HOME » NEWS » Coronavirus-latest-news » JAPAN PM DECLARES EMERGENCY AS INFECTION SPREADS RH

ಕೊರೋನಾ ಭೀತಿ; ತುರ್ತು ಪರಿಸ್ಥಿತಿ ಘೋಷಿಸಿದ ಜಪಾನ್ ಪ್ರಧಾನಿ ಶಿಂಜೊ ಅಬೆ

ಕೊರೋನಾ ವೈರಸ್ ವಿರುದ್ಧ ಹೋರಾಡುವ ಉದ್ದೇಶದೊಂದಿಗೆ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಮಂಗಳವಾರ ಜನಸಂಖ್ಯೆ ಹೆಚ್ಚಿರುವ ಕೇಂದ್ರ ಭಾಗಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

news18-kannada
Updated:April 7, 2020, 3:01 PM IST
ಕೊರೋನಾ ಭೀತಿ; ತುರ್ತು ಪರಿಸ್ಥಿತಿ ಘೋಷಿಸಿದ ಜಪಾನ್ ಪ್ರಧಾನಿ ಶಿಂಜೊ ಅಬೆ
ವಿದ್ಯಾರ್ಥಿಗಳ ಬದಲಿಗೆ ಪದವಿ ಸ್ವೀಕರಿಸಿದ ರೊಬೋಟ್​ಗಳು.
  • Share this:
ಟೋಕಿಯೊ: ಮಾರಕ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಸೋಂಕಿನಿಂದಾಗಿ ಹಲವು ದೇಶಗಳು ಲಾಕ್​ಡೌನ್​ ಘೋಷಿಸಿವೆ. ಈ ಬೆನ್ನಲ್ಲೆ ಜಪಾನ್​ನಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತರ್ತುಪರಿಸ್ಥಿತಿ ಘೋಷಿಸಲಾಗಿದೆ.

ಕೊರೋನಾ ವೈರಸ್ ವಿರುದ್ಧ ಹೋರಾಡುವ ಉದ್ದೇಶದೊಂದಿಗೆ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಮಂಗಳವಾರ ರಾಜ್ಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಜನಸಂಖ್ಯೆ ಹೆಚ್ಚಿರುವ ಪ್ರಮುಖ ಕೇಂದ್ರ ಭಾಗಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಜೊತೆಗೆ ಮಾರಕ ಸೋಂಕಿನ ಪರಿಹಾರವಾಗಿ 108 ಟ್ರಿಲಿಯನ್ ಯೆನ್​ (990 ಬಿಲಿಯನ್ ಡಾಲರ್) ಪ್ಯಾಕೇಜ್​ ಘೋಷಣೆ ಮಾಡಲಾಗಿದೆ. ಈ ಮೊತ್ತ ಜಪಾನ್​ನ ಒಟ್ಟು ಆರ್ಥಿಕತೆಯ ಶೇ.20ರಷ್ಟಕ್ಕೆ ಸಮವಾಗಿದೆ.

ಕೊರೋನಾ ವೈರಸ್​ನಿಂದಾಗಿ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಟೋಕಿಯೊದ ವಿವಿಯೊಂದು ಘಟಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದು, ಇಲ್ಲಿ ವಿದ್ಯಾರ್ಥಿಗಳ ಪರವಾಗಿ ರಿಮೋಟ್ ನಿಯಂತ್ರಿತ ಅವತಾರ್ ರೋಬೊಟ್​ಗಳು ಪದವಿ ಸ್ವೀಕರಿವೆ. ರೊಬೋಟ್​ಗಳಿಗೆ ಕ್ಯಾಪ್​, ಗೌನ್​ ಹಾಕಿ, ಪದವಿ ಪಡೆಯುವ ವಿದ್ಯಾರ್ಥಿಗಳ ಫೋಟೋವನ್ನು ಆಯಾ ರೊಬೋಟ್​ಗಳಿಗೆ ಹಾಕಿ ಪದವಿ ನೀಡಲಾಗಿದೆ.ಇದನ್ನು ಓದಿ: ಕೊರೋನಾದಿಂದ ತೀವ್ರ ಹೊಡೆತಕ್ಕೊಳಗಾದ ದೇಶಗಳಿಗೆ ಮಾತ್ರ ಹೈಡ್ರಾಕ್ಸಿಕ್ಲೋರಿಕ್ವಿನ್ ಪೂರೈಕೆ; ಮೋದಿ ಸ್ಪಷ್ಟನೆ
Youtube Video
First published: April 7, 2020, 3:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories