HOME » NEWS » Coronavirus-latest-news » JAIN COMMUNITY ARRANGE 65 BEDS IN DAVANAGERE FOR COVID PATIENTS LG

Davanagere: ಜೈನ್ ಸಮುದಾಯದಿಂದ 65 ಬೆಡ್​​​ಗಳುಳ್ಳ ಕೋವಿಡ್ ಸೆಂಟರ್ ಸಿದ್ಧ

ಸೋಂಕಿತರಿಗೆ ಬೇಕಾದಂತ ಬೆಡ್ ವ್ಯವಸ್ಥೆ, ಆಕ್ಸಿಜನ್, ಔಷಧ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಸೋಂಕಿತರಿಗೆ ಪಲ್ಸ್ ರೇಟ್ ಚೆಕ್ ಮಾಡಲು ಆಕ್ಸಿಮೀಟರ್, ಇದ್ದು ನಾಲ್ಕು ಜನ ನುರಿತ ವೈದ್ಯರು ನಾಲ್ಕು ನರ್ಸ್ ವ್ಯವಸ್ಥೆ ಮಾಡಲಾಗಿದೆ.

news18-kannada
Updated:May 5, 2021, 12:02 PM IST
Davanagere: ಜೈನ್ ಸಮುದಾಯದಿಂದ 65 ಬೆಡ್​​​ಗಳುಳ್ಳ ಕೋವಿಡ್ ಸೆಂಟರ್ ಸಿದ್ಧ
ಬೆಡ್​ ವ್ಯವಸ್ಥೆ
  • Share this:
ದಾವಣಗೆರೆ(ಮೇ 05): ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಕೆಲ ಸೋಂಕಿತರಿಗೆ ಬೆಡ್ ಸಿಗದೆ ಸಾಯುತಿದ್ದರೆ, ಇನ್ನೂ ಕೆಲವರು ಆಕ್ಸಿಜನ್ ಇಲ್ಲದೆ ಮೃತಪಡುತ್ತಿದ್ದಾರೆ. ದಾವಣಗೆರೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತಿದ್ದು ಕೆಲವರಿಗೆ ಆಕ್ಸಿಜನ್ ಬೆಡ್, ನಾರ್ಮಲ್ ಬೆಡ್ ವ್ಯವಸ್ಥೆ ಕೂಡ ಕಡಿಮೆಯಾಗ್ತಿದೆ. ಇದನ್ನ ಮನಗಂಡ ದಾವಣಗೆರೆ ಜೈನ್ ಸಮುದಾಯ ಆರೋಗ್ಯ ಸೇವೆ ನೀಡಬೇಕು ಅಂತ ಕೋವಿಡ್ ಕೇರ್ ಸೆಂಟರ್ ಓಪನ್ ಮಾಡಿದ್ದು ಆಸ್ಪತ್ರೆಗಳ ಮೇಲಿನ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ‌. ಬೆಡ್ ಸಿಗದೆ ಜನರು ಕೂಡ ಪರದಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲೂ ಕೂಡ ಈ ಪರಿಸ್ಥಿತಿ ಹೊರತಾಗಿಲ್ಲ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರಿಂದ ಜನರಿಗೆ ಸರಿಯಾಗಿ ಆರೋಗ್ಯ ಸೇವೆ ಸಿಗ್ತಾ ಇಲ್ಲ. ಇದನ್ನ ಮನಗಂಡ ದಾವಣಗೆರೆ ಜೈನ್ ಸಮುದಾಯ ಜನರಿಗೆ ಆರೋಗ್ಯ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿಯೇ ದಾವಣಗೆರೆಯ ಆವಗೆರೆಯ ಜೈನ್ ದೇವಸ್ಥಾನದ ಬಳಿ 65 ಹಾಸಿಗೆಯ ಕೋವಿಡ್ ಸೆಂಟರ್ ತೆರೆದಿದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದೆ.

Coronavirus India Updates: ದೇಶದಲ್ಲಿ ಮತ್ತೆ ಒಂದೇ ದಿನ ಸುಮಾರು 4 ಲಕ್ಷ ಕೊರೋನಾ ಪ್ರಕರಣಗಳು ಪತ್ತೆ!

ಸೋಂಕಿತರಿಗೆ ಬೇಕಾದಂತ ಬೆಡ್ ವ್ಯವಸ್ಥೆ, ಆಕ್ಸಿಜನ್, ಔಷಧ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಸೋಂಕಿತರಿಗೆ ಪಲ್ಸ್ ರೇಟ್ ಚೆಕ್ ಮಾಡಲು ಆಕ್ಸಿಮೀಟರ್, ಇದ್ದು ನಾಲ್ಕು ಜನ ನುರಿತ ವೈದ್ಯರು ನಾಲ್ಕು ನರ್ಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೆಂಟರ್ ನಲ್ಲಿ ಯಾರಿಗಾದ್ರೂ ಹೆಚ್ಚಿನ ಚಿಕಿತ್ಸೆ ಬೇಕಾದ್ರೂ ದಾವಣಗೆರೆಯ ಎಸ್ ಎಸ್ ಹೈಟೆಕ್, ಬಾಪೂಜಿ ಆಸ್ಪತ್ರೆಗೆ ಕಳುಹಿಸುವಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ‌.

ಇನ್ನೂ ಸೋಂಕಿತರಿಗೆ ಟೂಥ್ ಬ್ರಶ್​, ಸೋಪು, ಶ್ಯಾಂಪೂ, ಕುಡಿಯುವ ಬಿಸಿ ನೀರಿನ ವ್ಯವಸ್ಥೆ, ಸ್ಟೀಮ್, ಕಷಾಯ  ಅಲ್ಲೆ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಅಲ್ಲದೆ ಸೋಂಕಿತರು ಮಾನಸಿಕ ಖಿನ್ನತೆಗೆ ಒಳಗಾಗಬಾರದು ಅಂತ ಕೋವಿಡ್ ಹಾಲ್ ನಲ್ಲೆ ಟಿವಿ ವ್ಯವಸ್ಥೆ ಮಾಡಿದ್ದು, ಆಟ ಆಡಲು ಚೇಸ್, ಕೇರಂ ಬೋರ್ಡ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇನ್ನೂ ಜೈನ್ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಮೇಯರ್ ಎಸ್ ಟಿ ವಿರೇಶ್ ಜೈನ್ ಸಮುದಾಯದ ಕಾರ್ಯವನ್ನ  ಹಾಡಿಹೊಗಳಿದ್ದಾರೆ. ರಾಜ್ಯದಲ್ಲಿ ಹೆಲ್ತ್ ಎಮೆರ್ಜೆನ್ಸಿ ಇದ್ದು, ಇನ್ನೂ ಅನೇಕ ಸಮುದಾಯದ ಜನ ಇದೇ ರೀತಿ ಕೋವಿಡ್ ಸೆಂಟರ್ ತೆರೆದು ಜನರಿಗೆ ಆರೋಗ್ಯ ಸೇವೆ ನೀಡಲು ಮನವಿ ಮಾಡಿದ್ದಾರೆ.

ಕಳೆದ ವರ್ಷ ಅಂದರೆ 2020 ರ ಸಮಯದಲ್ಲಿ ದಾವಣಗೆರೆಯ ಜೈನ್ ಸಮುದಾಯ ಕೋವಿಡ್ ಸೆಂಟರ್ ತೆರೆದು ಅನೇಕ ಜನರಿಗೆ ಆರೋಗ್ಯ ಸೇವೆ ನೀಡಿ ಗುಣಮುಖರನ್ನಾಗಿ ಮೂಡಿತ್ತು. ಇದೀಗ ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಜೋರಾಗಿದ್ದು, ಈ ವೇಳೆ ಮತ್ತೆ ಜೈನ್ ಸಮುದಾಯ ಮತ್ತೆ ಆರೋಗ್ಯ ಸೇವೆ ನೀಡಲು ಮುಂದಾಗಿದ್ದು ಜಿಲ್ಲೆಯ ಜನರ ಪ್ರೀತಿಗೆ ಪಾತ್ರವಾಗಿದೆ.(ವರದಿ : ಸಂಜಯ್ ಎ.ಪಿ)
Published by: Latha CG
First published: May 5, 2021, 12:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories