HOME » NEWS » Coronavirus-latest-news » JAGGESH WROTE AN EMOTIONAL POST ON VETERAN KANNADA ACTOR SHANKHANADA ARAVINDS DEATH AE

RIP Shankhanada Aravind: ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ ಎಂದು ಕಂಬನಿ ಮಿಡಿದ ಜಗ್ಗೇಶ್​..!

ಹಾಸ್ಯ ಹಾಗೂ ಪೋಷಕ ನಟನ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿರುವ ಶಂಖನಾದ ಅರವಿಂದ್​ ಅವರಿಗೆ  ಶಂಖನಾದ ಎಂಬ ಹೆಸರು ಬರಲು ಒಂದು ಕಾರಣವಿದೆ. ಅವರು ನಾಯಕನಾಗಿ ಅಭಿನಯಿಸಿದ ಸಿನಿಮಾ ಶಂಖನಾದ. 1986ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ  ಗಮನ ಸೆಳೆದ ಕಾರಣದಿಂದ ಅವರ ಹೆಸರಿನ ಜೊತೆಗೆ ಶಂಖನಾದ ಹೆಸರು  ಸೇರಿಕೊಂಡಿತು. ಅಂದಿನಿಂದ ಇವರು ಸ್ಯಾಂಡಲ್​ವುಡ್​ನಲ್ಲಿ ಶಂಖನಾದ ಅರವಿಂದ್​ ಎಂದೇ ಖ್ಯಾತರಾದರು.

Anitha E | news18-kannada
Updated:May 7, 2021, 3:59 PM IST
RIP Shankhanada Aravind: ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ ಎಂದು ಕಂಬನಿ ಮಿಡಿದ ಜಗ್ಗೇಶ್​..!
ಹಿರಿಯ ನಟ ಶಂಖನಾದ ಅರವಿಂದ್​ ಹಾಗೂ ನಟ ಜಗ್ಗೇಶ್​
  • Share this:
ಬೆಟ್ಟದ ಹೂ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್ ಕನ್ನಡದಲ್ಲಿ ಹಾಡುವ ಬಿಸಿಲೇ ಇರಲಿ ಮಳೆಯೇ ಇರಲಿ ಹಾಡಿನ್ನು ಇಂಗ್ಲಿಷ್​ನಲ್ಲಿ ಹೇಳುವ ಪಾತ್ರದಲ್ಲಿ ನಟಿಸಿರುವ ನಟ ಶಂಖನಾದ ಅರವಿಂದ್​. 250ಕ್ಕೂ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಹಿರಿಯ ನಟ ಹೆಚ್ಚಾಗಿ ಕಾಣಿಸಿಕೊಂಡಿರುವುದು ಪೋಷಕ ಪಾತ್ರಗಳಲ್ಲಿ. ನಾಯಕ ನಟನಾಗಿ, ಹಾಸ್ಯ ನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಶಂಖನಾದ ಅರವಿಂದ್​ ಅವರು ಕನ್ನಡದ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಪರಿಚಿತ, ಆಗಂತುಕ, ಶಂಖನಾದ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಸಿನಿಪ್ರಿಯರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನ ಮಾಡಿಕೊಂಡವರು ಈ ನಟ ಶಂಖನಾದ ಅರವಿಂದ್​. ಇಂದು ಮಧ್ಯಾಹ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊರೋನಾದಿಂದ  ಬಳಲುತ್ತಿದ್ದ ನಟ ಕಳೆದ ಕೆಲವು ದಿನಗಳ ಹಿಂದೆಯೇ ವಿಕ್ಟೋರಿಯಾಆಸ್ಪತ್ರೆಗೆ  ದಾಖಲಾಗಿದ್ದರು. 

ಹಾಸ್ಯ ಹಾಗೂ ಪೋಷಕ ನಟನ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿರುವ ಶಂಖನಾದ ಅರವಿಂದ್​ ಅವರಿಗೆ  ಶಂಖನಾದ ಎಂಬ ಹೆಸರು ಬರಲು ಒಂದು ಕಾರಣವಿದೆ. ಅವರು ನಾಯಕನಾಗಿ ಅಭಿನಯಿಸಿದ ಸಿನಿಮಾ ಶಂಖನಾದ. 1986ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ  ಗಮನ ಸೆಳೆದ ಕಾರಣದಿಂದ ಅವರ ಹೆಸರಿನ ಜೊತೆಗೆ ಶಂಖನಾದ ಹೆಸರು  ಸೇರಿಕೊಂಡಿತು. ಅಂದಿನಿಂದ ಇವರು ಸ್ಯಾಂಡಲ್​ವುಡ್​ನಲ್ಲಿ ಶಂಖನಾದ ಅರವಿಂದ್​ ಎಂದೇ ಖ್ಯಾತರಾದರು. ಈ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿಯೂ ಸಿಕ್ಕಿತ್ತು.

Veteran Kannada actor Shankanada Aravind, covid death, Sandalwood, Corona Death, ನಟ ಶಂಖನಾದ ಅರವಿಂದ್, Sandalwood,Shankanada Aravind,Coronavirus,ಸ್ಯಾಂಡಲ್‌ವುಡ್‌,ಶಂಖನಾದ ಅರವಿಂದ್,ಕೊರೋನಾ ವೈರಸ್, Sandalwood actor ShankanadaAravind died due to corona ae
ಹಿರಿಯ ನಟ ಶಂಖನಾದ ಅರವಿಂದ್​


ಬೆಟ್ಟದ ಹೂ ಸಿನಿಮಾದಲ್ಲಿ ಶೆರ್ಲಿ ಮೇಡಮ್​ ಮನೆಯಲ್ಲಿ ಕೆಲಸ ಮಾಡುವವರ ಪಾತ್ರದಲ್ಲಿ ಅರವಿಂದ್​ ಅವರು ನಟಿಸಿದ್ದಾರೆ. ಅವರು ಪುನೀತ್​ ಜೊತೆಗೆ ಹೆಜ್ಜೆ ಹಾಕಿರುವ ಹಾಡಿನ ವಿಡಿಯೋ ಇಲ್ಲಿದೆ.

Youtube Video

ಹಿರಿಯ ನಟ ಶಂಖನಾದ ಅರವಿಂದ್​ ಹಾಗೂ ನಿರ್ದೇಶಕ ರೇಣುಕಾ ಶರ್ಮಾ ಅವರ ಅಗಲಿಕೆಗೆ ಕಂಬನಿ ಮಿಡಿದು ನಟ ಜಗ್ಗೇಶ್​ ಅವರು ಸಾಮಾಜಿಕ ಜಾಲತಾಣದಲ್ಲಿ ನೋವಿನಿಂದ ಪೋಸ್ಟ್​ ಮಾಡಿದ್ದಾರೆ. ಏನೆಂದು ಬರೆಯಲಿ, ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ? ಯಾವ ಅಕ್ಷರದಿಂದ ಇವರ ಮನೆಯ ನೊಂದವರನ್ನು ಸಮಾಧಾನ ಪಡಿಸಲಿ? ಒಂದಂತೂ ಹೇಳುವೆ ನಿಮ್ಮಗಳ ಜೊತೆ ನಾನು ಕಳೆದ ಸಮಯ ಮಾತ್ರ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ.




ಸಾರಾ ಅಬೂಬಕ್​ ಅವರ ಸಾರಾ ವಜ್ರ ಸಿನಿಮಾದಲ್ಲೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ ಅರವಿಂದ್​. ಈ ಸಿನಿಮಾದಲ್ಲಿ ನಟಿ ಅನು ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅರವಿಂದ್​ ಅಭಿನಯದ ಕೊನೆಯ ಸಿನಿಮಾ ಇದಾಗಿದೆ. ಇತ್ತೀಚೆಗೆ ಅರವಿಂದ್​ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದವು. ಅದರಲ್ಲೂ ಕೊರೋನಾದಿಂದಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರಂತೆ ಈ ಹಿರಿಯ ನಟ.

ಇದನ್ನೂ ಓದಿ: Vaishnavi: ಮದುವೆಯಾಗೋಕೆ ತುದಿಗಾಲಲ್ಲಿ ನಿಂತಿದ್ದೇನೆ ಎಂದ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ..!

ಜ.23ರಂದು ಶಂಖನಾದ ಅರವಿಂದ್ ಅವರ ಪತ್ನಿ ರಮಾ ಅವರೂ ಸಹ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ರಮಾ ಅವರೂ ಕನ್ನಡ ಸಿನಿ ರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ನಿನ್ನೆಯಷ್ಟೆ ಕವಿರತ್ನ ಕಾಳಿದಾಸ ಸಿನಿಮಾದ ನಿರ್ದೇಶಕ ರೇಣುಕಾ ಶರ್ಮಾ ಅವರೂ ಸಹ ಕೊರೋನಾದಿಂದ ಕೊನೆಯುಸಿರೆಳೆದಿದ್ದರು. ಅದಕ್ಕೂ ಹಿಂದೆ ನಿರ್ಮಾಪಕ ರಾಮು, ಪೋಸ್ಟರ್​ ಮಸ್ತಾನ್​, ಮಿಸ್ಡ್ ಕಾಲ್ ಎಂಬ ಸಿನಿಮಾ ನಿರ್ಮಿಸಿದ್ದ ಚಂದ್ರ, ಅಣ್ಣಯ್ಯ, ಬಿಂದಾಸ್, ರನ್ನ ಸಿನಿಮಾಗಳನ್ನು ನಿರ್ಮಿಸಿದ್ದ ಎಂ. ಚಂದ್ರಶೇಖರ್, ನಿರ್ದೇಶಕ ನವೀನ್​ ಕುಮಾರ್​ ಸೇರಿದಂತೆ ಇನ್ನೂ ಹಲವಾರು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
Published by: Anitha E
First published: May 7, 2021, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories