ಬೆಂಗಳೂರಲ್ಲಿ ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಜೈನ ಸಂಘಟನೆ; ದಿನಕ್ಕೆ 28 ಸಾವಿರ ಮಂದಿಗೆ ಉಚಿತ ಆಹಾರ ವಿತರಣೆ

ಊಟ ಸಿಗದೆ ಸಂಕಷ್ಟದಲ್ಲಿರುವವರೆಗೆ ಪ್ರತ್ಯೇಕವಾದ ಎರಡು ವಾಹನದಲ್ಲಿ ಹುಡುಕಿ ಆಹಾರ ಕೊಡುತ್ತಿದ್ದಾರೆ. ಒಟ್ಟು 350 ಸದಸ್ಯರು ಸೇರಿ ದಿನವೂ 28 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಫುಡ್ ಪಾಕೆಟ್ ಮಾಡುತ್ತಿರುವ ಜೈನ್ ಸಮುದಾಯದ ಸದಸ್ಯರು

ಫುಡ್ ಪಾಕೆಟ್ ಮಾಡುತ್ತಿರುವ ಜೈನ್ ಸಮುದಾಯದ ಸದಸ್ಯರು

  • Share this:
ಬೆಂಗಳೂರು(ಏ.01) : ಕೊರೋನಾ ವೈರಸ್ ನಿಂದಾಗಿ ದೇಶವೇ ಲಾಕ್‌ಡೌನ್‌ ಆಗಿದೆ. ಇದರಿಂದ ಆಹಾರ ಸಿಗದೆ ಬಡವರು, ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಉದ್ಯೋಗ ಅರಸಿ ಬೆಂಗಳೂರಿ‌ಗೆ ಈ ರೀತಿ ಬಂದವರ ಸಂಖ್ಯೆಯಂತೂ ಹೆಚ್ಚಿದೆ. ಈ ಕಾರಣಕ್ಕೆ ಬೆಂಗಳೂರಿನ ಜೈನ ಸಮುದಾಯ ಸದಸ್ಯರು ಟೊಂಕಕಟ್ಟಿ ನಿಂತಿದ್ದು, ಲಾಕ್‌ ಡೌನ್ ಮುಗಿಯುವರೆಗೂ ಫ್ರೀ ಪುಡ್ ಪಾಕೆಟ್ ಕೊಡಲು ಆರಂಭಿಸಿದೆ.

ಏಪ್ರಿಲ್ 14ರವರೆಗೆ ಉಚಿತವಾಗಿ ಫುಡ್ ಪಾಕೆಟ್ ನೀಡುತ್ತಿದೆ. ಜೈನ್ ಇಂಟರ್‌ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ವತಿಯಿಂದ ಬೆಂಗಳೂರಿನಲ್ಲಿ ಏಳು ಜೋನ್ ಗುರುತಿಸಿ ನಿಜವಾಗಿ ಆಹಾರದ ಅವಶ್ಯಕತೆಯಿರುವ ಕಾರ್ಮಿಕ ಹಾಗೂ ಅವರ ಕುಟುಂಬಗಳಿಗೆ ಫುಡ್ ಪಾಕೆಟ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

ಬಿಬಿಎಂಪಿ ನೀಡಿರುವ ಪಟ್ಟಿಯ ಆಧಾರದಲ್ಲಿ ದಿನಕ್ಕೆ 28 ಸಾವಿರ ಪಾಕೆಟ್ ನೀಡಲಾಗುತ್ತಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 14 ಸಾವಿರ, ಸಂಜೆಯಿಂದ ರಾತ್ರಿವರೆಗೆ 14 ಸಾವಿರ ಊಟದ ಪಾಕೆಟ್ ವಿತರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಸಂಘದ ಪಾರಸ್ ಜೈನ್.

ಲಾಕ್‌ ಡೌನ್ ಮುಗಿಯುವವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ಅಡುಗೆ ತಯಾರಿ ಮಾಡಲಾಗುತ್ತಿದೆ. ಅಡುಗೆ ಮಾಡಲು 40 ಬಾಣಸಿಗರನ್ನು ನಿಯೋಜಿಸಿದ್ದು, ಇಲ್ಲಿ ಗುಣಮಟ್ಟದ ಆಹಾರ ತಯಾರಿಸಿ ಪಾಕೆಟ್ ನಲ್ಲಿ ಹಾಕಲಾಗುತ್ತದೆ.

ಇದನ್ನು ಬೆಂಗಳೂರಿನ ವಿವಿಧ ಜೋನ್ ಗಳಿಗೆ ಪಾಕೆಟ್ ಬಾಕ್ಸ್ ಗಳಿಗೆ ಹಾಕಲು 40 ಸಿಬ್ಬಂದಿ ಕಾರ್ಯನಿರತವಾಗಿದ್ದಾರೆ. ಇದಲ್ಲದೆ ಸೆಕ್ಯೂರಿಟಿ ಗಾರ್ಡ್, ನಿರಾಶ್ರಿತಿರು, ಊಟ ಸಿಗದೆ ಸಂಕಷ್ಟದಲ್ಲಿರುವವರೆಗೆ ಪ್ರತ್ಯೇಕವಾದ ಎರಡು ವಾಹನದಲ್ಲಿ ಹುಡುಕಿ ಆಹಾರ ಕೊಡುತ್ತಿದ್ದಾರೆ. ಒಟ್ಟು 350 ಸದಸ್ಯರು ಸೇರಿ ದಿನವೂ 28 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ : ಮೇಕೆಗೂ ಹಾಕಿದ್ರು ಮಾಸ್ಕ್; ಮಾನಸಿಕ ಅಸ್ವಸ್ಥನ ಬಳಿಯೂ ಮಾಸ್ಕ್; ಜಾಗೃತಗೊಂಡ ಬೆಳಗಾವಿ ಜನ

ಕೊರೊನೋದಿಂದ ಊಟವಿಲ್ಲದೆ ನಲುಗುತ್ತಿರುವ ಬೆಂಗಳೂರು ಬಡಜನತೆಗೆ ಜೈನ ಸಮುದಾಯ ಎರಡುವರೆ ಕೋಟಿ ವೆಚ್ಚದಲ್ಲಿ ಆಹಾರ ಸೇವೆ ನೀಡುತ್ತಿದೆ. ಒಂದುವೇಳೆ ಲಾಕ್ ಡೌನ್ ವಿಸ್ತರಣೆಯಾದ್ರೂ ತಮ್ಮ ಸೇವೆ ಮುಂದುವರೆಸುವುದಾಗಿ ಜೈನ ಸಂಘ ತಿಳಿಸಿದೆ.
First published: