COVID-19: ಇವಾಂಕಾ ಟ್ರಂಪ್​​​ ಸಹಾಯಕನಿಗೂ ಕೊರೋನಾ ಸೋಂಕು

ಮೊದಲಿಗೆ ಟ್ರಂಪ್​​ ಮಿಲಿಟರಿ ಸಹಾಯಕನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಪ್ರತಿದಿನ ಟ್ರಂಪ್​​ ಕೂಡ ಕೊರೋನಾ ಪರೀಕ್ಷೆಗೆ ಒಳಪಡುವುದಾಗಿ ಹೇಳಿದ್ದರು. ಪರೀಕ್ಷೆ ವೇಳೆ ಸೋಂಕಿತನಾದ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಖಾಸಗಿ ಭದ್ರತಾ ಸಹಾಯಕನೊಂದಿಗೆ ಟ್ರಂಪ್​ ತೀರಾ ಹತ್ತಿರದ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿದು ಬಂದಿತ್ತು.

ಇವಾಂಕಾ ಟ್ರಂಪ್​

ಇವಾಂಕಾ ಟ್ರಂಪ್​

 • Share this:
  ನವದೆಹಲಿ(ಮೇ.09): ಜಗತ್ತಿನಾದ್ಯಂತ ಕೊರೋನಾ ವೈರಸ್​​​ ಸೋಂಕಿನ ಆರ್ಭಟ ಮುಂದುವರಿದಿದೆ. ಈ ಮಾರಕ ಸೋಂಕಿಗೆ ಸಾಮಾನ್ಯರು ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು ಗುರಿಯಾಗುತ್ತಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ಗೂ ಕೊರೋನಾ ಬಿಟ್ಟಿಲ್ಲ ಎನ್ನಲಾಗಿತ್ತು. ಇದಾದ ಬಳಿಕ ತನ್ನ ಮಗಳಾದ ಇವಾಂಕಾ ಟ್ರಂಪ್​​ ಕೂಡ ಕೊರೋನಾ ಸೋಂಕು ಪರೀಕ್ಷೆಗೆ ಒಳಗಾಗಿದ್ದಾರೆ ಎಂಬ ವರದಿಗಳು ಬಂದಿವೆ. ಈ ಬೆನ್ನಲ್ಲೇ ಇವಾಂಕಾರನ್ನು ಭೇಟಿಯಾಗಿದ್ದ ಆಸ್ಟ್ರೆಲೀಯಾ ಗೃಹ ಸಚಿವರಿಗೆ ಸೋಂಕು ತಗುಲಿರುವ ಆಘಾತಕಾರಿ ಸುದ್ದಿ ಹೊರಬಿದ್ದಿತ್ತು. ಆದರೀಗ ಇವಾಂಕಾ ಟ್ರಂಪ್ ಸಹಾಯಕನಿಗೂ ಕೊರೊನಾ ಸೊಂಕು ಬಂದಿದೆ ಎನ್ನಲಾಗಿದೆ.

  ಹೌದು, ಇವಾಂಕಾ ಟ್ರಂಪ್​​ ಸಹಾಯಕನಿಗೆ ಕೋವಿಡ್​​-19 ಪರೀಕ್ಷೆ ವೇಳೆ ಸೋಂಕು ಧೃಡಪಡ್ಡಿದೆ. ಹೀಗೆಂದು ಅಮೆರಿಕಾದ ಶ್ವೇತಭವನದಿಂದಲೇ ಅಧಿಕೃತ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಇದುವರೆಗೂ ಶ್ವೇತಭವನದ ಮೂವರು ಸಿಬ್ಬಂದಿಗೆ ಸೋಂಕು ಬಂದತಾಗಿದೆ.

  ಮೊದಲಿಗೆ ಟ್ರಂಪ್​​ ಮಿಲಿಟರಿ ಸಹಾಯಕನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಪ್ರತಿದಿನ ಟ್ರಂಪ್​​ ಕೂಡ ಕೊರೋನಾ ಪರೀಕ್ಷೆಗೆ ಒಳಪಡುವುದಾಗಿ ಹೇಳಿದ್ದರು. ಪರೀಕ್ಷೆ ವೇಳೆ ಸೋಂಕಿತನಾದ ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಖಾಸಗಿ ಭದ್ರತಾ ಸಹಾಯಕನೊಂದಿಗೆ ಟ್ರಂಪ್​ ತೀರಾ ಹತ್ತಿರದ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿದು ಬಂದಿತ್ತು.

  ಇದನ್ನೂ ಓದಿ: ಬೆಂಗಳೂರೊಂದರಲ್ಲೇ ಇಂದು12 ಕೊರೋನಾ ಕೇಸ್ ಪತ್ತೆ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ

  ಆತನೊಂದಿಗೆ ನಾನು ಹತ್ತಿರದ ಸಂಪರ್ಕ ಹೊಂದಿರಲಿಲ್ಲ. ವ್ಯಕ್ತಿ ಯಾರು ಎಂಬುದು ನನಗೆ ಗೊತ್ತಿದೆ. ಆದರೂ ಸುರಕ್ಷತೆ ದೃಷ್ಟಿಯಿಂದ ನಾನು, ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಶ್ವೇತಭವನದ ಇತರ ಸಿಬ್ಬಂದಿಗಳು ಪ್ರತಿದಿನ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದರು.

  ಅದರಂತೆಯೇ ನಾನು ಮತ್ತು ಮೈಕ್ ಪೆನ್ಸ್ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೇವೆ. ಇಲ್ಲಿಯವರೆಗೂ ವರದಿಯಲ್ಲಿ ನೆಗೆಟಿವ್ ಬಂದಿದೆ. ಇನ್ಮುಂದೆ ವಾರಕ್ಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲಿದ್ದೇವೆ ಎಂದು ಟ್ರಂಪ್​​ ಹೇಳಿದ್ದರು.
  First published: