Covid-19 | ಅತ್ತರೆ ಕೊರೊನಾ ಬರಲ್ಲ, ಅಳಲು ಅಡ್ಡಿಯಿಲ್ಲ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕಣ್ಣೀರಿನ ಬಗ್ಗೆ ಕಳವಳ ಪಡುವ ಅಗತ್ಯ ಇಲ್ಲ. ಕೊರೋನಾ ಭಯದಿಂದ ಯಾರಾದರೂ ಕಣ್ಣೀರಿಡುತ್ತಿದ್ದರೆ ಅವರ ಕಣ್ಣೀರು ಒರೆಸಲು ಅಡ್ಡಿ ಇಲ್ಲ. ಹಾಗಂತ ನಿಮ್ಮ ಕೈ ಸ್ವಚ್ಛ ಮಾಡಿಕೊಳ್ಳುವುದನ್ನು ಮರೆಯದಿರಿ.

  • News18
  • Last Updated :
  • Share this:

    ಸಿಂಗಾಪುರ್: ಕೊರೋನಾ ವೈರಸ್ ಹೇಗೆಲ್ಲಾ ಹರಡುತ್ತದೆ ಎಂಬುದನ್ನು ಸಾಕಷ್ಟು ಮಾಧ್ಯಮಗಳು ಸಾಕಷ್ಟು ಬಾರಿ ಹೇಳಿವೆ. ಆದರೂ ಜನರಿಗೆ ಅಲ್ಲಲ್ಲಿ ಸಣ್ಣ ಸಣ್ಣ ಅನುಮಾನಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಎಂಜಲಿನಿಂದ ಕೊರೋನಾ ವೈರಸ್ ಹರಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂಥದ್ದೆ. ಇದು ಹೊರತಪಡಿಸಿ ರಕ್ತ, ಕಣ್ಣೀರು, ಬೆವರು ಇತ್ಯಾದಿಗಳಿಂದ ಕೊರೋನಾ ಹರಡಬಲ್ಲುದಾ ಎಂಬುದು ಅನೇಕರ ಶಂಕೆ. ವೈದ್ಯಕೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಈ ಮೇಲಿನ ದೈಹಿಕ ಧ್ರವಗಳಿಂದ ವೈರಸ್ ಹರಡವುದಿಲ್ಲವಂತೆ. ಕಣ್ಣೀರಿನಲ್ಲಿ ಕೊರೋನಾ ವೈರಸ್ ಇರುವುದಿಲ್ಲ ಎಂದು ಈ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.


    ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು ಕೋವಿಡ್-19 ರೋಗಿಗಳ ಕಣ್ಣೀರಿನ ಸ್ಯಾಂಪಲ್​​ಗಳನ್ನ ಪಡೆದು ಈ ಅಧ್ಯಯನ ನಡೆಸಿದ್ದಾರೆ. ಈ ರೋಗಿಗಳಲ್ಲಿ ಮೊದಲು ರೋಗ ಲಕ್ಷಣ ಕಾಣಿಸಿಕೊಂಡು 20 ದಿನ ನಂತರ ಚೇತರಿಸಿಕೊಳ್ಳುವವರೆಗೆ ಕಣ್ಣೀರಿನ ಮಾದರಿಗಳನ್ನು ಪಡೆಯಲಾಗಿತ್ತು. ಈ ಎರಡು ವಾರಗಳ ಅವಧಿಯಲ್ಲಿ ಕಣ್ಣೀರಿನ ಸ್ಯಾಂಪಲ್​ಗಳಲ್ಲಿ ಯಾವುದೇ ವೈರಸ್ ಗೋಚರವಾಗಿಲ್ಲ.


    ಇದನ್ನೂ ಓದಿ: ಸ್ಪೇನ್‌ನಲ್ಲಿ 4,000 ಗಡಿ ದಾಟಿದ ಕೊರೋನಾ ಸಾವಿನ ಸಂಖ್ಯೆ; ಒಂದೇ ದಿನದಲ್ಲಿ 655 ಜನ ಮೃತ!


    ಆದ್ದರಿಂದ ಕಣ್ಣೀರಿನ ಬಗ್ಗೆ ಕಳವಳ ಪಡುವ ಅಗತ್ಯ ಇಲ್ಲ. ಕೊರೋನಾ ಭಯದಿಂದ ಯಾರಾದರೂ ಕಣ್ಣೀರಿಡುತ್ತಿದ್ದರೆ ಅವರ ಕಣ್ಣೀರು ಒರೆಸಲು ಅಡ್ಡಿ ಇಲ್ಲ. ಹಾಗಂತ ನಿಮ್ಮ ಕೈ ಸ್ವಚ್ಛ ಮಾಡಿಕೊಳ್ಳುವುದನ್ನು ಮರೆಯದಿರಿ. ಕಣ್ಣೀರು ಒರೆಸುವ ಮುನ್ನ, ಕಣ್ಣೀರು ಒರೆಸಿದ ನಂತರ ನಿಮ್ಮ ಕೈ ಶುಭ್ರಗೊಳಿಸಿಕೊಳ್ಳಿ. ಇಲ್ಲದಿದ್ದರೆ ವೈರಸ್ ಹರಡೀತು.


    ಸೋಂಕು ತಗುಲಿರುವ ವ್ಯಕ್ತಿ ಮಾತನಾಡುವಾಗ ಅಥವಾ ಕೆಮ್ಮುವಾಗ ಅಥವಾ ಶೀನುವಾಗ ಬಾಯಿ ಮತ್ತು ಮೂಗಿನಿಂದ ಧ್ರವದ ಮೂಲಕ ಕೊರೋನಾ ವೈರಸ್ ಹೊರಬೀಳುತ್ತದೆ. ಸಮೀಪದಲ್ಲಿರುವ ವ್ಯಕ್ತಿಗಳ ಬಾಯಿ, ಮೂಗು ಅಥವಾ ಕಣ್ಣಿನ ಮೂಲಕ ಈ ಧ್ರವ ಒಳ ಸೇರಬಹುದು. ಆ ಮೂಲಕ ವೈರಸ್ ಇನ್ನೊಬ್ಬ ವ್ಯಕ್ತಿಯ ದೇಹ ಪ್ರವೇಶ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಕೈಗೆ ವೈರಸ್ ಅಂಟಿಕೊಂಡು ನೀವು ಕಣ್ಣು, ಬಾಯಿ ಅಥವಾ ಮೂಗು ಮುಟ್ಟಿಕೊಂಡರೆ ದೇಹ ಪ್ರವೇಶ ಮಾಡುತ್ತದೆ. ಈ ವಿಚಾರಗಳ ಬಗ್ಗೆ ಜನರು ಎಚ್ಚರದಿಂದರಬೇಕು ಎನ್ನುತ್ತಾರೆ ತಜ್ಞರು.

    Published by:Vijayasarthy SN
    First published: