HOME » NEWS » Coronavirus-latest-news » JAL SHAKTI MINISTER ASKS CONCERNED STATES TO TAKE IMMEDIATE COGNISANCE OF FLOATING CORPSES IN GANGA MAK

River Ganga: ಗಂಗೆಯಲ್ಲಿ ಇನ್ನೂ ನಿಂತಿಲ್ಲ ಹೆಣಗಳ ಹರಿವು: ಕೇಂದ್ರ ಜಲಶಕ್ತಿ ಸಚಿವರಿಂದ ತನಿಖೆಗೆ ಒತ್ತಾಯ

ಸತತ ಎರಡನೇ ದಿನವೂ ಗಂಗಾ ನದಿ ದಂಡೆಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಮೃತ ದೇಹಗಳು ಉತ್ತರ ಪ್ರದೇಶದಿಂದ ಹರಿಯ ಬಿಡಲಾಗಿದೆ ಎಂದು ಬಿಹಾರದ ಅಧಿಕಾರಿಗಳು ಆರೋಪಿಸಿದ್ದಾರೆ.

news18-kannada
Updated:May 11, 2021, 5:15 PM IST
River Ganga: ಗಂಗೆಯಲ್ಲಿ ಇನ್ನೂ ನಿಂತಿಲ್ಲ ಹೆಣಗಳ ಹರಿವು: ಕೇಂದ್ರ ಜಲಶಕ್ತಿ ಸಚಿವರಿಂದ ತನಿಖೆಗೆ ಒತ್ತಾಯ
ಗಂಗಾ ನದಿ ಸಾಂದರ್ಭಿಕ ಚಿತ್ರ.
  • Share this:
ಬಿಹಾರ (ಮೇ 11); ಕೊರೋನಾ ಸೋಂಕಿನ ಪ್ರಕರಣ ಹಾಗೂ ಸಾವಿನ ಸಂಖ್ಯೆ ಭಾರತದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಒಂದೆಡೆ ಆಕ್ಸಿಜನ್ ಮತ್ತು ಐಸಿಯು ಬೆಡ್ ವೆಂಟಿಲೇಟರ್​ಗಾಗಿ ಒದ್ದಾಡುತ್ತಿರುವ ಜನರಿಗೆ ಮತ್ತೊಂದೆಡೆ ಮೃತದೇಹಗಳ ಅಂತ್ಯಕ್ರಿಯೆ ಭಾರೀ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಅಂತ್ಯ ಸಂಸ್ಕಾರದ ಸಿಬ್ಬಂದಿಗಳು ಸುಲಿಗೆಗೆ ನಿಂತಿದ್ದಾರೆ. ಸೋಂಕಿತರ ಸಂಸ್ಕಾರಕ್ಕೆ ದುಬಾರಿ ವೆಚ್ಚ ವಿಧಿಸುತ್ತಿರುವುದು ಅನೇಕ ರಾಜ್ಯಗಳಲ್ಲಿ ಕಂಡು ಬಂದಿದೆ. ಬಿಹಾರದಲ್ಲೂ ಕೂಡ ಇಂತಹ ಘಟನೆ ನಡೆದಿದೆ. ಮೃತದೇಹಗಳ ಅಂತ್ಯಕ್ರಿಯೆಗೆ 40-50 ಸಾವಿರ ಹಣದ ಬೇಡಿಕೆ ಇಡಲಾಗುತ್ತಿದೆ. ಹೀಗಾಗಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಅನೇಕ ಮಂದಿ ಶವಗಳನ್ನು ಪವಿತ್ರ ಗಂಗಾ ನದಿಯಲ್ಲಿ ಎಸೆಯುತ್ತಿರುವ ಘಟನೆ ಸೋಮವಾರ ಬೆಳಕಿಗೆ ಬಂದಿತ್ತು. ನೂರಾರು ಶವಗಳು ಗಂಗೆಯಲ್ಲಿ ತೇಲುತ್ತಿರುವುದನ್ನು ಕಂಡು ಜನ ಹೌಹಾರಿದ್ದರು.

ಬಿಹಾರದ ಬಕ್ಸಾರ್‌ನ ಗಂಗಾ ನದಿ ತಟದಲ್ಲಿ ನೂರಕ್ಕೂ ಹೆಚ್ಚು ಮೃತದೇಹಗಳು ಕಂಡು ಬಂದಿದ್ದು, ಸ್ಥಳೀಯ ಆಡಳಿತ ಈ ಬಗ್ಗೆ ಗಮನ ವಹಿಸಬೇಕು ಎಂದು ರಾಜ್ಯ ಸರ್ಕಾರ ಎಚ್ಚರಿಕೆಯನ್ನೂ ಸಹ ನೀಡಿತ್ತು. ಈ ಸುದ್ದಿ ಸೋಮವಾರದ ಮಟ್ಟಿಗೆ ಭಾರೀ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಈಗ ಬಕ್ಸಾರ್‌ನಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಘಾಜಿಪುರದಲ್ಲಿಯೂ ಗಂಗೆಯಲ್ಲಿ ಸಾಕಷ್ಟು ಮೃತದೇಹಗಳು ಪತ್ತೆಯಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಸತತ ಎರಡನೇ ದಿನವೂ ಗಂಗಾ ನದಿ ದಂಡೆಯಲ್ಲಿ ಮೃತದೇಹಗಳು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಮೃತ ದೇಹಗಳು ಉತ್ತರ ಪ್ರದೇಶದಿಂದ ಹರಿಯ ಬಿಡಲಾಗಿದೆ ಎಂದು ಬಿಹಾರದ ಅಧಿಕಾರಿಗಳು ಆರೋಪಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಮೃತದೇಹಗಳನ್ನು ನೀರಿಗೆ ಬಿಡುವ ಸಂಪ್ರದಾಯವಿಲ್ಲ ಎಂದು ವಾದಿಸಿದ್ದಾರೆ.

ಉತ್ತರ ಭಾರತದ ಗ್ರಾಮೀಣ ಭಾಗಗಳಲ್ಲಿ ಕೊರೋನಾ ವೇಗವಾಗಿ ಹರಡುತ್ತಿರುವುದರಿಂದ, ನದಿಯಲ್ಲಿ ತೇಲುತ್ತಿರುವ ಶವಗಳು ಕೋವಿಡ್ ಸೋಂಕಿತ ರೋಗಿಗಳ ಮೃತದೇಹಗಳೆಂದು ಶಂಕಿಸಲಾಗಿದೆ. ಗ್ರಾಮೀಣ ಶವಾಗಾರಗಳಲ್ಲಿ ಯಾವುದೇ ಕೊರೋನಾ ನಿಯಮಾವಳಿಗಳನ್ನು ಪಾಲಿಸದಿರುವ ಕಾರಣ, ಈ ಮೃತದೇಹಗಳಿಂದ ಮತ್ತಷ್ಟು ಸೋಂಕು ಹರಡಬಹುದೆಂಬ ಭಯದಲ್ಲಿದ್ದಾರೆ ಸ್ಥಳೀಯರು. ನದಿಯಲ್ಲಿ ತೇಲುತ್ತಿರುವ ಶವಗಳನ್ನು ಆದಷ್ಟು ಬೇಗನೆ ರವಾನಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ನೀರಿನಲ್ಲಿ ಉಂಟಾಗುವ ಮಾಲಿನ್ಯವು ರೋಗದ ತ್ವರಿತ ಹರಡುವಿಕೆಗೆ ಕಾರಣವಾಗಬಹುದು ಎಂದು ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದು, ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

“"ನಮಗೆ ಮೃತದೇಹಗಳು ತೇಲುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಮ್ಮ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಇವುಗಳು ಎಲ್ಲಿಂದ ಬಂದಿವೆ ಎಂದು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ" ಎಂದು ಘಾಜಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಪಿ. ಸಿಂಗ್ ಹೇಳಿದ್ದಾರೆ.

ಬಕ್ಸಾರ್ ಘಟನೆಯನ್ನು ಉಲ್ಲೇಖಿಸಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಂಬಂಧಪಟ್ಟ ರಾಜ್ಯಗಳನ್ನು ಕೇಳಿಕೊಂಡಿದ್ದಾರೆ.ಭಾರತದಲ್ಲಿ ಕೊರೋನಾ ಆರ್ಭಟ:

ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ‌ಹೆಚ್ಚು‌, ಏಪ್ರಿಲ್ 21ರಿಂದ ದಿನ‌ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ‌ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರು ಲಕ್ಷಕ್ಕೂ ಹೆಚ್ಚು ಜನ ಸೋಂಕು ಪೀಡಿತರಾಗುತ್ತಿದ್ದಾರೆ.

ಇದನ್ನೂ ಓದಿ: Covid Vaccine: ವ್ಯಾಕ್ಸಿನ್​ ಫಾರ್ಮುಲಾವನ್ನು ಇತರೆ ಕಂಪನಿಗಳಿಗೂ ನೀಡಿ, ಲಸಿಕೆ ಕೊರತೆ ನೀಗಿಸಿ; ಕೇಂದ್ರಕ್ಕೆ ದೆಹಲಿ ಸಿಎಂ ಸಲಹೆ

ಸೋಮವಾರ 3,29,942 ಪ್ರಕರಣಗಳು ಪತ್ತೆಯಾಗಿವೆ ಮತ್ತು ಡಿಸ್ಚಾರ್ಜ್ ಆದವರು 3,56,082 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,29,92,517ಕ್ಕೆ ಏರಿಕೆ ಆಗಿದೆ.‌ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ‌ ಹೆಚ್ಚಾಗಿದೆ. ಸೋಮವಾರ 3,876 ಜನರು ಬಲಿ ಆಗಿದ್ದು ಈವರೆಗೆ ಮಹಾಮಾರಿ ಕೊರೋನಾಗೆ ಬಲಿ ಆದವರ ಸಂಖ್ಯೆ 2,49,992ಕ್ಕೆ ಏರಿಕೆ ಆಗಿದೆ.
Youtube Video

ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಅದಾದ ಬಳಿಕ ಅದು ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು.
Published by: MAshok Kumar
First published: May 11, 2021, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories