾಯನಪುರ ಕಾರ್ಪೊರೇಟರ್ ಗುಣಮುಖ: ವಿಕ್ಟೋರಿಯಾ ಆಸ್ಪತ್ರೆಯಿಂದ ಇಮ್ರಾನ್​​ ಪಾಷಾ ಡಿಸ್ಚಾರ್ಜ್​​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇನ್ನು, ಇಮ್ರಾನ್ ಪಾಷ ಜತೆಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಹೆಂಡತಿ, ಮೂವರು ಮಕ್ಕಳು, ಇಬ್ಬರು ಕಾರ್ ಚಾಲಕರು, ಮನೆ ಕೆಲಸದವರು, ಏಳು ಜನ ಕಚೇರಿ ಸಿಬ್ಬಂದಿ ಸೇರಿ ಒಟ್ಟು 21 ಜನರನ್ನು ಕ್ವಾರಂಟೈನ್​​ ಮಾಡಲಾಗಿತ್ತು. ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿತ್ತು.

 • Share this:

  ಬೆಂಗಳೂರು(ಜೂ.07): ಕೊರೋನಾ ಸೋಂಕಿತ ಪಾದರಾಯನಪುರದ ಜೆಡಿಎಸ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಈಗ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಸಂಪೂರ್ಣ ಗುಣಮುಖರಾದ ಕಾರಣ ಪಾಷಾರನ್ನು ಆಸ್ಪತ್ರೆಯ ವೈದ್ಯರು ಡಿಸ್ಚಾರ್ಜ್​ ಮಾಡಿ ಮನೆಗೆ ಕಳಿಸಿದ್ದಾರೆ. ಹೀಗಾಗಿ ಜೆಡಿಎಸ್​ ಕಾರ್ಪೋರೇಟ್​ನನ್ನು ಸ್ವಾಗತಿಸಲು ತಮ್ಮ ಬೆಂಬಲಿಗರು ವಿಕ್ಟೋರಿಯಾ ಆಸ್ಪತ್ರೆ ಮುಂದೆ ಸೇರಿದ್ದರು. ಇವರು ಡಿಸ್ಚಾರ್ಜ್​​​ ಆಗಿದ್ದರಿಂದ ಪಟಾಕಿ ಹೊಡೆದು ಬೆಂಗಲಿಗರು ಪಾಷಾರನ್ನು ಸ್ವಾಗತಿಸಿದರು. 


  ಇತ್ತೀಚೆಗೆ ಕಂಟೈನ್‍ಮೆಂಟ್ ಜೋನ್‍ ಇದ್ದರೂ ಮುಂಜಾಗೃತ ಕ್ರಮವಹಿಸದೇ ಇಮ್ರಾನ್ ಪಾಷಾ ಓಡಾಡಿಕೊಂಡಿದ್ದರು. ಹೀಗಾಗಿಉ ಇವರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯರು ನೀಡಿದ ವರದಿಯಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಆದ್ದರಿಂದ ಇಮ್ರಾನ್ ಪಾಷರ ಮನೆ ಇರುವ ಪಾದರಾಯನಪುರದ 13ನೇ ಕ್ರಾಸ್ ಅನ್ನು ಸೀಲ್‍ಡೌನ್ ಮಾಡಲಾಗಿದೆ.


  ಇನ್ನು, ಇಮ್ರಾನ್ ಪಾಷ ಜತೆಗೆ ಪ್ರಾರ್ಥಮಿಕ ಸಂಪರ್ಕ ಹೊಂದಿದ್ದ ಹೆಂಡತಿ, ಮೂವರು ಮಕ್ಕಳು, ಇಬ್ಬರು ಕಾರ್ ಚಾಲಕರು, ಮನೆ ಕೆಲಸದವರು, ಏಳು ಜನ ಕಚೇರಿ ಸಿಬ್ಬಂದಿ ಸೇರಿ ಒಟ್ಟು 21 ಜನರನ್ನು ಕ್ವಾರಂಟೈನ್​​ ಮಾಡಲಾಗಿತ್ತು. ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿತ್ತು.


  ಇದನ್ನೂ ಓದಿ: ‘ನಾಳೆಯಿಂದ ದೆಹಲಿ ಗಡಿ ತೆರವು, ಹೋಟೆಲ್​​ ಮತ್ತು ಬಾಂಕ್ವೆಟ್ಸ್​ ಮೇಲಿನ ನಿಷೇಧ ಮಾತ್ರ ಮುಂದುವರಿಕೆ‘ - ಸಿಎಂ ಕೇಜ್ರಿವಾಲ್​​


  ಪಾಷಾ ಕೋವಿಡ್ 19 ಸೋಂಕು ಇರುವುದು ದೃಢಪಟ್ಟ ಬಳಿಕವೂ ಆಸ್ಪತ್ರೆಗೆ ತೆರಳದೇ ಮನೆಯಲ್ಲಿದ್ದರು. ಈ ವೇಳೆ ಪಾದರಾಯನಪುರ ಕಾರ್ಪೊರೇಟರ್​ಗೆ ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ಕೊಟ್ಟಿದ್ದಾರೆ. ಸರ್ಕಾರದ ಎಚ್ಚರಿಕೆ ಬಳಿಕ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಖುದ್ದು ಕಾರ್ಪೊರೇಟರ್ ಇಮ್ರಾನ್ ಪಾಷಾ ಮನವೊಲಿಸಿ ಆಸ್ಪತ್ರೆಗೆ ದಾಖಲ ಆಗುವಂತೆ ಮಾಡಿದ್ದರು. ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಆಂಬುಲೆನ್ಸ್‌ನಲ್ಲಿ ಪಾಷಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.


  ಜತೆಗೆ ಕೊರೋನಾ ಪಾಸಿಟಿವ್​​ ಬಂದಾಗ ಕೂಡಲೇ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಾಗ ನೂರಾರು ಜನರನ್ನು ಮನೆ ಮುಂದೆ ಸೇರಿಸಿ ಹೈಡ್ರಾಮಾ ಸೃಷ್ಟಿಸಿದ್ದಕ್ಕೆ ಇಮ್ರಾನ್​​ ಪಾಷಾ ವಿರುದ್ಧ ಎಫ್​ಐಆರ್​​ ಕೂಡ ದಾಖಲಾಗಿದೆ. ಐಪಿಸಿ ಸೆಕ್ಷನ್​​​ 143, 188 , 270, 271 ಅಡಿ ಜೆಜೆ ನಗರ ಪೊಲೀಸರು ಎಫ್​​ಐಆರ್ ದಾಖಲಿಸಿಕೊಂಡಿದ್ದರು.

  Published by:Ganesh Nachikethu
  First published: