HOME » NEWS » Coronavirus-latest-news » JALANDHAR DISTRICT ADMIN HELPS 3 MONTH OLD BABY GET CRITICAL MEDICINES DURING COVID 19 LOCKDOWN RH

ಲಾಕ್​ಡೌನ್ ಸಮಯದಲ್ಲಿ 3 ತಿಂಗಳ ಮಗುವಿಗೆ ಔಷಧ ಪಡೆಯಲು ಸಹಾಯ ಮಾಡಿದ ಜಲಂಧರ್ ಜಿಲ್ಲಾಡಳಿತ

3 ತಿಂಗಳ ಶಿಶುವು ಗಂಭೀರ ಜಠರಗರುಳಿನ ಕಾಯಿಲೆಯಿಂದ ಬಳಲುತ್ತಿದೆ ಮತ್ತು ಶಿಶುವಿಗೆ ಎರಡು ಕರುಳಿನ ಶಸ್ತ್ರಚಿಕಿತ್ಸೆ ಮಾಡಿಸಲು ಸೂಚಿಸಲಾಗಿತ್ತು, ಅವುಗಳಲ್ಲಿ ಒಂದನ್ನು ಮೊದಲೇ ನಡೆಸಲಾಗಿತ್ತು. ಮತ್ತೊಂದು ಶಸ್ತ್ರಚಿಕಿತ್ಸೆಯನ್ನು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾಗಿದೆ.

news18-kannada
Updated:March 27, 2020, 6:32 PM IST
ಲಾಕ್​ಡೌನ್ ಸಮಯದಲ್ಲಿ  3 ತಿಂಗಳ ಮಗುವಿಗೆ ಔಷಧ ಪಡೆಯಲು ಸಹಾಯ ಮಾಡಿದ ಜಲಂಧರ್ ಜಿಲ್ಲಾಡಳಿತ
ಸಾಂದರ್ಭಿಕ ಚಿತ್ರ
  • Share this:
ಚಂಡೀಗಢ: ರಾಷ್ಟ್ರವ್ಯಾಪಿ ಲಾಕ್​ಡೌನ್ ಘೋಷಿಸಿರುವುದರಿಂದ ಪಂಜಾಬ್​ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಆದರೆ ಇದರ ನಡುವೆಯೂ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮೂರು ತಿಂಗಳ ಶಿಶುವಿಗೆ ಜಲಂಧರ್ ಜಿಲ್ಲಾಡಳಿತವು  ಸಹಾಯ ಹಸ್ತ ಚಾಚಿದೆ. ಮಗುವಿಗೆ ಬೇಕಾದ ಔಷಧಗಳನ್ನು ವ್ಯವಸ್ಥೆ ಮಾಡುವ ಮೂಲಕ ಜಿಲ್ಲಾಡಳಿತ ಮಾನವಿಯತೆ ಮೆರೆದಿದೆ. 

ತಿಂಗಳ ಶಿಶುವು ಗಂಭೀರ ಜಠರಗರುಳಿನ ಕಾಯಿಲೆಯಿಂದ ಬಳಲುತ್ತಿದೆ ಮತ್ತು ಎರಡು ಕರುಳಿನ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಪೋಷಕರಿಗೆ ಸೂಚಿಸಲಾಗಿತ್ತು. ಅವುಗಳಲ್ಲಿ ಒಂದನ್ನು ಮೊದಲೇ ನಡೆಸಲಾಗಿತ್ತು. ಮತ್ತೊಂದು ಶಸ್ತ್ರಚಿಕಿತ್ಸೆಯನ್ನು ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾಗಿದೆ.

ಕೊರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಜಲಂಧರ್ ನಗರ ಮತ್ತು ಪಂಜಾಬ್​ನ ಉಳಿದ ಭಾಗಗಳಲ್ಲಿ ಕರ್ಫ್ಯೂ ಘೋಷಿಸಿರುವ ಕಾರಣ, ಬಾಲಕಿಯ ಪೋಷಕರಿಗೆ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಔಷಧಗಳು ತೊರೆಯುತ್ತಿರಲಿಲ್ಲ.

ಜಲಾಂಧರ್ ಜಿಲ್ಲಾಧಿಕಾರಿ ವರಿಂದರ್ ಕುಮಾರ್ ಶರ್ಮಾ ಅವರು ಇತ್ತೀಚೆಗೆ ದಿನಸಿ, ಹಾಲು, ತರಕಾರಿಗಳು ಮತ್ತು ಔಷಧಿಗಳ ಪೂರೈಕೆಗಾಗಿ ಜನರಿಗೆ ಸಹಾಯವಾಣಿ ಸಂಖ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು.

ಶಿಶುವಿನ ತಾಯಿ ಔಷಧ ನಿಯಂತ್ರಣ ಅಧಿಕಾರಿ ಕಮಲ್ ಕಾಂಬೋಜ್ ಅವರನ್ನು ಸಂಪರ್ಕಿಸಿದರು. ಪರಿಸ್ಥಿತಿಯನ್ನು ಅರಿತ ಕಾಂಬೊಜ್ ಅವರು ತಕ್ಷಣವೇ ಅಗತ್ಯವಾದ ಔಷಧಗಳನ್ನು ಮನೆ ಬಾಗಿಲಿಗೆ ತಲುಪುವಂತೆ ನೋಡಿಕೊಂಡರು. ಶಸ್ತ್ರಚಿಕಿತ್ಸೆಗೆ ಮುನ್ನ ಶಿಶುವಿಗೆ ಅಗತ್ಯವಾದ ಔಷಧಿಗಳನ್ನು ಪೂರೈಸಲು ಒಬ್ಬ ರಸಾಯನಶಾಸ್ತ್ರಜ್ಞನನ್ನು ಜಿಲ್ಲಾಡಳಿತ ಕರ್ತವ್ಯಕ್ಕೆ ನೇಮಿಸಿದೆ ಎಂದು ಶುಕ್ರವಾರ ತಿಳಿಸಿದೆ.

ಜನರಿಗೆ, ವಿಶೇಷವಾಗಿ ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವವರಿಗೆ ಸಹಾಯ ಮಾಡಲು ಜಿಲ್ಲಾಡಳಿತ ಕರ್ತವ್ಯನಿರತವಾಗಿದೆ ಎಂದು ಡಿಸಿ ಶರ್ಮಾ ಹೇಳಿದರು. ಕರ್ಫ್ಯೂ ಮಧ್ಯೆ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಇದನ್ನು ಓದಿ: ಕರ್ನಾಟಕದಲ್ಲಿ 10 ತಿಂಗಳ ಮಗು ಸೇರಿ 7 ಜನರಿಗೆ ಕೊರೋನಾ ಪತ್ತೆ; ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಯಲು 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.

  • ವರದಿ: ಸಂಧ್ಯಾ ಎಂ


First published: March 27, 2020, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories